More

    ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ಕೇಳಿ ಬಂತು ಲಿಂಗಾಯತ ಸಿಎಂ ಕೂಗು

    ಬೆಂಗಳೂರು: ಸಂಪೂರ್ಣ ಬಹುಮತದೊಂದಿಗೆ ಸ್ವತಂತ್ರ ಸರ್ಕಾರ ರಚಿಸುತ್ತೇವೆ ಎಂದು ಹೇಳಿಕೊಂಡು ಬರುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಮತದಾನೋತ್ತರ ಸಮೀಕ್ಷೆಗಳು ಹೊಸ ಹುರುಪು ತಂದಿವೆ. ಮತದಾನ ಪ್ರಕ್ರಿಯೆ ಮುಕ್ತಾಯವಾಗುತ್ತಿದ್ದಂತೆ ಹೊರಬಿದ್ದ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುವ ಸಾಧ್ಯತೆ ಇದೆ ಎಂದು ಹೇಳಿವೆ. ಇದು ಕಾಂಗ್ರೆಸ್ ನಾಯಕರಿಗೆ ಬೂಸ್ಟರ್ ಡೋಸ್ ನೀಡಿದಂತಾಗಿದೆ.

    ಇದನ್ನೂ ಓದಿ: ಏಕನಾಥ್​ ಸಿಂಧೆ ಬಣಕ್ಕೆ ಸುಪ್ರೀಂಕೋರ್ಟ್​ನಿಂದ ಬಿಗ್​ ರಿಲೀಫ್​: ಉದ್ಧವ್​ ಠಾಕ್ರೆ ಬಣಕ್ಕೆ ನೈತಿಕ ಗೆಲುವು

    ಮತದಾನೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿ ಹೊರಬರುತ್ತಿದ್ದಂತೆ ಪಕ್ಷದ ರಾಜಕೀಯ ಚಟುವಟಿಕೆಗಳು ರಂಗೇರಿವೆ. ಕಾಂಗ್ರೆಸ್​​ನ ರಾಜ್ಯ ಉಸ್ತಾವಾರಿ ವಹಿಸಿಕೊಂಡಿರುವ ರಣ​ದೀಪ್ ಸುರ್ಜೇವಾಲ ಸೇರಿದಂತೆ ಪಕ್ಷದ ನಾಯಕರು ಮೇಲಿಂದ ಮೇಲೆ ಸಭೆ ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ ಕಾಂಗ್ರೆಸ್ ಪಾಳಯದಲ್ಲಿ ಲಿಂಗಾಯತ ಸಿಎಂ ಕೂಗು ಕೇಳಿ ಬಂದಿದೆ.

    ಕಾಂಗ್ರೆಸ್​ನಲ್ಲೂ ಕೇಳಿ ಬಂತು ಲಿಂಗಾಯತ ಸಿಎಂ ಕೂಗು

    ಮತದಾನೋತ್ತರ ಸಮೀಕ್ಷೆಗಳು ನಿಜವಾಗಿ, ಒಂದು ವೇಳೆ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರಿದರೆ ಈ ಬಾರಿ ವೀರಶೈವ ಲಿಂಗಾಯತ ಅಭ್ಯರ್ಥಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಒತ್ತಾಯಿಸಿದ್ದಾರೆ.

    ಇದನ್ನೂ ಓದಿ: ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೂ ಹೋದವನಲ್ಲ: ಸಿದ್ದರಾಮಯ್ಯ ವಿರುದ್ಧ ಜಿ.ಟಿ. ದೇವೇಗೌಡ ವಾಗ್ದಾಳಿ

    ಸಿಎಂ ಹುದ್ದೆ ನೀಡುವಂತೆ ಹಿಂದೆಯೂ ಬೇಡಿಕೆ ಇಟ್ಟಿದ್ದೆ!

    ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ನಿರ್ಲಕ್ಷಿಸಿರುವುದರಿಂದ ಈ ಬಾರಿ ಲಿಂಗಾಯತ ಮತಗಳು ರಾಜ್ಯದಲ್ಲಿ ಕಾಂಗ್ರೆಸ್​ನತ್ತ ವಾಲಿವೆ. ಇದು ಕಾಂಗ್ರೆಸ್ ಸರಳ ಬಹುಮತ ಪಡೆಯಲು ಸಹಕಾರಿಯಾಗಿದೆ. ಹೀಗಾಗಿ ವೀರಶೈವರಿಗೆ ಸಿಎಂ ಹುದ್ದೆ ನೀಡುವಂತೆ ಹಿಂದೆಯೂ ಬೇಡಿಕೆ ಇಟ್ಟಿದ್ದೆ. ಈಗಲೂ ಅದನ್ನೇ ಪುನರುಚ್ಚರಿಸುವೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿಕೊಂಡಿದ್ದಾರೆ.

    ಈ ಒಂದು ನಿರ್ಧಾರ ಬಿಜೆಪಿಗೆ ದುಬಾರಿಯಾಯ್ತು!

    40% ಭ್ರಷ್ಟಾಚಾರ ಹಾಗೂ ಹಿರಿಯ ನಾಯಕ ಬಿಎಸ್​ವೈ ಅವರನ್ನು ಕಡೆಗಣನೆ ಮಾಡಿದ್ದು ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ದುಬಾರಿಯಾಯಿತು. ಕಾಂಗ್ರೆಸ್‌ಗೆ 130 ಸ್ಥಾನಗಳು ಬರುವ ವಿಶ್ವಾಸವಿದೆ. ಹಾಗೊಂದು ವೇಳೆ ಅಧಿಕಾರ ರಚನೆಗೆ ಸೀಟುಗಳ ಕೊರತೆ ಎದುರಾದರೆ ಜಾತ್ಯತೀತ ಪಕ್ಷವಾದ ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ಸೂಕ್ತ. ಈ ನಿಟ್ಟಿನಲ್ಲಿ ಹೈಕಮಾಂಡ್‌ ನಿರ್ಧಾರ ಕೈಗೊಳ್ಳಲಿದೆ ಎಂದು ಶಾಮನೂರು ಶಿವಶಂಕರಪ್ಪ ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts