More

    ಹಿರಿಯ ನಿರ್ಮಾಪಕರೆಲ್ಲ ಮೀಟಿಂಗ್​ ಮಾಡಿದ್ದು ಯಾಕೆ?

    ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ಸೂಕ್ತ ತನಿಖೆಯಾಗಬೇಕು ಮತ್ತು ಮಂಡಳಿಯ ಸದಸ್ಯರಿಗೆ ಸತ್ಯಾಂಶ ಗೊತ್ತಾಗಬೇಕು ಎಂದು ಕನ್ನಡದ ಹಲವು ಜನಪ್ರಿಯ ನಿರ್ಮಾಪಕರು ಮತ್ತು ವಿತರಕರು ಆಗ್ರಹಿಸಿದ್ದಾರೆ.

    ಇದನ್ನೂ ಓದಿ: ರಿಷಭ್​ ಶೆಟ್ಟಿ ಅಭಿನಯದ ‘ಹೀರೋ’ ಟ್ರೇಲರ್​ ನೋಡಿದ್ರಾ?

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕೆಲವು ವರ್ಷಗಳಿಂದ ಸ್ವಜನ ಪಕ್ಷಪಾತ, ಹಣ ದುರುಪಯೋಗ, ಬೈಲಾ ಉಲ್ಲಂಘನೆ, ನಿಯಮ ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ನಿರ್ಮಾಪಕ ಮತ್ತು ಮಂಡಳಿಯ ಸದಸ್ಯರಾಗಿರುವ ಕೃಷ್ಣೇಗೌಡ ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗೆ ದೂರು ಸಲ್ಲಿಸಿದ್ದರು. ಈ ಸಂಬಂಧ ರಿಜಿಸ್ಟ್ರಾರ್ ಅವರು ವಾಣಿಜ್ಯ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆದು ಸೂಕ್ತ ತನಿಖೆ ನಡೆಸುವಂತೆ ಹೇಳಿದ್ದರು. ಆದರೆ, ತನಿಖೆ ನಡೆಸದೆ, ಇಡೀ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂಬುದು ಮಂಡಳಿಯ ಇತರ ಸದಸ್ಯರ ಆರೋಪ.

    ಈ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ನಿರ್ದೇಶಕ ಮತ್ತು ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು, ‘ಕೃಷ್ಣೇಗೌಡ ಅವರು 20 ಅಂಶಗಳ ದೂರನ್ನು ಸಲ್ಲಸಿದ್ದಾರೆ. ಅದಕ್ಕೆ ಪ್ರತಿಯಾಗಿ ಮಂಡಳಿಗೆ ರಿಜಿಸ್ಟ್ರಾರ್ ಪತ್ರ ಬರೆದಿದ್ದಾರೆ. ಆದರೆ, ಮಂಡಳಿಯಿಂದ ಯಾವುದೇ ಲಿಖಿತ ಉತ್ತರ ಬಂದಿಲ್ಲ. ಹೀಗಿರುವಾಗ ಆರೋಪಗಳು ಸತ್ಯವೋ, ಸುಳ್ಳೋ ಎಂಬ ವಿಷಯ ಹೊರಬರಬೇಕಿದೆ. ನಾವು ಸದಸ್ಯರಾಗಿರುವುದರಿಂದ ನಿಜಾಂಶ ತಿಳಿಯುವ ಹಕ್ಕು ನಮಗಿದೆ. ಹಾಗಾಗಿ ಸೂಕ್ತ ತನಿಖೆ ನಡೆಸಿ, ಸತ್ಯಾಸತ್ಯತೆಯ ಪರೀಕ್ಷೆ ನಡೆಸಬೇಕೆಂದು ರಿಜಿಸ್ಟ್ರಾರ್ ಅವರಿಗೆ 70 ಸದಸ್ಯರು ಮನವಿ ಸಲ್ಲಿಸಿದ್ದೇವೆ’ ಎಂದರು.

    ಮಂಡಳಿಯ ಮತ್ತೊಬ್ಬ ಸದಸ್ಯ ಪಿ. ಶೇಷಾದ್ರಿ ಮಾತನಾಡಿ, ‘ಅವ್ಯವಹಾರದ ಆರೋಪಗಳು ಕೇಳಿಬಂದಿವೆ. ಆದರೆ, ಯಾವುದು ಸರಿ, ಯಾವುದು ತಪ್ಪು ಎಂದು ಗೊತ್ತಾಗುತ್ತಿಲ್ಲ. ಮಂಡಳಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಸದಸ್ಯರಿದ್ದು, ಸಕ್ರಿಯವಾಗಿರುವವರು ಇದರ ವಿರುದ್ಧ ಧ್ವನಿ ಎತ್ತಬೇಕು. ನಮ್ಮನ್ನೂ ಒಳಗೊಂಡಂತೆ ಸ್ವಚ್ಛವಾಗಬೇಕು’ ಎಂದರು.

    ಇದನ್ನೂ ಓದಿ: ‘ಸಲಾರ್ ಚಿತ್ರತಂಡದಿಂದ ಬಂತು ಇನ್ನೊಂದು ಸುದ್ದಿ …

    ಈ ಪತ್ರಿಕಾಗೋಷ್ಠಿಯಲ್ಲಿ ನಾಗತಿಹಳ್ಳಿ ಚಂದ್ರಶೇಖರ್, ಕವಿತಾ ಲಂಕೇಶ್, ಜೈಜಗದೀಶ್, ವಿಜಯಲಕ್ಷ್ಮೀ ಸಿಂಗ್, ಶೈಲೇಂದ್ರ ಬಾಬು, ಜೋಸೈಮನ್, ರಾಮು ಮುಂತಾದವರು ಹಾಜರಿದ್ದರು.

    ‘ಏಕ್​ ಲವ್​ ಯಾ’ ಕುರಿತು ಹೊಸ ಅಪ್​ಡೇಟ್​ ಕೊಟ್ಟ ಪ್ರೇಮ್​ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts