More

    ಅನೇಕ ದೇಶಗಳಲ್ಲಿ ರಾಮ ಪೂಜನೀಯ: ಆದರ್ಶ ಗೋಖಲೆ

    ಶಿವಮೊಗ್ಗ: ಶ್ರೀ ರಾಮಚಂದ್ರ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ಅನೇಕ ದೇಶಗಳಲ್ಲಿ ಪೂಜನೀಯ ಸ್ಥಾನದಲ್ಲಿದ್ದಾನೆ. ಶ್ರೀರಾಮಚಂದ್ರ ನಡೆದ ಹಾದಿಯನ್ನು, ಆದರ್ಶವನ್ನು ಇಂದಿಗೂ ಅಲ್ಲಿ ಅನುಸರಿಸುತ್ತಾರೆ ಎಂದು ಅಧ್ಯಾತ್ಮ ಚಿಂತಕ ಆದರ್ಶ ಗೋಖಲೆ ಹೇಳಿದರು.

    ರಾಮನವಮಿ ಅಂಗವಾಗಿ ರವೀಂದ್ರ ನಗರ ಗಣಪತಿ ದೇವಸ್ಥಾನದಲ್ಲಿ ಭಜನಾ ಪರಿಷತ್, ಅರ್ಚಕ ವೃಂದ ಹಾಗೂ ಸಂಸ್ಕಾರ ಪ್ರತಿಷ್ಠಾನದಿಂದ ಏರ್ಪಡಿಸಿರುವ ಮೂರು ದಿನಗಳ ರಾಮೋತ್ಸವದಲ್ಲಿ ರಾಮಾಯಣದ ಆದರ್ಶ ವಿಷಯ ಕುರಿತು ಭಾನುವಾರ ವಿಶೇಷ ಉಪನ್ಯಾಸ ನೀಡಿದರು.
    ಥೈಲ್ಯಾಂಡ್‌ನಲ್ಲಿ ಶ್ರೀ ರಾಮಚಂದ್ರ ಪರಮೋಚ್ಛ ಆದರ್ಶ. ಅವರಿಗೆ ಸಮಸ್ಯೆ ಎದುರಾದಾಗ ನಮ್ಮ ಜಾಗದಲ್ಲಿ ಶ್ರೀ ರಾಮನಿದ್ದರೆ ಯಾವ ರೀತಿ ನಿರ್ಣಯ ಕೈಗೊಳ್ಳುತ್ತಿದ್ದ ಎಂದು ಯೋಚಿಸುತ್ತಾರೆ. ದುತ್ತನೆ ಕಷ್ಟವೊಂದು ಪ್ರತ್ಯಕ್ಷವಾದರೆ ರಾಮ ಇದನ್ನು ಹೇಗೆ ಪರಿಹರಿಸಿಕೊಳ್ಳುತ್ತಿದ್ದ ಎಂದು ಚಿಂತಿಸುತ್ತಾರೆ. ಸಪ್ತಕಾಂಡ ಸಹಿತ ರಾಮಪುರಾಣವನ್ನು ರಾಷ್ಟ್ರೀಯ ಗ್ರಂಥವೆಂದು ಅಂಗೀಕರಿಸಿದ್ದಾರೆ. ಇವರ ಹೆಸರಿನ ಹಿಂದೆ ಇಲ್ಲವೇ ಮುಂದೆ ರಾಮನ ಹೆಸರು ಇರುತ್ತದೆ ಎಂದು ತಿಳಿಸಿದರು.
    ಕಾಂಬೋಡಿಯಾದ ಜನರ ಬದುಕಿನಲ್ಲಿ ಶ್ರೀರಾಮ ಸದಾ ಆದರ್ಶ. ಇಂಡೋನೇಷ್ಯಾ ಕೂಡಾ ರಾಮನ ಆರಾಧಕ ರಾಷ್ಟ್ರ. ರಾಮನ ಕತೆಯನ್ನು ಆಪ್ತವಾಗಿ ಗುರುತಿಸುತ್ತಾರೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲೂ ರಾಮನ ಕತೆಯನ್ನು ರಚಿಸಿದ್ದಾರೆ. ಅವರೆಲ್ಲರಿಗೂ ಆದರ್ಶವಾಗಿ ಕಂಡು ಬಂದಿದ್ದರು. ವಾಲ್ಮೀಕಿ ರಾಮಾಯಣವೇ ಕಾಲಘಟ್ಟಕ್ಕೆ ತಕ್ಕಂತೆ ಅದರಲ್ಲಿನ ಪಾತ್ರಗಳು, ಸನ್ನಿವೇಶಗಳು ಬದಲಾಗಿ ಹೊಸ ರಾಮಾಯಣ ಸೃಷ್ಟಿಯಾದವು ಎಂದು ಹೇಳಿದರು.
    ಶ್ರೀ ರಾಮಚಂದ್ರ ಭವಸಾಗರ ದಾಟಿಸುವವನು. ಹೀಗಾಗಿ ರಾಮತಾರಕ ಮಂತ್ರವನ್ನು ನಿತ್ಯ ಪಠಿಸಿದಾಗ ಕೆಟ್ಟ ಶಕ್ತಿಗಳು ಸುಳಿಯಲು ಸಾಧ್ಯವಿಲ್ಲ. ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನ ನೀಡಿದರೂ ಕೆಲ ಕೆಟ್ಟ ಶಕ್ತಿಗಳು ಬರಲಿಲ್ಲ. ರಾಮನ ಹೆಸರು ಇದ್ದಾಗ ಕೆಟ್ಟ ಶಕ್ತಿಗಳು ಹತ್ತಿರ ಸುಳಿಯುವುದಿಲ್ಲ ಎಂದರು.
    ರಾಮರಕ್ಷೆಯ ಮಂತ್ರವವನ್ನು ಆಹ್ವಾನ ಮಾಡಿಕೊಂಡು ತಾಯತವನ್ನು ಕಟ್ಟಿಕೊಳ್ಳುವ ಪರಂಪರೆ ಉತ್ತರ ಭಾರತದಲ್ಲಿದೆ. ರಾಮನನ್ನು ಐತಿಹಾಸಿಕ ಪುರುಷನನ್ನಾಗಿ ನೋಡುವ ಬದಲು ಆತನ ಕುರಿತಾದ ಮಂತ್ರ, ಆತನ ಹೆಸರಿನಲ್ಲಿ ಕಟ್ಟಿಸಿಕೊಂಡ ತಾಯತ ಶ್ರೀರಕ್ಷೆ ಎಂಬ ನಂಬಿಕೆ ಉತ್ತರ ಭಾರತೀಯರಲ್ಲಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts