More

    ಶರಣಬಸವೇಶ್ವರರ ಪುರಾಣ ಮಹಾಮಂಗಲ

    ಯಲಬುರ್ಗಾ: ಪಟ್ಟಣದ ಶ್ರೀ ಸಿದ್ಧರಾಮೇಶ್ವರ ಸಂಸ್ಥಾನ ಹಿರೇಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ತಿಂಗಳು ಕಾಲ ಹಮ್ಮಿಕೊಂಡಿದ್ದ ಶರಣಬಸವೇಶ್ವರರ ಪುರಾಣ ಶುಕ್ರವಾರ ಮಹಾಮಂಗಲಗೊಂಡಿತು.

    ಇದನ್ನೂ ಓದಿ: ಪುರಾಣ ಪ್ರವಚನ ಆಲಿಕೆಯಿಂದ ಪುಣ್ಯಪ್ರಾಪ್ತಿ

    ಬೆಳಗ್ಗೆ ಶ್ರೀ ಸಿದ್ಧರಾಮೇಶ್ವರ ಕತೃ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಶರಣಬಸವೇಶ್ವರ ಭಾವಚಿತ್ರ, ಮಾನಿಹಳ್ಳಿಯ ಪುರವರ್ಗ ಮಠದ ಶ್ರೀ ಮಳಿಯೋಗೇಶ್ವರ ಸ್ವಾಮೀಜಿಗಳ ಪಲ್ಲಕ್ಕಿ ಉತ್ಸವ ವಾದ್ಯವೃಂದ, ಮಹಿಳೆಯರಿಂದ ಕುಂಭೋತ್ಸವದೊಂದಿಗೆ ಮೆರವಣಿಗೆ ಪ್ರಾರಂಭಗೊಂಡು ಚೌಕಿಮಠ ತಲುಪಿತು. ಸಹಸ್ರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

    ಮಾನಿಹಳ್ಳಿಯ ಪುರವರ್ಗ ಮಠದ ಶ್ರೀ ಮಳಿಯೋಗೇಶ್ವರ ಸ್ವಾಮೀಜಿ ಮಾತನಾಡಿ, ಶ್ರಾವಣ ಮಾಸ ಪ್ರತಿಯೊಬ್ಬರಿಗೂ ಶ್ರೇಷ್ಠವಾಗಿದೆ. ಶಿವಶರಣರ ಆಚಾರ ವಿಚಾರಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬಾಳಬೇಕು.

    ದಾನ ಧರ್ಮದಂಥ ಪುಣ್ಯದ ಕಾರ್ಯ ಮಾಡಬೇಕು. ಧಾರ್ಮಿಕ ಮನೋಭಾವ ಬೆಳೆಸಿಕೊಳ್ಳಬೇಕು ಸಂಸ್ಥಾನ ಹಿರೇಮಠವು ಧಾರ್ಮಿಕ ಪರಂಪರೆಗಳಲ್ಲಿ ಸಮಾಜಮುಖಿ ಕಾರ್ಯ ಕೈಗೊಂಡಿರುವುದು ಭಕ್ತಿ, ಭಾವೈಕ್ಯತೆಗೆ ಸಾಕ್ಷಿ ಎಂದರು. ಸಂಸ್ಥಾನ ಹಿರೇಮಠದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

    ಅಮರಪ್ಪ ಕಲಬುರ್ಗಿ, ಮಲ್ಲಿಕಾರ್ಜುನ ತೆಂಗಿನಕಾಯಿ, ಸಿದ್ರಾಮೇಶ ಬೇಲೇರಿ, ಸಂಗಪ್ಪ ರಾಮತಾಳ,
    ವಿರೂಪಾಕ್ಷಪ್ಪ ಗಂಧದ, ಪಿ.ಟಿ.ಉಪ್ಪಾರ, ಮಂಜುನಾಥ ಬೇಲೇರಿ, ಮಲ್ಲೇಶಗೌಡ ಮಾಲಿಪಾಟೀಲ್,
    ಎಸ್.ಡಿ.ಅಪ್ಪಾಜಿ, ಈರಪ್ಪ ಹೊಸಳ್ಳಿ, ದಾನನಗೌಡ ತೊಂಡಿಹಾಳ, ಶರಣಪ್ಪ ಕೊಡಗಲಿ, ಪ್ರಭುರಾಜ ಕಲಬುರ್ಗಿ, ಪ್ರದೀಪ ಕರಂಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts