More

    ಪ್ರತ್ಯೇಕ ಪ್ರಕರಣದಲ್ಲಿ ಐವರ ಸಾವು; ಹಲವರಿಗೆ ಗಂಭೀರ ಗಾಯ

    ಕುಣಿಗಲ್/ ಹುಲಿಯೂರುದುರ್ಗ/ ಪಟ್ಟನಾಯಕನಹಳ್ಳಿ: ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಪ್ರತ್ಯೇಕ ಪ್ರಕರಣದಲ್ಲಿ ಐವರು ಮೃತಪಟ್ಟು, ಹಲವರು ಗಂಭೀರ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಬೆಂಗಳೂರು ಹಲಸೂರು ಕ್ರಾಸ್ ವಾಸಿಗಳು ಜೋಮ್ ಕಂಪನಿಯ ಬಾಡಿಗೆ ಕಾರು ಪಡೆದು ಧರ್ಮಸ್ಥಳ, ಕುಕ್ಕೆ ಸೇರಿ ಪುಣ್ಯ ಕ್ಷೇತ್ರಗಳಿಗೆ ತೆರಳಿ ಬೆಂಗಳೂರಿಗೆ ವಾಪಾಸಾಗುವಾಗ ಅಮೃತೂರು ಠಾಣಾ ವ್ಯಾಪ್ತಿಯ ಎಡಿಯೂರು ರಾಷ್ಟ್ರೀಯ ಹೆದ್ದಾರಿ 75ರ ಪೆಟ್ರೊಲ್ ಬಂಕ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ವಾಸಿ ವಾಹನ ಚಾಲಕ ನರಸಿಂಹ (48) ಸ್ಥಳದಲ್ಲೇ ಮೃತಪಟ್ಟು ಬೆಂಗಳೂರು ಅಲಸೂರು ಕ್ರಾಸ್ ನಿವಾಸಿಗಳಾದ ಅರ್ಪಿತಾ (30), ಚನ್ನಯ್ಯ (20), ಜಾನವಿ (17), ಮನ್ವೀತಾ (12), ಮಣಿಕಂಠ (26) ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮತ್ತೊಂದು ಪ್ರಕರಣದಲ್ಲಿ ಭಕ್ತರಹಳ್ಳಿ ವಾಸಿ ಜಯಮ್ಮ (67), ನ್ಯಾಯಬೆಲೆ ಅಂಗಡಿಯಿಂದ ರೇಷನ್ ಪಡೆದುಕೊಂಡು ಮನೆಗೆ ವಾಪಸ್ ಹೋಗುವಾಗ ಭಕ್ತರಹಳ್ಳಿ ಗೇಟ್ ಬಳಿ ತುಮಕೂರು ಕಡೆಯಿಂದ ಬಂದ ಅಹಾರ ಇಲಾಖೆಯ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಗಾಯಗೊಂಡ ಅಕೆಯ ಸಹೋದರ ಸಿದ್ದೇಗೌಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಯುವಕ ಅನುಮಾನಸ್ಪದ ಸಾವು: ಕುಣಿಗಲ್ ತಾಲೂಕಿನ ವ್ಯಾಪ್ತಿಯ ಬೊಮ್ಮನಗುಡ್ಡದಲ್ಲಿ ಕಲ್ಲು ಗಣಿಗಾರಿಕೆಯಿಂದ ತೆರವಾಗಿದ್ದ ಹಳ್ಳದಲ್ಲಿ ಅನುಮಾನಸ್ಪವಾಗಿ ತಾವರೆಕೆರೆ ನಿವಾಸಿ ರಾಜೇಶ್ (28) ಸಾವನ್ನಪಿದ್ದಾನೆ. ಅಗ್ನಿಶಾಮಕದಳ ಸಿಬ್ಬಂದಿ ಶವ ಹೊರ ತೆಗೆದರು. ರಾಜೇಶ್‌ಗೆ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದೆ, ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹುಣಸೆಮರಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು: ಶಿರಾ ತಾಲೂಕಿನ ಕುರುಬರಾಮನಹಳ್ಳಿ ಗೇಟ್ ಬಳಿ ಶನಿವಾರ ರಾತ್ರಿ ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹುಣಸೆಮರಕ್ಕೆ ಡಿಕ್ಕಿ ಹೊಡೆದಿದ್ದು, ಇಬ್ಬರು ಸ್ಥಳದಲ್ಲಿಯೇ ಸಾವನಪ್ಪಿ, ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮಡಕಶಿರಾ ತಾಲೂಕಿನ ದ್ಯಾವಗಾನಹಳ್ಳಿ ಹನುಮಂತರಾಯಪ್ಪ(38), ಪಾವಗಡ ತಾಲೂಕಿನ ಶೈಲಾಪುರ ಪವನ್(30) ಮೃತರು. ಗಾಯಗೊಂಡ ಕಿರಣ್ ಮತ್ತು ಪ್ರಶಾಂತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿದ್ದ ಇವರು ಸ್ವಗ್ರಾಮಗಳಿಗೆ ತೆರಳಲು ಕಾರಿನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಪಟ್ಟನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts