More

    ತಿರುಚಿದ ವೀಡಿಯೋ ಹರಿಬಿಟ್ಟವರ ಪತ್ತೆಗೆ ಮೇ 15ರ ಗಡುವು

    ಶಿವಮೊಗ್ಗ: ಚುನಾವಣಾ ಹಿಂದಿನ ದಿನ ನನ್ನ ತಿರುಚಿದ ವೀಡಿಯೋ ಅಥವಾ ಫೋಟೋಗಳನ್ನು ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವರನ್ನು ಮೇ 15ರೊಳಗೆ ಪತ್ತೆ ಮಾಡಿ ಬಂಧಿಸಬೇಕು. ಇಲ್ಲವಾದರೆ ಹೋರಾಟ ಮಾಡುವುದು ಅನಿವಾರ್ಯ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಗಡುವು ಕೊಟ್ಟರು.

    ನನ್ನ ಅನುಮತಿ ಇಲ್ಲದೇ ನೀಚ ಕೃತ್ಯವೆಸಗಿದ್ದಾರೆ. ನಕಲಿ ವೀಡಿಯೋ ಮತ್ತು ಕರಪತ್ರಗಳನ್ನು ಹಂಚಿಕೆ ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಚುನಾವಣಾ ರಣರಂಗದಲ್ಲಿ ನೇರಾನೇರ ಹೋರಾಟ ಇರಬೇಕೋ ವಿನಃ ದ್ರೋಹ ಬಗೆಯಬಾರದು. ಈ ಸಂಬಂಧ ಚುನಾವಣಾ ಆಯೋಗ, ಎಸ್‌ಪಿಗೆ ದೂರು ಕೊಟ್ಟಿದ್ದೇನೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ಮುಸ್ಲಿಂ ಮತದಾರರು ಹೆಚ್ಚು ಜಾಗೃತರಾಗಿ ಅತಿ ಹೆಚ್ಚು ಮತದಾನ ಮಾಡಿದ್ದಾರೆ. ಇದನ್ನು ಹಿಂದೂ ಸಮಾಜ ನೋಡಿ ಗಮನಿಸಬೇಕಿದೆ. ಹಿಂದೂಗಳು ಜಾತಿ ಹೆಸರಲ್ಲಿ ರಾಜಕೀಯ ಮಾಡಿದರೆ ಮುಸ್ಲಿಮರು ಒಗ್ಗಟ್ಟಾಗಿ ಮತದಾನ ಮಾಡಿದ್ದಾರೆ ಎಂದು ಹೇಳಿದರು.
    ಹಿಂದುತ್ವ, ತಮಗೆ ಆದ ಅನ್ಯಾಯ ಮತ್ತು ಬಿಜೆಪಿ ಶುದ್ಧೀಕರಣದ ಕಾರಣಕ್ಕೆ ನಾನು ಸ್ಪರ್ಧೆ ಮಾಡಿದ್ದೆ. ಅದೇ ಕಾರಣಕ್ಕೆ ಮತದಾರರು ನನಗೆ ಮತಹಾಕಿದ್ದಾರೆ. ಬಿಜೆಪಿಯಲ್ಲಿ ಶುದ್ಧೀಕರಣ ಆಗಿರುವುದು ಸಮಾಧಾನ ತರಿಸಿದೆ. ಗೆಲ್ಲುವ ವಿಶ್ವಾಸವಿದೆ ಎಂದರು.

    ಈಶ್ವರಪ್ಪ ಸುದ್ದಿಗೋಷ್ಠಿಯಲ್ಲೂ ಪೆನ್‌ಡ್ರೈವ್ ಸದ್ದು
    ಹಾಸನ ಪೆನ್‌ಡ್ರೈವ್ ಇಡೀ ದೇಶದಲ್ಲಿ ಸದ್ದು ಮಾಡುತ್ತಿದ್ದು, ಈ ನಡುವೆ ಗುರುವಾರ ಸುದ್ದಿಗೋಷ್ಠಿ ನಡೆಸಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕೂಡ ಪೆನ್‌ಡ್ರೈವ್‌ಅನ್ನು ಪತ್ರಕರ್ತರಿಗೆ ನೀಡಿದ್ದು ಅಚ್ಚರಿ ಮತ್ತು ಕುತೂಹಲಕ್ಕೆ ಕಾರಣವಾಗಿತ್ತು. ಚುನಾವಣಾ ಹಿಂದಿನ ದಿನ ನಕಲಿ ವೀಡಿಯೋ ಹರಿಬಿಟ್ಟಿರುವವರ ಹಿಂದೆ ಸಂಸದ ಬಿ.ವೈ.ರಾಘವೇಂದ್ರ ಕೈವಾಡ ಇದೆ ಎಂದು ಆರೋಪಿಸಿದರು. ಈಶ್ವರಪ್ಪ ಅವರು ಕೊಟ್ಟ ಪೆನ್‌ಡ್ರೈವ್ ಓಪನ್ ಮಾಡಿದ ಪತ್ರಕರ್ತರಿಗೆ ಅದರಲ್ಲಿ ಬಿಜೆಪಿಯವರು ಟ್ರೋಲ್ ಮಾಡಿದ್ದಾರೆ ಎನ್ನಲಾದ ಈಶ್ವರಪ್ಪನವರ ಭಾಷಣದ ತುಣುಕ ಮಾತ್ರ ಇರುವುದು ಕಂಡುಬಂದಿತು.

    See also  ಉಚಿತ ಹೃದ್ರೋಗ ತಪಾಸಣೆ ಶಿಬಿರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts