ಕಾಜೋಲ್ ಜತೆ ನಟಿಸಬೇಡ … ಹಾಗಂತ ಅಮೀರ್‌ಗೆ ಶಾರೂಖ್ ಹೇಳಿದ್ದು ಯಾಕೆ ಗೊತ್ತಾ?

blank

ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಶಾರೂಖ್ ಖಾನ್ ಮತ್ತು ಕಾಜೋಲ್ ಜೋಡಿ ಸಹ ಒಂದು. ‘ಬಾಜಿಗರ್’ ಚಿತ್ರದಲ್ಲಿ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ ಈ ಜೋಡಿ, ನಂತರ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಜತೆಯಾಯಿತು. ಆದರೆ, ‘ಬಾಜಿಗರ್’ ಸಂದರ್ಭದಲ್ಲಿ ನಟಿಸುವಾಗ, ಇಬ್ಬರ ಮಧ್ಯೆ ಅಷ್ಟೇನೂ ಗೆಳೆತನ ಇರಲಿಲ್ಲವಂತೆ. ಅಷ್ಟೇ ಅಲ್ಲ, ಕಾಜೋಲ್ ಜತೆಗೆ ನಟಿಸಬೇಡ ಎಂದು ಅಮೀರ್ ಖಾನ್‌ಗೂ ಒಮ್ಮೆ ಶಾರೂಖ್ ಖಾನ್ ಹೇಳಿದ್ದರಂತೆ.

blank

ಈ ಕುರಿತು ಮಾತನಾಡಿರುವ ಶಾರೂಖ್ ಖಾನ್, ‘‘ಬಾಜಿಗರ್’ ಚಿತ್ರದ ಸಂದರ್ಭದಲ್ಲಿ ನಮ್ಮಿಬ್ಬರ ಮಧ್ಯೆ ಅಷ್ಟೇನೂ ಗೆಳತನ ಇರಲಿಲ್ಲ. ಇನ್ ಫ್ಯಾಕ್ಟ್ ಒಮ್ಮೆ ಅಮೀರ್ ಖಾನ್ ಫೋನ್ ಮಾಡಿ, ಕಾಜೋಲ್ ಜತೆಗೆ ನಟಿಸುವ ಆಸೆ ವ್ಯಕ್ತಪಡಿಸಿದ್ದರು. ನಾನೇ ಬೇಡ ಅಂದಿದ್ದೆ. ಆಕೆಗೆ ಕೆಲಸದಲ್ಲಿ ಫೋಕಸ್ ಇಲ್ಲ ಎಂದು ಹೇಳಿದ್ದೆ. ಅದೇ ದಿನ ಚಿತ್ರದ ಒಂದಿಷ್ಟು ದೃಶ್ಯಗಳನ್ನು ನೋಡುವ ಅವಕಾಶ ಸಿಕ್ಕಿತು. ಚಿತ್ರ ನೋಡಿ, ಕಾಜೋಲ್ ಎಂತಹ ಅದ್ಭುತ ನಟಿ ಎಂದು ಗೊತ್ತಾಯಿತು. ಆ ನಂತರ ಅಮೀರ್‌ಗೂ ಫೋನ್ ಮಾಡಿ ಹೇಳಿದೆ. ಬೇರೆ ಏನಾದರೂ ಇರಲಿ, ಸ್ಕ್ರೀನ್ ಮೇಲೆ ಆಕೆ ಸಖತ್ತಾಗಿ ಕಾಣಿಸುತ್ತಾಳೆ ಅಂತ’ ಎಂದು ಹೇಳಿಕೊಂಡಿದ್ದಾರೆ ಶಾರೂಖ್.

ಇನ್ನು ಕಾಜೋಲ್‌ಗೂ ಶಾರೂಖ್ ಬಗ್ಗೆ ಅಷ್ಟೇನೂ ಒಳ್ಳೆಯ ಅಭಿಪ್ರಾಯಗಳಿರಲಿಲ್ಲವಂತೆ. ‘ಆಗ ನಮ್ಮ ನಡುವೆ ಅಷ್ಟೇನೂ ಗೆಳೆತನ ಇರಲಿಲ್ಲ. ನಾನೊಮ್ಮೆ ಶಾರೂಖ್ ಮೇಕಪ್ ಬಾಯ್ ಜತೆಗೆ ಮಾತಾಡುತ್ತಾ ಇದ್ದೆ. ನನ್ನ ಮಾತು ಕೇಳಿದ ಶಾರೂಖ್, ಯಾರದು ಅಷ್ಟೊಂದು ಮಾತಾಡೋದು, ನನ್ನ ತಲೆ ಸಿಡಿಯುತ್ತಿದೆ ಎಂದಿದ್ದರು. ಆದರೆ, ನಾವು ಮಾತು ನಿಲ್ಲಿಸಲಿಲ್ಲ. ನಮ್ಮ ಪಾಡಿಗೆ ಏನೋ ಮಾತಾಡುತ್ತಿದ್ದೆವು. ಕೊನೆಗೆ ಬಂದು ಶಟಪ್ ಎಂದರು. ಹೀಗೆ ಶುರುವಾಯಿತು ನಮ್ಮ ಗೆಳೆತನ’ ಎಂದು ಹೇಳಿದ್ದಾರೆ ಕಾಜೋಲ್.

ಹೀಗೆ ಆರಂಭದಲ್ಲಿ ಜಗಳ ಮಾಡಿಕೊಳ್ಳುತ್ತಿದ್ದ ಶಾರೂಖ್ ಮತ್ತು ಕಾಜೋಲ್, ಈಗ ಬಾಲಿವುಡ್‌ನ ಅತ್ಯದ್ಭುತ ಸ್ನೇಹಿತರು ಎಂದು ಗುರಿತಿಸಲ್ಪಡುತ್ತಾರೆ ಎನ್ನುವುದೇ ವಿಶೇಷ.

ನೇರವಾಗಿ ಆನ್​ಲೈನ್​ನಲ್ಲಿ ರಿಲೀಸ್​ ಆಗಲಿದೆಯಾ ರಣವೀರ್​ ಸಿಂಗ್​-ದೀಪಿಕಾ ನಟನೆಯ ‘83’ ಸಿನಿಮಾ?

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank