More

    ಏ. 9ರ ಶಬ್​ ಇ ಬರಾತ್​ ಪ್ರಾರ್ಥನೆ ರದ್ದುಗೊಳಿಸಿದ ವಕ್ಫ್​ಬೋರ್ಡ್: ಮನೆಯಲ್ಲೇ ಪ್ರಾರ್ಥನೆ ಮಾಡುವಂತೆ ಸೂಚನೆ

    ಬೆಂಗಳೂರು: ಕರೊನಾ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ರಾಜ್ಯ ವಕ್ಫ್​ಬೋರ್ಡ್​ ಶಬ್​ ಇ ಬರಾತ್​ ಪ್ರಾರ್ಥನೆಗೆ ಬ್ರೇಕ್​ ಹಾಕಿದೆ.

    ಏಪ್ರಿಲ್ 9 ರಂದು ಶಬ್​ ಇ ಬರಾತ್​ ಪ್ರಾರ್ಥನೆ ಇದ್ದು, ಮಸೀದಿಯಲ್ಲಿ ಪ್ರಾರ್ಥನೆ ಮಾಡುವ ಬದಲು ಮನೆಯಲ್ಲೇ ಪ್ರಾರ್ಥನೆ ಮಾಡಬೇಕು ಹಾಗೂ ಖಬರ್ಸ್ತಾನಕ್ಕೆ ಪ್ರವೇಶ ನಿಷೇಧಿಸಲಾಗಿದೆ ಎಂದು ವಕ್ಫ್​ಬೋರ್ಡ್​ ತಿಳಿಸಿದೆ.

    ಪ್ರಾರ್ಥನೆ ರದ್ದು ಮಾಡಿರುವ ವಿಷಯವನ್ನು ಬೋರ್ಡ್​ ರಾಜ್ಯದ ಎಲ್ಲ ಮಸೀದಿ ಹಾಗೂ ಖಬರ್ಸ್ತಾನ ಮುಖ್ಯಸ್ಥರಿಗೆ ರವಾನಿಸಿದೆ.

    ರಾಜ್ಯದಲ್ಲಿ ಕರೊನಾ ವೈರಸ್​ ಸೋಂಕು ತೀವ್ರವಾಗಿ ಹರಡಿರುವ ಹಿನ್ನೆಲೆಯಲ್ಲಿ ಪ್ರಾರ್ಥನೆ ಹಾಗೂ ಖಬರ್ಸ್ತಾನಕ್ಕೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ.

    ದೆಹಲಿಯಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದವರಿಗೆ ಕರೊನಾ ಸೋಂಕು ಹರಡಿ ತೀವ್ರ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಬೋರ್ಡ್​ ಈ ನಿರ್ಧಾರ ಕೈಗೊಂಡಿದೆ.

    ಕೋವಿಡ್​ 19 ಲಾಕ್​ಡೌನ್​ ವಿಶೇಷ: 2000ದ ನಂತರದಲ್ಲಿ ಭಾರತ ಪಾಲ್ಗೊಂಡ ಕ್ರಿಕೆಟ್​ ಸರಣಿಯ ಮರುಪ್ರಸಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts