More

    ಅಲ್ಪ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ ಸೂಚ್ಯಂಕ: ಲೋಹ, ಎಫ್‌ಎಂಸಿಜಿ ಷೇರುಗಳಿಗೆ ಬೇಡಿಕೆ

    ಮುಂಬೈ: ಜಾಗತಿಕ ಟ್ರೆಂಡ್‌ ಮತ್ತು ವಿದೇಶಿ ನಿಧಿಯ ಒಳಹರಿವಿನ ಮಧ್ಯೆ ಲೋಹ ಮತ್ತು ಎಫ್‌ಎಂಸಿಜಿ ಷೇರುಗಳ ಲಾಭ ಗಳಿಸಿದ್ದರಿಂದ ಗುರುವಾರದಂದು ಬಿಎಸ್​ಇ ಮತ್ತು ನಿಫ್ಟಿ ಸೂಚ್ಯಂಕಗಳು ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದವು.

    30-ಷೇರುಗಳ ಬಿಎಸ್‌ಇ ಸೂಚ್ಯಂಕವು 33.40 ಅಂಕಗಳು ಅಥವಾ ಶೇಕಡಾ 0.05 ರಷ್ಟು ಪ್ರಗತಿ ಸಾಧಿಸಿ 74,119.39 ರ ಹೊಸ ಗರಿಷ್ಠ ಮಟ್ಟವನ್ನು ತಲುಪಿತು. ದಿನದ ವಹಿವಾಟಿನ ಅವಧಿಯಲ್ಲಿ, ಇದು 159.18 ಅಂಕಗಳಷ್ಟು ಜಿಗಿದು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 74,245.17 ತಲುಪಿತು.

    ನಿಫ್ಟಿ ಸೂಚ್ಯಂಕವು 19.50 ಅಂಕಗಳು ಅಥವಾ 0.09 ರಷ್ಟು ಏರಿಕೆಯಾಗಿ ದಾಖಲೆಯ 22,493.55 ಕ್ಕೆ ಮುಟ್ಟಿತು. ದಿನದ ವಹಿವಾಟಿನ ನಡುವೆ ಇದು, 51.6 ಅಂಕಗಳು ಅಥವಾ ಶೇಕಡಾ 0.22 ರಷ್ಟು ಏರಿಕೆಯಾಗಿ 22,525.65 ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿತ್ತು.

    ಅಮೆರಿಕದ ಮಾರುಕಟ್ಟೆಯಲ್ಲಿ ದೃಢವಾದ ಪ್ರವೃತ್ತಿ ಮತ್ತು ಎಫ್‌ಐಐ (ವಿದೇಶಿ ಸಾಂಸ್ಥಿಕ ಹೂಡಿಕೆದಾರರ) ಒಳಹರಿವಿನ ಮಧ್ಯೆ ಈಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳು ದಾಖಲೆಯ ಎತ್ತರವನ್ನು ತಲುಪಿದವು ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ನಿರೀಕ್ಷಿತ ಆರ್ಥಿಕ ಬೆಳವಣಿಗೆಯು ಲೋಹ ಮತ್ತು ಬಂಡವಾಳ ಸರಕುಗಳ ಷೇರುಗಳ ಉತ್ಸಾಹವನ್ನು ಹೆಚ್ಚಿಸಿದವು ಎಂದು ನಾಯರ್ ಹೇಳಿದರು.

    ಪ್ರಮುಖ ಷೇರುಗಳ ಪೈಕಿ ಟಾಟಾ ಸ್ಟೀಲ್ ಶೇ. 3.9ರಷ್ಟು ಏರಿಕೆ ಕಂಡಿತು. ಜೆಎಸ್‌ಡಬ್ಲ್ಯು ಸ್ಟೀಲ್ ಶೇ.2.09, ಟಾಟಾ ಮೋಟಾರ್ಸ್ ಶೇ.2.14, ಬಜಾಜ್ ಫಿನ್‌ಸರ್ವ್ ಶೇ.2 ಮತ್ತು ಬಜಾಜ್ ಫೈನಾನ್ಸ್ ಶೇ.1.71ರಷ್ಟು ಏರಿಕೆ ಕಂಡಿವೆ. ಏಷ್ಯನ್ ಪೇಂಟ್ಸ್, ಐಟಿಸಿ ಮತ್ತು ನೆಸ್ಲೆ ಕೂಡ ಪ್ರಮುಖವಾಗಿ ಲಾಭ ಗಳಿಸಿದವು. ಮಹೀಂದ್ರಾ ಮತ್ತು ಮಹೀಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಪವರ್ ಗ್ರಿಡ್ ಹಿಂದುಳಿದವು.

    ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.70 ಮತ್ತು ಮಿಡ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.39 ರಷ್ಟು ಏರಿತು. ಸೂಚ್ಯಂಕಗಳ ಪೈಕಿ ಲೋಹ ಶೇ.1.36, ಬಂಡವಾಳ ಸರಕುಗಳು ಶೇ.1.05ರಷ್ಟು ಏರಿಕೆ ಕಂಡಿವೆ. ಸರಕುಗಳು (ಶೇ 1), ಎಫ್‌ಎಂಸಿಜಿ (ಶೇ 0.98), ದೂರಸಂಪರ್ಕ (ಶೇ 0.98) ಮತ್ತು ಕೈಗಾರಿಕೆಗಳು (ಶೇ 0.93) ಸಹ ಹೆಚ್ಚಳ ಕಂಡವು. ಆಟೋ, ಬ್ಯಾಂಕೆಕ್ಸ್, ತೈಲ ಮತ್ತು ಅನಿಲ ಮತ್ತು ರಿಯಾಲ್ಟಿ ಹಿಂದುಳಿದಿವೆ.

    ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್ ಲಾಭ ದಾಖಲಿಸಿತು. ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ನಷ್ಟ ಅನುಭವಿಸಿದವು. ಐರೋಪ್ಯ ಮಾರುಕಟ್ಟೆಗಳಲ್ಲಿ ಮಿಶ್ರ ವಹಿವಾಟು ನಡೆಸಿದವು. ಅಮೆರಿಕದ ಮಾರುಕಟ್ಟೆಗಳು ಬುಧವಾರ ಲಾಭ ಕಂಡವು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬುಧವಾರ 2,766.75 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಬುಧವಾರ ಬಿಎಸ್‌ಇ ಸೂಚ್ಯಂಕವು 408.86 ಜಿಗಿದು ಹೊಸ ದಾಖಲೆಯ ಗರಿಷ್ಠ ಮಟ್ಟವಾದ 74,085.99 ಮುಟ್ಟಿತ್ತು. ನಿಫ್ಟಿ ಸೂಚ್ಯಂಕವು 117.75 ಅಂಕಗಳಷ್ಟು ಹೆಚ್ಚಳವಾಗಿ 22,474.05 ರ ಹೊಸ ಗರಿಷ್ಠ ಮಟ್ಟವನ್ನು ತಲುಪಿತ್ತು.

    ಈ 5 ಷೇರುಗಳ ಬೆಲೆ ಗುರುವಾರ ಒಂದೇ ದಿನದಲ್ಲಿ 20%ರಷ್ಟು ಏರಿಕೆ: ಶುಕ್ರವಾರವೂ ಈ ಸ್ಟಾಕ್​ಗಳಲ್ಲಿ ಲಾಭದ ನಿರೀಕ್ಷೆ

    ಟಾಟಾ ಮಿಡ್ ಕ್ಯಾಪ್ ಫಂಡ್ ಸಿಪ್​: 10 ಸಾವಿರವಾಯ್ತು 1.42 ಕೋಟಿ ರೂಪಾಯಿ!

    1:5 ಸ್ಟಾಕ್ ಸ್ಪ್ಲಿಟ್, 1:1 ಬೋನಸ್ ಷೇರು ನೀಡುತ್ತಿದೆ ಐಟಿ ಕಂಪನಿ​: 3 ತಿಂಗಳಲ್ಲಿ 265% ಏರಿಕೆ ದಾಖಲಿಸಿದ ಮಲ್ಟಿಬ್ಯಾಗರ್​ ಸ್ಟಾಕ್​ಗೆ ಮತ್ತೆ ಬೇಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts