More

    ‘ಪಠಾಣ್​’ ಚಿತ್ರಕ್ಕೆ ಶಾರುಖ್​ ಖಾನ್​ ಪಡೆದ ಸಂಭಾವನೆ ಎಷ್ಟು? ಅವರೇ ಹೇಳ್ತಾರೆ ಕೇಳಿ …

    ಮುಂಬೈ: ಶಾರುಖ್​ ಖಾನ್​ ಅಭಿನಯದ ‘ಪಠಾಣ್​’ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಕಿಂಗ್​ ಖಾನ್​ ಹೊಡೆದಾಡುವುದನ್ನು ನೋಡಿ, ಆಕ್ಷನ್ ದೃಶ್ಯಗಳಲ್ಲಿ ಭಾಗವಹಿಸುವುದನ್ನು ನೋಡಿ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ. ಚಿತ್ರದ ಬಿಡುಗಡೆಗೆ ಕಾದಿದ್ದಾರೆ.

    ಇದನ್ನೂ ಓದಿ: ಚಿತ್ರಮಂದಿರ ಆಯ್ತು; ಈಗ ಓಟಿಟಿಗೆ ಬರಲಿದೆ ಧನಂಜಯ್​ ಅಭಿನಯದ ‘ಹೆಡ್ ಬುಷ್’ …

    ಇನ್ನು, ಈ ಚಿತ್ರಕ್ಕೆ ಶಾರುಖ್​ ಪಡೆದ ಸಂಭಾವನೆ ಎಷ್ಟು? ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ಟ್ವಿಟರ್​ನಲ್ಲಿ ಶಾರುಖ್​ ಅಭಿಮಾನಿಗಳೊಂದಿಗೆ ಚರ್ಚೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬ ನೇರವಾಗಿ ಶಾರುಖ್​ ಖಾನ್​ ಅವರನ್ನೇ ಈ ಚಿತ್ರಕ್ಕೆ ನಿಮ್ಮ ಸಂಭಾವನೆ ಎಷ್ಟು ಎಂದು ಕೇಳಿದ್ದಾನೆ. ಈ ಪ್ರಶ್ನೆಗೆ ಶಾರುಖ್​ ಮಜವಾಗಿ ಉತ್ತರ ಕೊಟ್ಟಿದ್ದಾರೆ. ‘ನಿನಗ್ಯಾಕಪ್ಪಾ? ನೀನೇನು ನನ್ನ ಮುಂದಿನ ಸಿನಿಮಾ ನಿರ್ಮಾಣ ಮಾಡ್ತೀಯಾ? ಮಾಡೋದಾದ್ರೆ ಹೇಳು, ಹೇಳ್ತೀನಿ’ ಎಂದು ತಮಾಷೆ ಮಾಡಿದ್ದಾರೆ. ಆದರೆ, ತಮ್ಮ ಸಂಭಾವನೆ ಎಷ್ಟು ಅಂತ ಬಾಯಿಬಿಟ್ಟಿಲ್ಲ.

    ಮೂಲಗಳ ಪ್ರಕಾರ, ಶಾರುಖ್​ ಖಾನ್​ ಈ ಚಿತ್ರಕ್ಕೆ 100 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದು, ಅವರ ಚಿತ್ರಜೀವನದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದ ಚಿತ್ರ ಎಂಬ ಹೆಗ್ಗಳಿಕೆಗೆ ‘ಪಠಾಣ್​’ ಪಾತ್ರವಾಗಿದೆ.

    ಇದನ್ನೂ ಓದಿ: ನಾಯಕ, ನಾಯಕಿ, ನಿರ್ದೇಶಕರ ಅನುಪಸ್ಥಿತಿಯಲ್ಲೇ ‘5ಡಿ’ ಚಿತ್ರದ ಹಾಡು ಬಿಡುಗಡೆ …

    ‘ಪಠಾಣ್​’ ಚಿತ್ರದಲ್ಲಿ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ಜಾನ್​ ಅಬ್ರಹಾಂ, ಡಿಂಪಲ್​ ಕಪಾಡಿಯಾ ಮುಂತಾದವರು ಅಭಿನಯಿಸಿದ್ದಾರೆ. ಸಲ್ಮಾನ್​ ಖಾನ್​ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಯಶ್​ರಾಜ್​ ಫಿಲಂಸ್​ನಡಿ ಆದಿತ್ಯ ಚೋಪ್ರಾ ಈ ಚಿತ್ರವನ್ನು ನಿರ್ಮಿಸಿದ್ದು, ಚಿತ್ರವನ್ನು ಸಿದ್ಧಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ.

    ಆಗ ಹಾಗೆ, ಈಗ ಹೀಗೆ … ‘ಕೆಡಿ’ ಚಿತ್ರಕ್ಕೆ 18 ಕೆಜಿ ತೂಕ ಇಳಿಸಿಕೊಂಡ ಧ್ರುವ ಸರ್ಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts