More

  ಜೀತವಿಮುಕ್ತರು ಬೆಂಕಿಯಿಂದ ಬಾಣಲೆಗೆ

  ಹುಣಸೂರು: ಜೀತವಿಮುಕ್ತರು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಹೇಳಿದರು.

  ತಾಲೂಕು ಪಂಚಾಯಿತಿ ವತಿಯಿಂದ ಶನಿವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜೀತವಿಮುಕ್ತರ ಪುನರ್ವಸತಿ ಮತ್ತು ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿ, ತಾಲೂಕಿನಲ್ಲಿ 2014 ರಿಂದ ಈವರೆಗೆ 24 ಜನರನ್ನು ಜೀತಗಾರಿಕೆಯಿಂದ ಬಿಡುಗಡೆಗೊಳಿಸಲಾಗಿದ್ದು, ಈ 24 ಜೀತವಿಮುಕ್ತರಿಗೆ ಯಾವುದೇ ಸೌಲಭ್ಯಗಳನ್ನು ಇಲ್ಲಿವರೆಗೂ ಕಲ್ಪಿಸಲಾಗಿಲ್ಲ. ಕೇವಲ ಸಭೆಗಳಲ್ಲಿ ಅಧಿಕಾರಿಗಳು ಜೀತವಿಮುಕ್ತರ ಬಗ್ಗೆ ಮಾತನಾಡುತ್ತಾರೆಯೇ ಹೊರತು ಸೌಲಭ್ಯಗಳನ್ನು ಕಲ್ಪಿಸುತ್ತಿಲ್ಲ. ಕೆಲವರಿಗೆ ನಿವೇಶನ ಹಾಗೂ ವಾಸಿಸಲು ಮನೆಯೂ ಇಲ್ಲ. ಇವರಿಗೆ ವಾಸಿಸಲು ನೆಲೆ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದರು.

  ಜೀತದಿಂದ ವಿಮುಕಿ ್ತಹೊಂದಿದವರು ಸ್ವಾವಲಂಬಿ ಬದುಕು ನಡೆಸಲು ಕನಸು ಕಾಣುತ್ತಿದ್ದಾರೆ. ಆದರೆ ಆಡಳಿತ ವ್ಯವಸ್ಥೆಯಿಂದ ಯಾವುದೇ ರೀತಿಯ ಅನುಕೂಲವಾಗಿಲ್ಲ ಎಂದರು.

  ತಾ.ಪಂ.ಇಒ ಶಿವಕುಮಾರ್ ಮಾತನಾಡಿ, ಜೀತ ಪದ್ಧತಿ ನಿರ್ಮೂಲನೆಗೆ ಅಧಿಕಾರಿಗಳು, ಸಮುದಾಯದ ಮುಖಂಡರು ಒಟ್ಟಾಗಿ ಕೆಲಸ ಮಾಡಬೇಕಿದೆ. ಅಶಕ್ತರ ಹಕ್ಕುಗಳನ್ನು ಕಿತ್ತುಕೊಳ್ಳುವ ಅಧಿಕಾರ ಯಾರಿಗೂ ಇರುವುದಿಲ್ಲ. ಅಂತಹವರ ವಿರುದ್ಧ ಕ್ರಮ ವಹಿಸಲಾಗುವುದು ಎಂದರು.

  ಜೀತದಿಂದ ಬಿಡುಗಡೆ ಹೊಂದಿದವರಿಗೆ ಮೂಲ ಸೌಲಭ್ಯ ಕಲ್ಪಿಸಲು ಹಾಗೂ ವಿವಿಧ ನಿಗಮ ಮಂಡಳಿಗಳಲ್ಲಿ ಸಾಲ ಸೌಲಭ್ಯ ಪಡೆದು ಸ್ವಾವಲಂಬಿ ಬದುಕು ನಡೆಸಲು ಸಹಕಾರವಾಗುವ ನಿಟ್ಟಿನಲ್ಲಿ ಕ್ರಮ ವಹಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

  ಕಾರ್ಯಾಗಾರದಲ್ಲಿ ತಾಲೂಕು ಯೋಜನಾಧಿಕಾರಿ ರಾಜೇಶ್, ಪಿಡಿಒ ಮಂಜುಳಾ, ಕವಿತಾ, ಪ್ರತಿಭಾ, ಗಿರಿಜಾ, ಪ್ರೇಮಚಂದ್, ತಾ.ಪಂ. ವಿಷಯ ಕಾರ್ಯನಿರ್ವಾಹಕ ನಟೇಶ್, ಸುನೀಲ್, ಬಾಲಾಜಿರಾವ್, ಸಿಬ್ಬಂದಿ ಕುಮಾರ್, ಅರುಣ್, ವಿಜಯಕುಮಾರ್, ವಾಲ್ಮೀಕಿ ಅಭಿವೃದ್ಧಿ ನಿಗಮದ ಪರಮೇಶ್ವರಪ್ಪ, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸತೀಶ್, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಚನ್ನಬಸಪ್ಪ ಹಾಗೂ ಜೀತಗಾರಿಕೆಯಿಂದ ಬಿಡುಗಡೆಗೊಂಡವರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts