More

    ತಮ್ಮದೇ ನಿರ್ಮಾಣದ “ಲೇಡಿಸ್​ ನಾಟ್​ ಅಲೌಡ್” ಸಿನಿಮಾ ವೀಕ್ಷಿಸದಂತೆ ಶಕೀಲಾ ಎಚ್ಚರಿಕೆ!​

    ಹೈದರಾಬಾದ್​: ಕರೊನಾ ವೈರಸ್​ ಬಂದ ಮೇಲಂತೂ ಚಿತ್ರರಂಗದ ಬಹುತೇಕ ಕೆಲಸಗಳು ಸ್ಥಗಿತಗೊಂಡಿವೆ. ಚಿತ್ರಮಂದಿರಗಳಂತೂ ಇನ್ನು ತೆರೆದೇ ಇಲ್ಲ. ಹೀಗಾಗಿ ಅನೇಕರು ಒಟಿಟಿ ವೇದಿಕೆಯಲ್ಲಿ ಚಿತ್ರ ಬಿಡುಗಡೆಗೆ ಮುಂದಾಗಿದ್ದು, ಆ ಸಾಲಿಗೆ ಇದೀಗ ನಟಿ ಶಕೀಲಾ ಅವರು ಸೇರಿಕೊಂಡಿದ್ದಾರೆ.

    ಇದನ್ನೂ ಓದಿ: ಪುರುಷರ ವಾರ್ಡ್​ನಲ್ಲಿ ಒಳ ಉಡುಪು ಕಾಣುವಂತೆ ಪಿಪಿಇ ಗೌನ್ ತೊಟ್ಟಿದ್ದ ನರ್ಸ್​ಗೆ ಒಲಿಯಿತು ಅದೃಷ್ಟ!

    ತಮ್ಮದೇ ನಿರ್ಮಾಣದ “ಲೇಡಿಸ್​ ನಾಟ್​ ಅಲೌಡ್​” ಚಿತ್ರವನ್ನು ಸಿನಿಮಾ ಹೆಸರಿನಲ್ಲೇ ವೆಬ್​ಸೈಟ್​ ತೆರೆದು ಶಕೀಲಾ ಆ್ಯಂಡ್​ ಟೀಮ್ ಬಿಡುಗಡೆ ಮಾಡಿದೆ. ಇದಕ್ಕೂ ಮುನ್ನ ಯೂಟ್ಯೂಬ್​ನಲ್ಲಿ ವಿಡಿಯೋ ಸಂದೇಶವನ್ನು ಹರಿಬಿಟ್ಟಿರುವ ಶಕೀಲಾ, ಎಲ್ಲರೂ ಚಿತ್ರ ನೋಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಮಹಿಳೆಯರು ಮಾತ್ರ ಚಿತ್ರವನ್ನು ನೋಡಬೇಡಿ ಎಂದು ಎಚ್ಚರಿಸಿದ್ದಾರೆ.

    ಸಾಕಷ್ಟು ಸಾಲ ಪಡೆದು ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರೀಕರಣ ಎರಡು ವರ್ಷದ ಹಿಂದೆ ಮುಗಿದತ್ತು. ಆದರೆ, ಸೆನ್ಸಾರ್​ ಇನ್ನೂ ಮುಗಿದಿರಲಿಲ್ಲ. ಇದರ ನಡುವೆ ಕರೊನಾ ಮಹಾಮಾರಿಯಿಂದಾಗಿ ಮತ್ತೆ ಮುಂದಕ್ಕೆ ಹೋಯಿತು. ಇದೀಗ ಚಿತ್ರಮಂದಿರಗಳು ಮುಚ್ಚಿರುವುದರಿಂದ ಒಟಿಟಿಯಲ್ಲಿ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಊಟಕ್ಕೆ ಕರೆದ ಅಮ್ಮನ ತಲೆಗೆ ಗುಂಡು ಹೊಡೆದ ಮಗ; ಕಾರಣ ತೀರ ಕ್ಷುಲ್ಲಕ

    ತಮ್ಮದೇ ನಿರ್ಮಾಣದ "ಲೇಡಿಸ್​ ನಾಟ್​ ಅಲೌಡ್" ಸಿನಿಮಾ ವೀಕ್ಷಿಸದಂತೆ ಶಕೀಲಾ ಎಚ್ಚರಿಕೆ!​

    ಅಂದಹಾಗೆ ಲೇಡಿಸ್​ ನಾಟ್​ ಅಲೌಡ್​ ಚಿತ್ರ ಅಡಲ್ಟ್​ ಕಾಮಿಡಿ-ಹಾರರ್​ ಚಿತ್ರವಾಗಿದೆ. ಸಾಯಿ ರಾಮ್​ ದಾಸರಿ ಎಂಬುವರು ನಿರ್ದೇಶಿಸಿದ್ದು, ಶಕೀಲಾ ಅವರೇ ಬಂಡವಾಳ ಹೂಡಿದ್ದಾರೆ. ಲೇಡಿಸ್​ ನಾಟ್ ಅಲೌಡ್​ ವೆಬ್​ಸೈಟ್​ನಲ್ಲಿ 50 ರೂ. ಪಾವತಿಸಿ ಚಿತ್ರವನ್ನು ವೀಕ್ಷಿಸಬಹುದಾಗಿದೆ. ಜುಲೈ 20 ರಾತ್ರಿ 8 ಗಂಟೆಗೆ ಚಿತ್ರ ಬಿಡುಗಡೆಯಾಗಿದೆ. (ಏಜೆನ್ಸೀಸ್​)

    ಸೂಪ್​ನಲ್ಲಿ ಸತ್ತ ಬಾವಲಿ ಕಂಡ ಕೂಡಲೇ ಆಸ್ಪತ್ರೆಗೆ ಓಡಿದ ಕುಟುಂಬಕ್ಕೆ ಕಾದಿತ್ತು ಸರ್ಪ್ರೈಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts