More

    ಇಂಗ್ಲೆಂಡ್ ಪ್ರವಾಸಕ್ಕೆ ಹೊರಟು ನಿಂತ ಪಾಕಿಸ್ತಾನದ 10 ಕ್ರಿಕೆಟಿಗರಿಗೆ ಕರೊನಾ!

    ಕರಾಚಿ: ಇಂಗ್ಲೆಂಡ್‌ನಲ್ಲಿ ಜೈವಿಕ-ಸುರಕ್ಷಾ ವಾತಾವರಣದಲ್ಲಿ ಟೆಸ್ಟ್ ಮತ್ತು ಟಿ20 ಸರಣಿ ಆಡಲು ಸಜ್ಜಾದ ಪಾಕಿಸ್ತಾನದ 29 ಆಟಗಾರರ ತಂಡದಲ್ಲಿ 10 ಆಟಗಾರರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇದರ ನಡುವೆಯೂ ಪಾಕಿಸ್ತಾನ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳು ಪ್ರವಾಸ ನಿಗದಿಯಂತೆಯೇ ನಡೆಯಲಿದೆ ಎಂದು ಹೇಳಿಕೊಂಡಿವೆ.

    ಪ್ರವಾಸಕ್ಕೆ ಪೂರ್ವಭಾವಿಯಾಗಿ ನಡೆಸಲಾದ ಕರೊನಾ ಪರೀಕ್ಷೆಯಲ್ಲಿ ಹಿರಿಯ ಆಟಗಾರರಾದ ಆಲ್ರೌಂಡರ್ ಮೊಹಮದ್ ಹಫೀಜ್ ಮತ್ತು ವೇಗಿ ವಹಾಬ್ ರಿಯಾಜ್ ಜತೆಗೆ ಯುವ ಆಟಗಾರರಾದ ಫಖರ್ ಜಮಾನ್ ಇಮ್ರಾನ್ ಖಾನ್, ಕಾಶಿಫ್​ ಭಟ್ಟಿ, ಮೊಹಮದ್ ಹಸ್‌ನೈನ್ ಮತ್ತು ಮೊಹಮದ್ ರಿಜ್ವಾನ್ ವರದಿ ಪಾಸಿಟಿವ್ ಬಂದಿದೆ. ಇದಕ್ಕೆ ಮುನ್ನ ಸೋಮವಾರದ ವರದಿಯಲ್ಲಿ ಶಾದಬ್ ಖಾನ್, ಹೈದರ್ ಅಲಿ ಮತ್ತು ಹ್ಯಾರಿಸ್ ರೌಫ್​ ಪಾಸಿಟಿವ್ ಆಗಿದ್ದರು. ಇವರೆಲ್ಲರಿಗೂ ಪರೀಕ್ಷೆಗೆ ಮುನ್ನ ಯಾವುದೇ ಕರೊನಾ ಲಕ್ಷಣಗಳಿರಲಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ. ತಂಡದ ಮಸಾಜು ತಜ್ಞ ಮಲಂಗ್ ಅಲಿ ವರದಿ ಕೂಡ ಪಾಸಿಟಿವ್ ಬಂದಿದೆ.

    ಇದನ್ನೂ ಓದಿ: ಇಂದು ಧೋನಿ ಐತಿಹಾಸಿಕ ದಾಖಲೆ ಸೃಷ್ಟಿಸಿದ ದಿನ..!

    ಆಗಸ್ಟ್-ಸೆಪ್ಟೆಂಬರ್‌ನಲ್ಲಿ ತಲಾ 3 ಟೆಸ್ಟ್ ಮತ್ತು 3 ಟಿ20 ಪಂದ್ಯಗಳನ್ನು ಆಡಲು ಪಾಕ್ ತಂಡ ಜೂನ್ 28ರಂದು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಬೇಕಾಗಿದೆ. ಅದಕ್ಕೆ ಮುನ್ನ ಜೂನ್ 25ರಂದು ಮತ್ತೊಮ್ಮೆ ಆಟಗಾರರ ಪರೀಕ್ಷೆ ನಡೆಯಲಿದೆ. ಅದರ ಮರುದಿನ ಪ್ರವಾಸ ಕೈಗೊಳ್ಳಲಿರುವ ಪರಿಷ್ಕೃತ ತಂಡ ಪ್ರಕಟಗೊಳ್ಳಲಿದೆ. ಇಂಗ್ಲೆಂಡ್‌ನಲ್ಲಿ ಮೊದಲ ಟೆಸ್ಟ್ ಆಡುವುದಕ್ಕೆ ಮುನ್ನ ಆಟಗಾರರು ಒಟ್ಟಾರೆ 5 ಬಾರಿ ಕರೊನಾ ಪರೀಕ್ಷೆಗೆ ಒಳಗಾಗಲಿದ್ದಾರೆ ಎನ್ನಲಾಗಿದೆ.

    ‘ಟೆಸ್ಟ್ ಸರಣಿಯಲ್ಲಿ ಆಡಲಿರುವ ಪಾಕ್ ತಂಡದ ಮೊದಲ ಆಯ್ಕೆಯ 10 ಆಟಗಾರರ ವರದಿ ನೆಗೆಟಿವ್ ಬಂದಿದೆ. ಯುವ ಬ್ಯಾಟ್ಸ್‌ಮನ್ ಮೊಹಮದ್ ರಿಜ್ವಾನ್ ಮಾತ್ರ ಪಾಸಿಟಿವ್ ಆಗಿದ್ದಾರೆ. ಇದರಿಂದಾಗಿ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಗೆ ಆಡಲು ಬೇಕಾದ ಸಮರ್ಥ ಆಟಗಾರರು ತಂಡದಲ್ಲಿದ್ದಾರೆ’ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧಿಕಾರಿ ತಿಳಿಸಿದ್ದಾರೆ. ಪಾಸಿಟಿವ್ ವರದಿ ಬಂದ ಆಟಗಾರರು ಮತ್ತೆ ಪರೀಕ್ಷೆ ಒಳಪಡಲಿದ್ದಾರೆ. ಅವರ ವರದಿ ನೆಗೆಟಿವ್ ಬಂದ ಕೂಡಲೆ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದೂ ತಿಳಿಸಿದ್ದಾರೆ.

    ಇದನ್ನೂ ಓದಿ: ವಿಶ್ವ ನಂ. 1 ಟೆನಿಸ್ ಆಟಗಾರ ಜೋಕೊವಿಕ್‌ಗೆ ಕರೊನಾ ಸೋಂಕು

    ಇಂಗ್ಲೆಂಡ್ ತಂಡ ಈಗಾಗಲೆ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಜ್ಜಾಗುತ್ತಿದೆ. ಪಾಕ್ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡ ಮೊದಲ 14 ದಿನ ಕ್ವಾರಂಟೈನ್‌ನಲ್ಲಿರಲಿದೆ. 29 ಆಟಗಾರರ ಜತೆಗೆ ನಾಲ್ವರು ಮೀಸಲು ಆಟಗಾರರನ್ನೂ ಪಿಸಿಬಿ ಹೆಸರಿಸಿತ್ತು. ಅವರು ಕರೊನಾ ಪರೀಕ್ಷೆಗೆ ಒಳಗಾಗಲಿದ್ದಾರೆ.

    ಬಾಸ್ಕೆಟ್‌ಬಾಲ್ ಆಟಗಾರ್ತಿ ಈಗ ಫೈಟರ್ ಜೆಟ್ ಪೈಲಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts