More

    ಅಪಾಯಕಾರಿ ಸೆರೋಟೈಪ್​-2 ಡೆಂಘೆ ಜ್ವರ: 11 ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ

    ನವದೆಹಲಿ: ಇನ್ನೂ ಮರೆಯಾಗದ ಕರೊನಾ ಆತಂಕದ ನಡುವೆ, ಹಲವು ರಾಜ್ಯಗಳಿಗೆ ಹೆಚ್ಚು ಅಪಾಯಕಾರಿಯಾದ ಸೆರೋಟೈಪ್​-2 ಡೆಂಘೆ ಜ್ವರದ ಬಗ್ಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಹಲವು ರೋಗಿಗಳು ಸಾವಪ್ಪಿರುವ ಪ್ರಸಂಗಗಳೂ ಸೇರಿದಂತೆ ಈ ಪ್ರಕಾರದ ಡೆಂಘೆ ಜ್ವರ ಪ್ರಕರಣಗಳನ್ನು ದಾಖಲಿಸುತ್ತಿರುವ 11 ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ರೋಗ ಹೆಚ್ಚಳದ ತಡೆಗೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದೆ.

    ಸವಾಲಾಗಿ ಬೆಳೆಯುತ್ತಿರುವ ಈ ಡೆಂಘೆ ಪ್ರಭೇದದ ಬಗ್ಗೆ ವಿವಿಧ ರಾಜ್ಯಗಳ ಅಧಿಕಾರಿಗಳೊಂದಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಶನಿವಾರ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು. ಸೊಳ್ಳೆ ಕಡಿತದಿಂದ ಹರಡುವ ಈ ರೋಗದ ಶೀಘ್ರ ಪತ್ತೆಗಾಗಿ ತ್ವರಿತ ಪ್ರತಿಕ್ರಿಯೆ ತಂಡಗಳನ್ನು ನೇಮಿಸುವುದು, ಫೀವರ್​ ಹೆಲ್ಪ್​ಲೈನ್​ಗಳನ್ನು ಆರಂಭಿಸುವುದು, ಸಾಕಷ್ಟು ಟೆಸ್ಟಿಂಗ್ ಕಿಟ್​ಗಳನ್ನು, ಲಾರ್ವಿಸೈಡ್​ಗಳು ಮತ್ತು ಔಷಧಿಗಳನ್ನು ಶೇಖರಿಸುವುದು, ಜಾಗೃತಿ ಅಭಿಯಾನ, ವೆಕ್ಟರ್​ ಕಂಟ್ರೋಲ್ ಮುಂತಾದ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.

    ಅಪಾಯಕಾರಿ ಸೆರೋಟೈಪ್​-2 ಡೆಂಘೆ ಜ್ವರ: 11 ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ
    ಅಲಹಾಬಾದ್​ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡೆಂಘೆ ಜ್ವರದ ರೋಗಿಯನ್ನು ಸೊಳ್ಳೆಪರದೆ ಹಾಕಿ ಮಲಗಿಸಿರುವುದು.

    ಕರ್ನಾಟಕಕ್ಕೂ ಕಂಟಕ: ಸೆರೋಟೈಪ್​-2 ಅಥವಾ ಡೆನ್ 2 ವೈರಸ್​​ಗಳಿಂದ ಉಂಟಾಗುತ್ತಿರುವ ಈ ಅಪಾಯಕಾರಿ ಡೆಂಘೆ ಜ್ವರದ ಪ್ರಕರಣಗಳು ಕಂಡುಬರುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಆತಂಕ ಎದುರಿಸುತ್ತಿರುವ ಇತರ ರಾಜ್ಯಗಳೆಂದರೆ – ಆಂಧ್ರಪ್ರದೇಶ, ಗುಜರಾತ್, ಕೇರಳ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು ಮತ್ತು ತೆಲಂಗಾಣ. ಈ ರಾಜ್ಯಗಳಿಗೆ ಆಗಸ್ಟ್​ ತಿಂಗಳಲ್ಲಿ ಮತ್ತು ಸೆಪ್ಟೆಂಬರ್​ 10 ರಂದು ಕೂಡ ಕೇಂದ್ರ ಸರ್ಕಾರ ಸಲಹೆಸೂಚನೆಗಳನ್ನು ನೀಡಿತ್ತು ಎನ್ನಲಾಗಿದೆ. (ಏಜೆನ್ಸೀಸ್)

    VIDEO| ಬಾಲಿವುಡ್​ ಹೀರೋ ಎಮ್ರಾನ್​ ಹಶ್ಮಿ ಜಿಮ್​ ವರ್ಕೌಟ್​ ನೋಡಿ!

    ಯಾರ ಮೇಲೆ ನಂಬಿಕೆ ಇದೆಯೋ ಅವರನ್ನೇ ಆಯ್ಕೆ ಮಾಡಲಿ: ರಾಜೀನಾಮೆ ನೀಡಿದ ಕ್ಯಾಪ್ಟನ್​ ಉದ್ಗಾರ

    ಕರ್ನಾಟಕ ಸೇರಿದಂತೆ 8 ಹೈಕೋರ್ಟ್​ಗಳಿಗೆ ಹೊಸ ಮುಖ್ಯ ನ್ಯಾಯಮೂರ್ತಿಗಳ ಶಿಫಾರಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts