More

    ವೇಶ್ಯೆಯ ಬರ್ಬರ ಕೊಲೆ : ಪರಾರಿಯಾಗುತ್ತಿದ್ದ ಆರೋಪಿ ಪೊಲೀಸ್​ ವಶಕ್ಕೆ

    ಪುಣೆ : ಮಹಾರಾಷ್ಟ್ರದ ಪುಣೆಯ ಬುಧವಾರ್​​ ಪೇಟ್​ ರೆಡ್​ ಲೈಟ್​ ಏರಿಯಾದಲ್ಲಿ ಮೂರು ದಿನಗಳ ಮುಂಚೆ ನಡೆದ ವೇಶ್ಯೆಯೊಬ್ಬಳ ಕೊಲೆ ಪ್ರಕರಣದಲ್ಲಿ ಪೊಲೀಸರು ತನಿಖೆ ಪೂರೈಸಿದ್ದಾರೆ. ಮೊಹಮ್ಮದ್​​ ಬಹರುಲ್​ ಹಖ್​ ಎಂಬುವ ವ್ಯಕ್ತಿಯು ಈ ಕೊಲೆ ಮಾಡಿದ್ದು, ಅಸ್ಸಾಂಗೆ ಪರಾರಿಯಾಗುವ ಸಿದ್ಧತೆಯಲ್ಲಿದ್ದ ಎನ್ನಲಾಗಿದೆ.

    ಮೇ 5 ರ ಬೆಳಗಿನ ಜಾವ 23 ವರ್ಷದ ರಾಣಿ ಶೇಖ್​ ಎಂಬುವಳ ಮೇಲೆ ಅವಳ ಮನೆಯಲ್ಲೇ ಚೂಪಾದ ಚಾಕುವಿನಿಂದ ಹಲ್ಲೆ ನಡೆಸಲಾಗಿತ್ತು. ಅವಳ ಹೊಟ್ಟೆ, ಎದೆ ಮತ್ತು ಕೈಗಳ ಮೇಲೆ ಮಾರಣಾಂತಿಕ ಗಾಯಗಳಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದಳು ಎನ್ನಲಾಗಿದೆ.

    ಇದನ್ನೂ ಓದಿ: ಅಸ್ಸಾಂನ ಹೊಸ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವ ಸರ್ಮ ಆಯ್ಕೆ

    ಈ ಕೊಲೆಯ ತನಿಖೆ ಕೈಗೆತ್ತಿಕೊಂಡ ಫರಕ್ಷಣ ಠಾಣೆ ಪೊಲೀಸರು ವೇಷ್ಯಾಗೃಹದ ಬಳಿಯ ಸೆಕ್ಯುರಿಟಿ ಕ್ಯಾಮರಾದ ಫೂಟೇಜನ್ನು ಪರಿಶೀಲಿಸಿದ ನಂತರ ಆರೋಪಿಯನ್ನು ಮೊಹಮ್ಮದ್ ಬಹರುಲ್​ ಹಖ್​ ಎಂದು ಗುರುತಿಸಿದ್ದರು. ಇಂದು ಪಿಂಪ್ರಿ-ಚಿಂಚವಾಡದ ಪವನೇಶ್ವರ್ ಸೇತುವೆಯ ಬಳಿ ಅಡಗಿ ಕುಳಿತಿದ್ದ ಹಖ್​ ಬಗ್ಗೆ ಸುಳಿವು ಸಿಕ್ಕಿದ್ದು, ಆತ ನಗರವನ್ನು ಬಿಟ್ಟು ಓಡಿಹೋಗುವ ಪ್ರಯತ್ನದಲ್ಲಿರುವಾಗ ಪೊಲೀಸರು ಬಂಧಿಸಿದ್ದಾರೆ.

    ಹಖ್​ಗೆ ಕೆಲವು ಸಮಯದಿಂದ ಮೃತ ರಾಣಿ ಶೇಖ್​ಳ ಪರಿಚಯವಿತ್ತು. ಕಳೆದ ತಿಂಗಳು ಹಣದ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು ಎಂದು ವಿಚಾರಣೆಯ ವೇಳೆ ತಿಳಿದುಬಂದಿದೆ. (ಏಜೆನ್ಸೀಸ್)

    ಕಲಾವಿದರಿಗೆ ಫುಡ್​ ಕಿಟ್​ ವಿತರಿಸಿದ ಲೀಲಾವತಿ, ವಿನೋದ್​ರಾಜ್​

    ಹಿಂದೂ ಮಹಾಸಾಗರಕ್ಕೆ ಬಿದ್ದ ಚೀನಾ ರಾಕೆಟ್​ ಅವಶೇಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts