More

    ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ

    ಬೆಂಗಳೂರು: ಪ್ರತಿಷ್ಠಿತ ಮೆಡಿಕಲ್ ಮಳಿಗೆಯಲ್ಲಿ ಭದ್ರತಾ ಕೆಲಸ ಮಾಡುತ್ತಿದ್ದ ಮಹಿಳೆಯ ಜತೆ ಅನುಚಿತವಾಗಿ ವರ್ತಿಸಿರುವ ಮೇಲಧಿಕಾರಿ, ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

    ಕೆಂಗೇರಿ ನಿವಾಸಿ 38 ವರ್ಷದ ಮಹಿಳೆ ಕೊಟ್ಟ ದೂರಿನ ಮೇರೆಗೆ ಕೇಶವ್ ರಾವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ರಾಜರಾಜೇಶ್ವರಿನಗರ ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ  1962 ಅಲ್ಲ ಈಗ ನಡೀತಿರೋದು- ಚೀನಾಕ್ಕೆ ಪಂಜಾಬ್ ಸಿಎಂ ವಾರ್ನಿಂಗ್​!

    ಸಂತ್ರಸ್ತೆ ಕಳೆದ ಒಂದೂವರೆ ವರ್ಷದಿಂದ ಪಟ್ಟಣಗೆರೆಯಲ್ಲಿರುವ ಮೆಡಿಕಲ್ ಮಳಿಗೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದಾರೆ. ಅದೇ ಕಂಪನಿಯಲ್ಲಿ ಕೇಶವ್ ರಾವ್ ಸೆಕ್ಯೂರಿಟಿ ಮುಖ್ಯಸ್ಥನಾಗಿದ್ದಾನೆ. ಮಹಿಳೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗಿ, ‘ನೋಡಲು ಚೆನ್ನಾಗಿದ್ದೀಯ. ನನ್ನ ಜತೆ ಬಾ, ಕೆಲಸದಲ್ಲಿ ಪ್ರಮೋಷನ್ ಕೊಡಿಸುತ್ತೇನೆ’ ಎಂದು ನಾಲ್ಕು ತಿಂಗಳಿಂದ ಅಸಭ್ಯವಾಗಿ ವರ್ತಿಸುತ್ತಿದ್ದ. ತೊಂದರೆ ಕೊಟ್ಟರೆ ವ್ಯವಸ್ಥಾಪಕರಿಗೆ ದೂರು ಕೊಡುವುದಾಗಿ ಈ ವೇಳೆ ಆಕೆ ಹೇಳಿದ್ದಳು. ವ್ಯವಸ್ಥಾಪಕರಿಗೆ ದೂರು ಕೊಟ್ಟರೆ ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಸಿದ್ದ. ಮಹಿಳೆ ತನಗಾಗುತ್ತಿರುವ ತೊಂದರೆ ವಿಚಾರವನ್ನು ತನ್ನ ಪತಿಗೆ ತಿಳಿಸಿದ್ದು, ಆತ ಕೇಶವ್​ಗೆ ಎಚ್ಚರಿಸಿ ಹೋಗಿದ್ದ.

    ಮೆಡಿಕಲ್​ನಲ್ಲಿ ಕೆಲಸ ಮಾಡುವ ಯುವತಿಯರು ವಾಸವಿರುವ ಕೊಠಡಿಗಳನ್ನು ಸ್ವಚ್ಛ ಮಾಡುವ ವೇಳೆ ಕೇಶವ್ ಮೈಮುಟ್ಟಿ ಎಳೆದಾಡಿದ್ದಾನೆ. ವಿಚಾರ ಬಹಿರಂಗಪಡಿಸಿದರೆ ಜೀವ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಇತ್ತೀಚೆಗೆ ಮೈಸೂರು ರಸ್ತೆಯಲ್ಲಿರುವ ಕಂಪನಿಯ ಉಗ್ರಾಣಕ್ಕೆ ಹೆಚ್ಚುವರಿ ಕೆಲಸಕ್ಕೆ ನಿಯೋಜಿಸಿಕೊಂಡಿದ್ದ. ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಕಚೇರಿಗೆ ಕರೆಸಿಕೊಂಡು ನನ್ನ ಕೈಹಿಡಿದು ಎಳೆದಾಡಿದ್ದಾನೆ. ಈ ವೇಳೆ ಆತನಿಂದ ಬಚಾವಾಗಿದ್ದೇನೆ ಎಂದು ಸಂತ್ರಸ್ತೆ ದೂರು ಕೊಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ತಂದೆಯನ್ನೇ ಕೊಂದವ ಸೆರೆಸಿಕ್ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts