More

    ಮುಂಗಾರು ಅಧಿವೇಶನ: ಸದನದ ಆರಂಭದಲ್ಲೇ ವಿಪಕ್ಷಗಳ ಗದ್ದಲ! ಮುಂದೂಡಲ್ಪಟ್ಟಿತು ಕಲಾಪ

    ನವದೆಹಲಿ : ಇಂದು ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದ ಅಂಗವಾಗಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸದಾಗಿ ಅಧಿಕಾರ ಸ್ವೀಕರಿಸಿರುವ ಸಚಿವರನ್ನು ಸದನಕ್ಕೆ ಪರಿಚಯಿಸಲು ಪ್ರಯತ್ನಿಸಿದರು. ಆದರೆ, ವಿರೋಧ ಪಕ್ಷಗಳ ಸದಸ್ಯರು ಉಚ್ಛ ಸ್ವರದಲ್ಲಿ ಘೋಷಣೆಗಳನ್ನು ಕೂಗುತ್ತಾ ಗದ್ದಲ ಮಾಡಿ, ಪ್ರಧಾನಿಯ ಮಾತುಗಳಿಗೆ ಅಡ್ಡಿಪಡಿಸಿದರು. ವಿಪರೀತವಾದ ಅಡಚಣೆಯಿಂದಾಗಿ ಸ್ಪೀಕರ್​ ಓಮ್​ ಬಿರ್ಲಾ ಅವರು ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

    ಸಾಂಪ್ರದಾಯಿಕವಾದ ರಾಷ್ಟ್ರಗೀತೆಯ ನಂತರ, ನೂತನವಾಗಿ ಸಂಸದರಾಗಿರುವ ವೈಎಸ್​​ಆರ್​ಸಿಪಿಯ ಮದ್ದಿಲ ಗುರುಮೂರ್ತಿ, ಬಿಜೆಪಿಯ ಮಂಗಳ ಸುರೇಶ್​ ಅಂಗಡಿ, ಐಯುಎಂಎಲ್​ನ ಅಬ್ದುಸ್ಸಮದ್ ಸಮದಾನ್ ಮತ್ತು ಕಾಂಗ್ರೆಸ್​ನ ವಿಜಯ್ ವಸಂತ್​ ಅವರು ಪ್ರಮಾಣ ವಚನ ಸ್ವೀಕರಿಸಿದರು.

    ಇದನ್ನೂ ಓದಿ: ಸಚಿವ ಸ್ಥಾನ ಹೋದರೆ ಗೂಟ ಹೋದಂತೆ: ವೈರಲ್​ ಆಡಿಯೋಗೆ ಈಶ್ವರಪ್ಪ ಪ್ರತಿಕ್ರಿಯೆ

    ನಂತರದಲ್ಲಿ ಪ್ರಧಾನಿ ಮೋದಿ ಅವರು ಹೊಸ ಸಚಿವ ಸಂಪುಟವನ್ನು ಸೇರಿರುವ ಸಂಸದರನ್ನು ಪರಿಚಯಿಸಲಿಚ್ಛಿಸುತ್ತಾರೆ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದಂತೆ, ವಿರೋಧ ಪಕ್ಷಗಳ ಗದ್ದಲ ತಾರಕಕ್ಕೇರಿತು. ಸ್ಪೀಕರ್​ ಅವರು “ಸದನದ ಪರಂಪರೆಯನ್ನು ಮುರಿಯಬೇಡಿ. ಶಾಂತವಾಗಿ ವರ್ತಿಸಿ” ಎಂದು ಕೇಳಿಕೊಂಡರೂ ಘೋಷಣೆಗಳನ್ನು ಕೂಗುತ್ತಾ ಮೋದಿ ಮಾತಿಗೆ ಅಡ್ಡಿಪಡಿಸಲಾಯಿತು.

    ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮೋದಿ ಅವರು, “ಈ ಬಾರಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಮಹಿಳಾ ಸಂಸದರಿಗೆ, ದಲಿತ ಮತ್ತು ಆದಿವಾಸಿ ಸಮುದಾಯಗಳಿಗೆ ಸೇರಿದ ಸಂಸದರಿಗೆ, ಓಬಿಸಿಗೆ ಸೇರಿದ, ರೈತ ಕುಟುಂಬ ಮತ್ತು ಗ್ರಾಮೀಣ ಪ್ರದೇಶಗಳ ಸಂಸದರಿಗೆ ಸಚಿವರಾಗಿ ಅವಕಾಶ ನೀಡಲಾಗಿದೆ. ಈ ಬಗ್ಗೆ ಸದನದಲ್ಲಿ ಸಂತಸದ ವಾತಾವರಣ ಇರುತ್ತೆ ಎಂದು ಭಾವಿಸಿದ್ದೆ. ಆದರೆ ಕೆಲವರಿಗೆ ಈ ರೀತಿಯ ಉತ್ತಮ ಬದಲಾವಣೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನಿಸುತ್ತದೆ” ಎಂದು ಹೇಳಿ ಕುಳಿತುಕೊಂಡರು.

    ಸ್ಪೀಕರ್​ ಬಿರ್ಲಾ ಅವರು, ನಂತರದಲ್ಲಿ ಸಚಿವರ ಪರಿಚಯ ಮಾಡಬಹುದೆಂದು ಹೇಳಿ, ಕಳೆದ ತಿಂಗಳುಗಳಲ್ಲಿ ನಿಧನರಾದ 40 ಮಾಜಿ ಸಂಸದರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯ ಆರಂಭಿಸಿದರು.

    ಇದನ್ನೂ ಓದಿ: ಸಂಸತ್​ ಅಧಿವೇಶನದಲ್ಲಿ 30 ಮಸೂದೆಗಳು; ಯಾವುದೇ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದ ಮೋದಿ

    ನಂತರ ಮಾತನಾಡಿದ ರಕ್ಷಣಾ ಸಚಿವರಾದ ರಾಜನಾಥ್​ ಸಿಂಗ್​ ಅವರು, ಪ್ರಧಾನಿಯ ಭಾಷಣಕ್ಕೆ ಅಡ್ಡಿಪಡಿಸುತ್ತಿರುವ ಬಗ್ಗೆ ಕಾಂಗ್ರೆಸ್​ ಮೇಲೆ ವಾಗ್ದಾಳಿ ನಡೆಸಿದರು. “ನಾನು 24 ವರ್ಷದಿಂದ ಸಂಸದನಾಗಿದ್ದೇನೆ. ಪ್ರತಿ ಅಧಿವೇಶನದಲ್ಲಿ ಹೊಸ ಸಚಿವರನ್ನು ಪ್ರಧಾನಿಗಳು ಪರಿಚಯಿಸುತ್ತಾರೆ. ವಿಪಕ್ಷವು ಅದನ್ನು ಕೇಳುತ್ತದೆ. ಆದರೆ ಇದೀಗ ಮೊದಲ ಬಾರಿ ಪ್ರಧಾನಿಗೆ ಮಾತನಾಡಲು ಬಿಡುತ್ತಿಲ್ಲ. ಇದು ಕಾಂಗ್ರೆಸ್ಸಿನ ದುರದೃಷ್ಟಕಾರಿ ಮತ್ತು ಅನಾರೋಗ್ಯಕರ ಪ್ರಯತ್ನವಾಗಿದೆ” ಎಂದರು.

    ವಿಪಕ್ಷಗಳ ಗದ್ದಲದ ನಡುವೆ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು 2 ಗಂಟೆವರೆಗೆ ಸ್ಥಗಿತಗೊಳಿಸಿದರು.

    ಪಾರ್ಟಿಗೆ ಆತ್ಮ ಯಡಿಯೂರಪ್ಪ; ಈಶ್ವರಪ್ಪ, ಶೆಟ್ಟರ್ ಕಣ್ಣುಗಳಂತೆ: ಕಟೀಲ್​

    ಮುಟ್ಟಿನ ದೋಷ ಮತ್ತು ಬೊಜ್ಜು ನಿವಾರಣೆಗೆ ಹೇಳಿಮಾಡಿಸಿದ ಆಸನವಿದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts