More

    ಸೆನ್ಸೆಕ್ಸ್ 350 ಅಂಶ, ನಿಫ್ಟಿ 93 ಅಂಶ ಏರಿಕೆಯೊಂದಿಗೆ ದಿನದ ವಹಿವಾಟು ಅಂತ್ಯ

    ಮುಂಬೈ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ ಎರಡನೇ ದಿನವೂ ಏರಿಕೆ ತೋರಿದ್ದು, ಬುಧವಾರದ ವಹಿವಾಟಿನಲ್ಲಿ 350 ಅಂಶ ಏರಿಕೆ ದಾಖಲಿಸಿದೆ. ಇದೇ ವೇಳೆ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ (ನಿಫ್ಟಿ) ಕೂಡ 93 ಅಂಶ ಏರಿಕೆ ದಾಖಲಿಸಿದೆ. ಸೆನ್ಸೆಕ್ಟ್ ಪಟ್ಟಿಯನ್ನು ಎಚ್​ಯುಎಲ್​, ಐಸಿಐಸಿಐ ಬ್ಯಾಂಕು, ಕೊಟಾಕ್ ಬ್ಯಾಂಕು, ಆರ್​ಐಎಲ್​, ಎಚ್​ಡಿಎಫ್​ಸಿ ಬ್ಯಾಂಕು ಷೇರುಗಳು ಲಾಭಾಂಶದತ್ತ ಮುನ್ನಡೆಸಿದವು. ಜಾಗತಿಕ ಮಟ್ಟದಲ್ಲೂ ಪಾಸೆಟಿವ್ ಟ್ರೆಂಡ್ ಕಂಡುಬಂದಿತ್ತು.

    ಬುಧವಾರದ ವಹಿವಾಟು ಅಂತ್ಯಗೊಳ್ಳುವ ವೇಳೆಗೆ ಸೆನ್ಸೆಕ್ಸ್​ 349.76 ಅಂಶ ಏರಿದ್ದು 41,565.90 ರಲ್ಲೂ, ನಿಫ್ಟಿ 93.30 ಅಂಶ ಏರಿಕೆಯೊಂದಿಗೆ 12,201.20 ರಲ್ಲೂ ಕಾಣಿಸಿಕೊಂಡಿತ್ತು. ಸೆನ್ಸೆಕ್ಸ್ ಪಟ್ಟಿಯಲ್ಲಿ ಎಚ್​ಯುಎಲ್ ಗರಿಷ್ಠ ಶೇಕಡ 5 ಲಾಭಾಂಶ ಬಾಚಿದರೆ, ಕೊಟಾಕ್ ಬ್ಯಾಂಕು, ನೆಸ್ಟ್ಲೆ ಇಂಡಿಯಾ, ಐಸಿಐಸಿಐ ಬ್ಯಾಂಕು, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಏಷ್ಯನ್ ಪೇಂಟ್ಸ್​ ಮತ್ತು ಆರ್​ಐಎಲ್​ ಷೇರುಗಳು ಕೂಡ ಲಾಭಾಂಶ ದಾಖಲಿಸಿವೆ.

    ಇನ್ನೊಂದೆಡೆ, ಎಸ್​ಬಿಐ, ಇಂಡಸ್ಇಂಡ್​ ಬ್ಯಾಂಕು, ಸನ್ ಫಾರ್ಮಾ, ಅಲ್ಟ್ರಾಟೆಕ್ ಸಿಮೆಂಟ್​, ಪವರ್​ಗ್ರಿಡ್​, ಎನ್​ಟಿಪಿಸಿ ಷೇರುಗಳು ಶೇಕಡ 1.34ರಷ್ಟು ನಷ್ಟ ಅನುಭವಿಸಿವೆ. ಜಾಗತಿಕ ಮಾರುಕಟ್ಟೆಯ ಧನಾತ್ಮಕ ಟ್ರೆಂಡ್​ನಿಂದ ಪ್ರೇರರಣೆ ಪಡೆದ ದೇಶೀಯ ಮಾರುಕಟ್ಟೆ, ಕೊರೊನಾ ವೈರಸ್ ಆತಂಕದ ನಡುವೆಯೂ ಲಾಭ ಮಾಡಿಕೊಂಡಿವೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts