More

    VIDEO| ಬಾಂಗ್ಲಾ ಬ್ಯಾಟರ್‌ಗೆ ಚೆಂಡು ಹೊಡೆದ ಶಹೀನ್ ಅಫ್ರಿದಿ, ಕ್ಷಮೆಯಾಚಿಸಿ ಶಿಕ್ಷೆಯಿಂದ ಪಾರು!

    ಕರಾಚಿ: ಬಾಂಗ್ಲಾದೇಶ ಪ್ರವಾಸದ ಆರಂಭದಿಂದಲೂ ವಿವಾದ ಎಬ್ಬಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ತಂಡ ಇದೀಗ ಮತ್ತೊಮ್ಮೆ ಆತಿಥೇಯರ ಕೆಂಗಣ್ಣಿಗೆ ಗುರಿಯಾಗಿದೆ. ನೆಟ್ಸ್ ಅಭ್ಯಾಸದ ವೇಳೆ ಪಾಕಿಸ್ತಾನದ ಧ್ವಜ ನೆಟ್ಟು ಬಾಂಗ್ಲಾ ಕ್ರಿಕೆಟ್ ಪ್ರೇಮಿಗಳಿಂದ ಟೀಕೆ ಎದುರಿಸಿದ್ದ ಬಾಬರ್ ಅಜಮ್ ಪಡೆ, ಸತತ 2 ಟಿ20 ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡ ನಡುವೆಯೂ ಮತ್ತೊಂದು ವಿವಾದದಿಂದ ಮುಜುಗರಕ್ಕೀಡಾಗಿದೆ.

    ಪಾಕಿಸ್ತಾನದ ವೇಗಿ ಶಹೀನ್ ಷಾ ಅಫ್ರಿದಿ 2ನೇ ಟಿ20 ಪಂದ್ಯದ ವೇಳೆ ಬಾಂಗ್ಲಾದೇಶ ಬ್ಯಾಟರ್ ಅಫಿಫ್​ ಹುಸೇನ್ ಮೈಮೇಲೆ ಚೆಂಡೆಸೆದರು. ಆಗ ಅದೃಷ್ಟವಶಾತ್ ಹುಸೇನ್ ಯಾವುದೇ ಗಾಯಗಳಾಗದೆ ಪಾರಾದರು. ಆದರೆ ಚೆಂಡು ಮೈಮೇಲೆ ಬಿದ್ದ ರಭಸಕ್ಕೆ ಅವರೂ ನೆಲಕ್ಕುರುಳಿದರು.

    ಅಫಿಫ್​ ಹುಸೇನ್ ಅವರಿಂದ ಸಿಕ್ಸರ್ ಚಚ್ಚಿಸಿಕೊಂಡ ಕಾರಣ ಸಾಕಷ್ಟು ಹತಾಶೆಗೆ ಒಳಗಾಗಿದ್ದ ಶಹೀನ್ ಷಾ ಅಫ್ರಿದಿ, ನಂತರದ ಎಸೆತದಲ್ಲಿ ಹುಸೇನ್ ಬಾರಿಸಿದ ಚೆಂಡನ್ನು ಹಿಡಿದು ಸ್ಟಂಪ್‌ನತ್ತ ಎಸೆಯುವ ಅವಸರದಲ್ಲಿ ಹುಸೇನ್ ಮೈಮೇಲೆಯೇ ಚೆಂಡು ಹೊಡೆದರು. ಕೂಡಲೆ ವೈದ್ಯರು ಮೈದಾನಕ್ಕೆ ಆಗಮಿಸಿ ಹುಸೇನ್‌ಗೆ ಸೂಕ್ತ ಚಿಕಿತ್ಸೆಯನ್ನೂ ನೀಡಿದರು.

    ಪಂದ್ಯದ ಬಳಿಕ ಶಹೀನ್ ಅಫ್ರಿದಿ, ಹುಸೇನ್ ಬಳಿ ತೆರಳಿ ಕೈಕುಲುಕಿ ಅಪ್ಪಿ ಕ್ಷಮೆಯಾಚಿಸಿದರು. ಇದರ ವಿಡಿಯೋವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟ್ವಿಟರ್‌ನಲ್ಲಿ ಪ್ರಕಟಿಸಿದೆ. ಶಹೀನ್ ಅಫ್ರಿದಿ ವರ್ತನೆ ಬಗ್ಗೆ ಪಾಕ್ ಟೀಮ್ ಮ್ಯಾನೇಜ್‌ಮೆಂಟ್ ಕೂಡ ಅಸಮಾಧಾನಗೊಂಡಿತ್ತು ಮತ್ತು ಕ್ಷಮೆಯಾಚಿಸುವಂತೆ ಸೂಚಿಸಿತ್ತು ಎನ್ನಲಾಗಿದೆ. ಶಹೀನ್ ಅಫ್ರಿದಿ ಕ್ಷಮೆಯಾಚಿಸಿದ್ದರಿಂದಾಗಿ ಐಸಿಸಿ ಕೆಂಗಣ್ಣಿಗೆ ಗುರಿಯಾಗುವುದರಿಂದ ಪಾರಾಗಿದ್ದು, ಶಿಕ್ಷೆಯಿಂದಲೂ ಬಚಾವ್ ಆಗಿದ್ದಾರೆ.

    ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೇ ಆರ್‌ಸಿಬಿ ಅಭಿಮಾನಿಗಳಿಗೆ ಎಬಿಡಿ ವಿಶೇಷ ಸಂದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts