ಮುಂಬೈ : ನಟ ಫರ್ಹಾನ್ ಅಕ್ತರ್ ನಟನೆಯ ನೂತನ ಚಿತ್ರ ‘ತೂಫಾನ್’, ನಿನ್ನೆಯ ದಿನ ಅಮೇಜಾನ್ ಪ್ರೈಮ್ ವಿಡಿಯೋ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಯಿತು. ಚಿತ್ರವನ್ನು ನೋಡಲು ಜನರು ಉತ್ಸುಕರಾಗಿರುವಂತೆಯೇ, ಬಾಲಿವುಡ್ ಬಾದ್ಶಾ ಶಾರೂಖ್ ಖಾನ್ ಚಿತ್ರದ ಬಗ್ಗೆ ಭರಪೂರ ಮೆಚ್ಚುಗೆ ನೀಡಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ತೂಫಾನ್ ಚಿತ್ರದ ಕಿರುವಿಮರ್ಶೆ ಮಾಡಿರುವ ಶಾರೂಖ್, “ನನ್ನ ಮಿತ್ರರಾದ ಫರ್ಹಾನ್ ಅಕ್ತರ್ ಮತ್ತು (ನಿರ್ದೇಶಕ) ರಾಕೇಶ್ ಓಮ್ಪ್ರಕಾಶ್ ಮೆಹ್ರ ಅವರಿಗೆ ತಮ್ಮ ಪ್ರೀತಿಯ ಚಿತ್ರಕ್ಕೆ ಶುಭಹಾರೈಕೆಗಳು” ಎಂದಿದ್ದಾರೆ. ತಾವು ಕೆಲವು ದಿನಗಳ ಮುನ್ನ ಈ ಚಿತ್ರವನ್ನು ನೋಡಿದ್ದು, ಪರೇಶ್ ರಾವಲ್, ಮೋಹನ್ ಅಗಾಶೆ, ಮೃಣಾಲ್ ಠಾಕುರ್ ಮತ್ತು ಹುಸ್ಸೈನ್ ದಲಾಲ್ ಅವರ ಅತ್ಯುತ್ತಮ ನಟನೆ ಚಿತ್ರದಲ್ಲಿದೆ ಎಂದಿದ್ದಾರೆ.
Thank you so much @iamsrk .. 😊❤️ big hug https://t.co/I8PiOgO3dq
— Farhan Akhtar (@FarOutAkhtar) July 16, 2021
ಜೊತೆಗೆ ಚಿತ್ರದ ಒಟ್ಟಾರೆ ವಿಮರ್ಶೆಯನ್ನೂ ಪ್ರಕಟಿಸಿರುವ ಶಾರೂಖ್, “ನಾವೆಲ್ಲರೂ ತೂಫಾನ್ ರೀತಿಯ ಹೆಚ್ಚು ಸಿನಿಮಾಗಳನ್ನು ಮಾಡಲು ಪ್ರಯತ್ನಿಸಬೇಕು” ಎಂದಿದ್ದಾರೆ. ಶಾರೂಖ್ರ ಈ ಹೃತ್ಪೂರ್ವಕ ಶ್ಲಾಘನೆಗೆ ಫರ್ಹಾನ್ ಪ್ರತಿಕ್ರಿಯಿಸಿದ್ದು, “ತುಂಬಾ ಧನ್ಯವಾದಗಳು.. ಬಿಗ್ ಹಗ್” ಎಂದಿದ್ದಾರೆ. (ಏಜೆನ್ಸೀಸ್)
ದೇಹಸೌಂದರ್ಯ ಹೆಚ್ಚಿಸಿ ಮನಸ್ಸಿಗೆ ಏಕಾಗ್ರತೆ ನೀಡುತ್ತೆ, ಈ ಸುಲಭ ಯೋಗಾಸನ!