More

    ಐಸಿಸಿ ಮಹಿಳಾ ಟಿ20​: ಬ್ಯಾಟಿಂಗ್​ ರ‍್ಯಾಂಕಿಂಗ್​ನಲ್ಲಿ ನಂ.1 ಪಟ್ಟಕ್ಕೇರಿದ ಟೀಮ್​ ಇಂಡಿಯಾದ ಲೇಡಿ ವೀರೇಂದ್ರ ಸೆಹ್ವಾಗ್​​

    ನವದೆಹಲಿ: ಕಾಂಗರೂ ನಾಡು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾರತದ ಯುವ ಆರಂಭಿಕ ಆಟಗಾರ್ತಿ 16 ವರ್ಷದ ಶಫಾಲಿ ವರ್ಮಾ ಅವರು ತಮ್ಮ ಅದ್ಭುತ ಪ್ರದರ್ಶನದ ನೆರವಿನೊಂದಿಗೆ ಐಸಿಸಿ ಮಹಿಳಾ ಟಿ20 ಬ್ಯಾಟಿಂಗ್​ ರ‍್ಯಾಂಕಿಂಗ್​ನಲ್ಲಿ 19 ಸ್ಥಾನ ಜಿಗಿತ ಕಾಣುವುದರೊಂದಿಗೆ ನಂಬರ್​ 1 ಸ್ಥಾನವನ್ನು ಅಲಂಕರಿಸಿದ್ದಾರೆ.

    ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ(ಐಸಿಸಿ) ರ‍್ಯಾಂಕಿಂಗ್​ ಪಟ್ಟಿಯನ್ನು ಬುಧವಾರವಷ್ಟೇ ಬಿಡುಗಡೆಗೊಳಿಸಿದೆ. ಇಲ್ಲಿಯವರೆಗೆ ಶಫಾಲಿ ಕೇವಲ 18 ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಆದರೆ ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲಿ ತಮ್ಮ ಗಮನಾರ್ಹ ಬ್ಯಾಟಿಂಗ್​ ಪ್ರದರ್ಶನ ಮೂಲಕ ಈ ಸ್ಥಾನವನ್ನು ಗಿಟ್ಟಿಸಿದ್ದಾರೆ.

    ಟಿ20ಯಲ್ಲಿ 146.96 ಬ್ಯಾಟಿಂಗ್​ ಸರಾಸರಿಯಲ್ಲಿ ಶಫಾಲಿ 485 ರನ್​ ಗಳಿಸಿದ್ದಾರೆ. ಸದ್ಯ ನಡೆಯುತ್ತಿರುವ ಮಹತ್ವದ ಟೂರ್ನಿಯಲ್ಲಿ ನಾಲ್ಕು ಇನ್ನಿಂಗ್ಸ್​ ಆಡಿರುವ ಶಫಾಲಿ ನ್ಯೂಜಿಲೆಂಡ್​(46) ಮತ್ತು ಶ್ರೀಲಂಕಾ (46) ನಡುವಿನ ಇನ್ನಿಂಗ್ಸ್​ನಲ್ಲಿ ಅದ್ಭುತ ರನ್​ ಕಲೆಹಾಕುವ ಮೂಲಕ ಒಟ್ಟು 161 ರನ್​ ಗಳಿಸಿದ್ದಾರೆ. ಈ ಮೂಲಕ ನಂಬರ್​ ಒನ್​ ಸ್ಥಾನಕ್ಕೇರಿದ್ದಲ್ಲದೆ, ತಂಡವು ಸೆಮಿಫೈನಲ್​ ಹಂತ ತಲುಪವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇನ್ನು ಉಳಿದಂತೆ ಸ್ಮೃತಿ ಮಂದಾನ ಬ್ಯಾಟಿಂಗ್​ನಲ್ಲಿ ಕೊಂಚ ಮಂಕಾಗಿದ್ದು, ರ‍್ಯಾಂಕಿಂಗ್​ನಲ್ಲಿ ಎರಡು ಸ್ಥಾನ ಕುಸಿದು 6ನೇ ಸ್ಥಾನದಲ್ಲಿದ್ದಾರೆ.

    ಬೌಲಿಂಗ್​ ವಿಭಾಗದಲ್ಲಿ ಪೂನಮ್​ ಯಾದವ್​ ಆಸಿಸ್​ ವಿರುದ್ಧ ನಾಲ್ಕು ವಿಕೆಟ್​ಗಳನ್ನು ಪಡೆಯುವುದರೊಂದಿಗೆ 4 ಸ್ಥಾನ ಜಿಗಿದು 8ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ದೀಪ್ತಿ ಶರ್ಮಾ ಮತ್ತು ರಾಧಾ ಯಾದವ್​ ಕ್ರಮವಾಗಿ 5 ಮತ್ತು 7ನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್​​ನಲ್ಲಿ ಇಂಗ್ಲೆಂಡ್​ ಸೋಫಿ ಎಕ್ಲೆಸ್ಟೋನ್​ ನಂಬರ್​ 1 ಸ್ಥಾನದಲ್ಲಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts