More

    ಎಸ್ಸೆಸ್ಸೆಲ್ಸಿಯಲ್ಲಿ ತುಮಕೂರು ತಾಲೂಕು ಕಳಪೆ ಸಾಧನೆ

    ತುಮಕೂರು: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತುಮಕೂರು ತಾಲೂಕು ಅತ್ಯಂತ ಕಳಪೆ ಸಾಧನೆ ಮಾಡಿದೆ. ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಚಿಕ್ಕನಾಯಕನಹಳ್ಳಿ ಶೇ.83.26 ಪಡೆದು ಮೊದಲ ಸ್ಥಾನಗಳಿಸಿದ್ದರೆ, ತುಮಕೂರು ತಾಲೂಕು ಶೇ.69.25 ಫಲಿತಾಂಶದೊಂದಿಗೆ ಕೊನೆಯ ಸ್ಥಾನಗಳಿಸಿ ಅತ್ಯಂತ ಕಳಪೆ ಸಾಧನೆ ಮಾಡಿದೆ.

    ತುರುವೇಕೆರೆ (ಶೇ.81.24)-2, ತಿಪಟೂರು (ಶೇ.80.78)-3, ಕುಣಿಗಲ್ (ಶೇ.77.94)-4, ಗುಬ್ಬಿ (ಶೇ.77.94)-5ನೇ ಸ್ಥಾನ ಪಡೆದಿದೆ.
    ಶಿರಾ ಫಸ್ಟ್ , ಪಾವಗಡ ಲಾಸ್ಟ್: ಇನ್ನೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಶಿರಾ ತಾಲೂಕು ಶೇ.70.95 ಫಲಿತಾಂಶದೊಂದಿಗೆ ಮೊದಲ ಸ್ಥಾನ ಪಡೆದರೆ, ಪಾವಗಡ ತಾಲೂಕು ಶೇ.56.62ರೊಂದಿಗೆ ಕೊನೆ ಸ್ಥಾನಗಳಿಸಿ ಕಳಪೆ ಸಾಧನೆ ಮಾಡಿದೆ. ಮಧುಗಿರಿ (ಶೇ.63.55)-2, ಕೊರಟಗೆರೆ (ಶೇ.61.98)-3 ನೇ ಸ್ಥಾನ ಪಡೆದಿದೆ.

    ಪಾತಾಳಕ್ಕೆ ಕುಸಿದ ಮಧುಗಿರಿ: ಕಳೆದ ಬಾರಿ ಶೇ.93.23ರಷ್ಟು ಫಲಿತಾಂಶ ಪಡೆದು 9ನೇ ಸ್ಥಾನಗಳಿಸಿದ್ದ ಮಧುಗಿರಿ ಶೈಕ್ಷಣಿಕ ಜಿಲ್ಲೆಯು ಶೇ. 62.44 ಫಲಿತಾಂಶಗಳಿಸಿ 30ನೇ ಸ್ಥಾನಕ್ಕೆ ಕುಸಿದಿದೆ. ಒಟ್ಟಾರೆ ಫಲಿತಾಂಶ ಶೇ.30.79ರಷ್ಟು ಕಡಿಮೆ ಆಗಿದೆ. ಇನ್ನೂ ತುಮಕೂರು ಶೈಕ್ಷಣಿಕ ಜಿಲ್ಲೆ 20ನೇ ಸ್ಥಾನದಿಂದ 16ನೇ ಸ್ಥಾನಕ್ಕೇ ಜಿಗಿದಿದೆಯಾದರು ಸರಾಸರಿ ಫಲಿತಾಂಶದಲ್ಲಿ ಶೇ.14.27ರಷ್ಟು ಕುಸಿದಿರುವುದು ಶೈಕ್ಷಣಿಕ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts