More

    20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಪರಿಣಾಮ ಸೆನ್ಸೆಕ್ಸ್ 1,400 ಅಂಶ ಏರಿಕೆ

    ಮುಂಬೈ: ಕರೊನಾ ಲಾಕ್​ಡೌನ್​ ಪರಿಣಾಮ ಅರ್ಥವ್ಯವಸ್ಥೆಗೆ ಆಗಿರುವ ನಷ್ಟ ಭರ್ತಿ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ನಿನ್ನೆ 20 ಲಕ್ಷ ಕೋಟಿ ರೂಪಾಯಿಗಳ ಸ್ವಾವಲಂಬಿ ಭಾರತ ಆರ್ಥಿಕ ಪ್ಯಾಕೇಜ್​ ಘೋಷಿಸಿತ್ತು. ಇದು ದೇಶೀಯ ಹೂಡಿಕೆದಾರರ ಭಾವನೆಗಳಿಗೆ ಉತ್ತೇಜನ ನೀಡಿದ್ದು, ಇದರ ಪರಿಣಾಮ ಇಂದು ಷೇರುಪೇಟೆಯ ಮೇಲೂ ಆಗಿದೆ. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 1,400ಕ್ಕೂ ಹೆಚ್ಚು ಅಂಶ ಏರಿಕೆ ದಾಖಲಿಸಿದೆ.

    ಇದನ್ನೂ ಓದಿ: ಸ್ಥಳೀಯ ಉತ್ಪನ್ನಗಳ ಮಹತ್ವ ತಿಳಿಸಿದೆ ಕೊವಿಡ್​-19, ಸ್ವಾವಲಂಬಿಯಾಗುವುದೇ ಗುರಿ: ಪ್ರಧಾನಿ ಮೋದಿ

    ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ ಬುಧವಾರದ ಆರಂಭಿಕ ವಹಿವಾಟಿನಲ್ಲಿ 32,845.48 ಅಂಶಕ್ಕೆ ಏರಿ, ಆನಂತರದಲ್ಲಿ 818.68 ಅಂಶ ಏರಿ 32,189.80 ಅಂಶದಲ್ಲಿ ವಹಿವಾಟು ಮುಂದುವರಿಸಿದೆ. ಇದೇ ರೀತಿ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​(ಎನ್​ಎಸ್​ಇ) ಸೂಚ್ಯಂಕ ನಿಫ್ಟಿ ಕೂಡ 213.50 ಅಂಶ ಏರಿಕೆ ದಾಖಲಿಸಿ 9,410.05 ಅಂಶದಲ್ಲಿ ದಿನದ ವಹಿವಾಟು ಮುಂದುವರಿಸಿದೆ.

    ಇದನ್ನೂ ಓದಿ: ಕರೊನಾ ಬಿಕ್ಕಟ್ಟು ನಿರ್ವಹಣೆಗಾಗಿ 20 ಲಕ್ಷ ಕೋಟಿ ರೂ.ವಿಶೇಷ ಆರ್ಥಿಕ ಪ್ಯಾಕೇಜ್​ ಘೋಷಿಸಿದ ಪ್ರಧಾನಿ ಮೋದಿ

    ಸೆನ್ಸೆಕ್ಸ್ ಪಟ್ಟಿಯಲ್ಲಿ ಐಸಿಐಸಿಐ ಬ್ಯಾಂಕು ಷೇರುಗಳು ಶೇಕಡ 7 ಏರಿಕೆ ದಾಖಲಿಸಿ ಮುಂಚೂಣಿಯಲ್ಲಿದ್ದರೆ, ಎಲ್​ಆ್ಯಂಡ್​ಟಿ, ಏಕ್ಸಿಸ್ ಬ್ಯಾಂಕ್​, ಬಜಾಜ್ ಫೈನಾನ್ಸ್​, ಹೀರೋ ಮೋಟೋಕಾರ್ಪ್​, ಎಂಆ್ಯಂಡ್ಎಂ, ಅಲ್ಟ್ರಾಟೆಕ್​ ಸಿಮೆಂಟ್, ಮಾರುತಿ ಕಂಪನಿಯ ಷೇರುಗಳು ಕೂಡ ಏರಿಕೆ ದಾಖಲಿಸಿವೆ. ಉಳಿದಂತೆ, ನೆಸ್ಟ್ಲೆ ಇಂಡಿಯಾ, ಭಾರ್ತಿ ಏರ್​ಟೆಲ್​, ಸನ್ ಫಾರ್ಮಾ, ರಿಲಯನ್ಸ್ ಇಂಡಸ್ಟ್ರೀಸ್​ ಕಂಪನಿಯ ಷೇರುಗಳು ನಷ್ಟದಲ್ಲಿ ವಹಿವಾಟು ನಡೆಸಿವೆ.

    ಇದನ್ನೂ ಓದಿ: ಹೂಡಿಕೆ ಆಕರ್ಷಣೆಗೆ ‘ಟ್ಯಾಕ್ಸ್ ಹಾಲಿಡೆ?’

    ಮಂಗಳವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್​ 190.10 ಅಂಶ ಇಳಿಕೆಯೊಂದಿಗೆ 31,371.12 ಅಂಶದಲ್ಲಿ ನಿನ್ನೆಯ ವಹಿವಾಟನ್ನು ಕೊನೆಗೊಳಿಸಿತ್ತು. ಇದೇ ರೀತಿ, ನಿಫ್ಟಿ ಕೂಡ 42.65 ಅಂಶ ನಷ್ಟದೊಂದಿಗೆ 9.196.55 ಅಂಶದಲ್ಲಿ ವಹಿವಾಟನ್ನು ಮುಗಿಸಿತ್ತು. ಷೇರುಪೇಟೆಯ ತಾತ್ಕಾಲಿಕ ಡೇಟಾ ಪ್ರಕಾರ, ಫಾರಿನ್​ ಪೋರ್ಟ್​ಫೋಲಿಯೋ ಇನ್​ವೆಸ್ಟರ್ಸ್​ 1,662.03 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿ ಷೇರುಗಳನ್ನು ಮಂಗಳವಾರ ಮಾರಾಟ ಮಾಡಿದ್ದಾರೆ. (ಏಜೆನ್ಸೀಸ್​)

    ಹೆಡ್​ಲೈನ್​ ಹುಡುಕಿದಂತಿದೆ ಪ್ಯಾಕೇಜ್​ ಎಂದ ಕಾಂಗ್ರೆಸ್​; ಸ್ವಾವಲಂಬಿ ಭಾರತವನ್ನಾಗಿಸುತ್ತೆ ಎಂದ ಬಿಜೆಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts