More

    ರಾಜು ಹಿರಾನಿ ಜತೆಗೆ ಮುಂದಿನ ಚಿತ್ರ; ಹಿಂಟ್ ಕೊಟ್ಟ ಶಾರೂಖ್

    ಅದ್ಯಾವಾಗ ‘ಜೀರೋ’ ಚಿತ್ರ ಸೂಪರ್ ಫ್ಲಾಪ್ ಆಯಿತೋ, ಧರೆಗಿಳಿದು ಹೋಗಿದ್ದಾರೆ ಶಾರೂಖ್ ಖಾನ್. ಯಾವ ತರಹ ಸಿನಿಮಾ ಮಾಡಬೇಕು, ಏನು ಕೊಟ್ಟರೆ ಜನ ಇಷ್ಟಪಡುತ್ತಾರೆ ಎಂದು ಗೊತ್ತಾಗದೆ ತಲೆ ಮೇಲೆ ಕೈ ಹೊತ್ತು ಕುಳಿತುಬಿಟ್ಟರು. ಈ ಧಾವಂತದಲ್ಲಿ ಅವರು ಕಳೆದೆರೆಡು ವರ್ಷಗಳಿಂದ ಯಾವುದೇ ಚಿತ್ರ ಒಪ್ಪಿಲ್ಲ. ಈ ಮಧ್ಯೆ ‘ಮುನ್ನಾಭಾಯ್ ಎಂ.ಬಿ.ಬಿ.ಎಸ್’, ‘ಥ್ರೀ ಈಡಿಯಟ್ಸ್’, ‘ಪಿಕೆ’ ಖ್ಯಾತಿಯ ರಾಜಕುಮಾರ್ ಹಿರಾನಿ ಜತೆಗೆ ಶಾರೂಖ್ ಖಾನ್ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಇದ್ದರೂ, ಇಬ್ಬರೂ ಆ ಬಗ್ಗೆ ತುಟಿಕ್ ಪಿಟಿಕ್ ಎಂದಿರಲಿಲ್ಲ. ಈಗ ಶಾರೂಖ್, ರಾಜು ಹಿರಾನಿ ಜತೆಗೆ ಸಿನಿಮಾ ಮಾಡುತ್ತಿರುವ ಹಿಂಟ್ ಕೊಟ್ಟಿದ್ದಾರೆ.

    ಲಾಕ್‌ಡೌನ್‌ನಿಂದ ಮನೆಯಲ್ಲಿರುವ ಶಾರೂಖ್, ಇತ್ತೀಚೆಗೆ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಮಾತಾಡುತ್ತಿದ್ದರು. ಹಾಲಿವುಡ್‌ನ ಖ್ಯಾತ ನಿರ್ದೇಶಕರಾದ ಕ್ರಿಸ್ಟೋರ್ ನೊಲಾನ್ ಮತ್ತು ಮಾರ್ಟಿನ್ ಸಾರ‌್ಸಸ್ ಪೈಕಿ ಯಾರ ಜತೆಗೆ ಕೆಲಸ ಮಾಡುತ್ತೀರಾ ಎಂದು ಪ್ರಶ್ನೆ ಹಾಕಿದ್ದಾರೆ. ಅದಕ್ಕೆ ಶಾರೂಖ್, ‘ಇಬ್ಬರೂ ಅದ್ಭುತವೇ. ಆದರೆ, ನಮ್ಮ ರಾಜು ಇನ್ನೂ ಅದ್ಭುತ’ ಎಂದಿದ್ದಾರೆ. ಅದಕ್ಕೆ ಅಭಿಮಾನಿಗಳೆಲ್ಲಾ ಶಾರೂಖ್ ಮುಂದಿನ ಚಿತ್ರ ರಾಜು ಜತೆಗೆ ಫಿಕ್ಸ್ ಅಂತ ಖುಷಿಯಲ್ಲಿದ್ದಾರೆ.

    ಹಾಗೆ ನೋಡಿದರೆ, ರಾಜಕುಮಾರ್ ಹಿರಾನಿ ಮತ್ತು ಶಾರೂಖ್ ಖಾನ್ 15 ವರ್ಷಗಳ ಹಿಂದೆಯೇ ಜತೆಗೆ ಚಿತ್ರ ಮಾಡಬೇಕಿತ್ತು. ‘ಮುನ್ನಾಭಾಯ್ ಎಂ.ಬಿ.ಬಿ.ಎಸ್’ ಕಥೆಯನ್ನು ಹಿರಾನಿ ಮೊದಲು ತೆಗೆದುಕೊಂಡು ಹೋಗಿದ್ದೇ ಶಾರೂಖ್ ಖಾನ್ ಬಳಿ. ಆದರೆ, ‘ಕಿಂಗ್ ಖಾನ್’ ಅಷ್ಟೇನೂ ಆಸಕ್ತಿ ತೋರಿಸಲಿಲ್ಲವಂತೆ. ಆ ನಂತರ ‘ಥ್ರೀ ಈಡಿಯಟ್ಸ್’ಗೆ ಸಹ ಶಾರೂಖ್ ಅವರನ್ನ ಅಪ್ರೋಚ್ ಮಾಡಿದ್ದಾರೆ ಹಿರಾನಿ. ಆಗಲೂ ಕಾರಣಾಂತರಗಳಿಂದ ವರ್ಕೌಟ್ ಆಗಲಿಲ್ಲ. ಈಗ ಹಿರಾನಿ ಒಂದು ಕಥೆ ಸಿದ್ಧಪಡಿಸಿದ್ದು, ಅದು ಶಾರೂಖ್‌ಗೂ ಇಷ್ಟವಾಗಿದೆಯಂತೆ. ಈ ಬಾರಿಯಾದರೂ ಇಬ್ಬರೂ ಜತೆಗೆ ಕೆಲಸ ಮಾಡುತ್ತಾರಾ ಎಂದು ನೋಡಬೇಕಿದೆ.

    ಮೂರು ತಲೆಮಾರುಗಳ ಕಥೆ ಹೇಳುತ್ತದೆ ಕನ್ನಡದ ‘ಸಂಡೇ’ ಕಿರುಚಿತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts