More

    ಇಂಡಿ ಪಟ್ಟಣದ ವಿಜಯಪುರ ರಸ್ತೆಯ ಹುಡ್ಕೋ ಕಾಲನಿಯ 25ಕ್ಕೂ ಅಧಿಕ ಮನೆಗಳಿಗೆ ನುಗ್ಗಿದ ಚರಂಡಿ ನೀರು

    ಇಂಡಿ: ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ವಿಜಯಪುರ ರಸ್ತೆಯ ಹುಡ್ಕೋ ಕಾಲನಿಯಲ್ಲಿ ಅಂದಾಜು 25ಕ್ಕೂ ಮನೆಗಳಲ್ಲಿ ಚರಂಡಿ ನೀರು ನುಗ್ಗಿದೆ.

    ಕಾಲನಿ ನಿರ್ಮಾಣವಾದ ನಂತರ ಚರಂಡಿ ನಿರ್ಮಿಸಲಾಗಿದೆ. ಆದರೆ, ಸ್ವಚ್ಛತೆ ನಿರ್ವಹಣೆ ಕೊರತೆಯಿಂದಾಗಿ ಅವುಗಳಲ್ಲಿ ಹೂಳು ತುಂಬಿದೆ. ನೀರು ಮುಂದೆ ಸಾಗದೆ ಅಕ್ಕ ಪಕ್ಕದ ಮನೆಗಳಲ್ಲಿ ನುಗ್ಗುತ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

    ಈ ಕುರಿತು ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳಾದ ಅನೀಲ ಚಾಂದಕವಟೆ, ಅನ್ನಪೂರ್ಣ ಐರೋಡಗಿ, ವಾದೇವ ದಂಡಾವತಿ, ಶಂಕರ ಹೂಗಾರ, ರುದ್ರಪ್ಪ ಹೂಗಾರ ಇತರರು ದೂರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts