More

    ಶೇ. 100ರಷ್ಟು ಹಾಜರಾತಿ ರದ್ದು … ‘ಮಾಸ್ಟರ್​’ ಬಿಡುಗಡೆಗೆ ಹಿನ್ನೆಡೆ

    ಚೆನ್ನೈ: ತಮಿಳುನಾಡು ಸರ್ಕಾರವು ಇತ್ತೀಚೆಗಷ್ಟೇ ಆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ತಕ್ಷಣಕ್ಕೆ ಜಾರಿಗೆ ಬರುವಂತೆ ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡಿತ್ತು. ಈ ನಿಯಮದಿಂದಾಗಿ ವಿಜಯ್​ ಅಭಿನಯದ ‘ಮಾಸ್ಟರ್​’ ಸೇರಿದಂತೆ ಹಲವು ಬಿಗ್​ ಬಜೆಟ್​ ಚಿತ್ರಗಳಿಗೆ ಸಾಕಷ್ಟು ಅನುಕೂಲವಾಗಿತ್ತು. ಇದೀಗ, ‘ಮಾಸ್ಟರ್​’ ಚಿತ್ರಕ್ಕೆ ದೊಡ್ಡ ಹಿನ್ನೆಡೆಯಾಗಿದೆ.

    ಇದನ್ನೂ ಓದಿ:‘ದಿ ಫ್ಯಾಮಿಲಿ ಮ್ಯಾನ್ ಸೀಸನ್ 2’ ವೆಬ್​ಸರಣಿ ಬಿಡುಗಡೆ ದಿನಾಂಕ ಪ್ರಕಟ

    ಯಾವಾಗ, ಸರ್ಕಾರವು ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡಿತೋ, ಆಗ ಅರವಿಂದ್​ ಸ್ವಾಮಿ, ಕಸ್ತೂರಿ ಸೇರಿದಂತೆ ಹಲವರು ಇದಕ್ಕೆ ವ್ಯಕ್ತಪಡಿಸಿದ್ದರು. ಕರೊನಾ ಸೋಂಕು ಕ್ರಮೇಣ ತಗ್ಗುತ್ತಿರುವುದರಿಂದ, ಈಗ ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡಿರುವುದರಿಂದ, ಸೋಂಕು ಉಲ್ಬಣವಾಗುವ ಸಾಧ್ಯತೆ ಇರುವುದರಿಂದ ತಕ್ಷಣವೇ ಆದೇಶವನ್ನು ಹಿಂಪಡೆಯಬೇಕು ಎಂದು ಹೇಳಿದ್ದರು. ಹಲವು ವ್ಯದ್ಯರು ಸಹ ಇದಕ್ಕೆ ಧ್ವನಿಗೂಡಿಸಿದ್ದರು.

    ಇದರ ಹಿಂದೆಯೇ, ಬುಧವಾರ ರಾತ್ರಿ ಕೇಂದ್ರ ಸರ್ಕಾರದ ಗೃಹ ಇಲಾಖೆಯು, ತಮಿಳು ನಾಡು ಸರ್ಕಾರಕ್ಕೆ, ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಯ ನಿಯಮವನ್ನು ಹಿಂದಕ್ಕೆ ಪಡೆಯಬೇಕು ಎಂದು ಆದೇಶಿಸಿತ್ತು. ಈ ವಿಷಯವಾಗಿ ಗೃಹ ಕಾರ್ಯದರ್ಶಿಯವರು ತಮಿಳುನಾಡಿನ ಸರ್ಕಾರಕ್ಕೆ ಪತ್ರ ಬರೆದು, ಕೇಂದ್ರ ಗೃಹ ಸಚಿವಾಲಯದ ಆದೇಶಗಳನ್ನು ಪಾಲಿಸಬೇಕು ಮತ್ತು 2005ರ ವಿಪತ್ತು ನಿರ್ವಹಣಾ ಕಾಯ್ದೆಯ ಪ್ರಕಾರ, ಜನವರಿ 31ರವರೆಗೂ ಶೇ. ಶೇ. 50ರಷ್ಟು ಹಾಜರಾತಿ ಮುಂದುವರೆಸಬೇಕು ಎಂದು ಹೇಳಿದ್ದಾರೆ.

    ಈ ನಿಯಮಗಳನ್ನು ಸರ್ಕಾರ ಪಾಲಿಸಲೇಬೇಕಿದ್ದು, ಇದರಿಂದ ವಿಜಯ್​ ಅಭಿನಯದ ‘ಮಾಸ್ಟರ್​’ ಹಾಗೂ ಸಿಂಬು ಅಭಿನಯದ ‘ಈಶ್ವರನ್​’ ಚಿತ್ರಗಳಿಗೆ ತೀವ್ರ ಹಿನ್ನೆಡೆಯಾಗಿದೆ. ಇದಕ್ಕೂ ಮುನ್ನ, ಚಿತ್ರಮಂದಿರಗಳಲ್ಲಿ ಶೇ. 50ರಿಂದ 100ರವರೆಗೂ ಹಾಜರಾತಿಗೆ ಅನುಮತಿ ನೀಡಬೇಕು ಎಂದು ನಟ ವಿಜಯ್​, ತಮಿಳುನಾಡು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ಅದರ ನಂತರ ‘ಮಾಸ್ಟರ್​’ ಚಿತ್ರ ಜನವರಿ 13ಕ್ಕೆ ಬಿಡುಗಡೆಯಾಗುತ್ತದೆ ಎಂದು ಘೋಷಿಸಿದ್ದರು. ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ, ತಮಿಳುನಾಡು ಸರ್ಕಾರ ಸಹ ರಾಜ್ಯದಲ್ಲಿ ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡಿತ್ತು.

    ಇದನ್ನೂ ಓದಿ: ಇದು ‘ರಾತ್ರೋ ರಾತ್ರಿ’ ನಡೆಯುವ ಹಾರರ್ ಕಥನ; ಜ.14ಕ್ಕೆ ಹೆದರಿಸಲು ಬರ್ತಿದ್ದಾರೆ ಹೊಸಬರು!

    ಈಗ ಗೃಹ ಇಲಾಖೆಯ ಎಚ್ಚರಿಕೆಯಿಂದಾಗಿ, ‘ಮಾಸ್ಟರ್​’ ಚಿತ್ರವು ಶೇ. 50ರಷ್ಟು ಹಾಜರಾತಿಗೆ ಬಿಡುಗಡೆಯಾಗಬೇಕಿದೆ. ಈಗಾಗಲೇ ತಮಿಳುನಾಡಿನಲ್ಲಿ ಅಡ್ವಾನ್ಸ್​ ಬುಕ್ಕಿಂಗ್​ ಸಹ ಶುರುವಾಗಿದೆ. ಹೀಗಿರುವಾಗ ಪುನಃ ಶೇ. 50ರಷ್ಟು ಹಾಜರಾತಿ ಪದ್ಧತಿಯಡಿ, ಟಿಕೆಟ್​ಗಳನ್ನು ಹಂಚಬೇಕಿದೆ. ಇಂಥ ಸಂದರ್ಭದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡದವರು ಮುಂದಾಗುತ್ತಾರಾ? ಅಥವಾ ಮುಂದಿನ ತಿಂಗಳಿಂದ ಸರ್ಕಾರ ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡಿದ ನಂತರವೇ ಬಿಡಗುಡೆ ಮಾಡುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

    ‘ವೀರಂ’ನಲ್ಲಿ ಶಿಷ್ಯ ದೀಪಕ್​ಗೆ ಸ್ಪೈಡರ್ ಲುಕ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts