More

    ಹಿರಿಯ ನಟ ಟಿ.ಎಸ್​.ಲೋಹಿತಾಶ್ವ ನಿಧನ

    ಬೆಂಗಳೂರು: ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡದ ಹಿರಿಯ ನಟ ಟಿ.ಎಸ್​.ಲೋಹಿತಾಶ್ವ (80) ಮಂಗಳವಾರ ಸಂಜೆ ನಿಧನರಾಗಿದ್ದಾರೆ. ಕನ್ನಡದ ಜನಪ್ರಿಯ ನಟ ಶರತ್​ ಲೋಹಿತಾಶ್ವ ಸೇರಿದಂತೆ ಮೂವರು ಮಕ್ಕಳನ್ನು ಅವರು ಅಗಲಿದ್ದಾರೆ.

    ಇದನ್ನೂ ಓದಿ: ಭಾರತದ ಅತೀ ದೊಡ್ಡ ಪ್ಯಾನ್​ ಇಂಡಿಯಾ ಚಿತ್ರವನ್ನು ನಿರ್ದೇಶಿಸುತ್ತಾರಂತೆ ಶಂಕರ್​!

    ಕಳೆದ ತಿಂಗಳು ಉಸಿರಾಟದ ತೊಂದರೆ ಮತ್ತು ಹೃದಯಾಘಾತವಾದ್ದರಿಂದ ಅವರನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್​ನ ಸಾಗರ್​ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟನಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ನಿಧನರಾಗಿದ್ದಾರೆ.

    ತುಮಕೂರಿನ ತೊಂಡಗೆರೆ ಮೂಲದ ಲೋಹಿತಾಶ್ವ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್.ಡಿ. ಪಡೆದವರು. ಸಾಹತ್ಯ ರಚನೆಯಲ್ಲೂ ತೊಡಗಿಸಿಕೊಂಡಿದ್ದ ಅವರು ನಾಟಕ, ಕವನ ಸಂಕಲನ, ಕಥಾ ಸಂಕಲನವನ್ನೂ ಬರೆದಿದ್ದಾರೆ. ಪ್ರಮುಖವಾಗಿ ಮುಖ್ಯಮಂತ್ರಿ ಚಂದ್ರು ಅಭಿನಯದ ‘ಮುಖ್ಯಮಂತ್ರಿ’ ನಾಟಕವನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದು ಅವರೇ.

    ನಟನೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅವರು, ಇದುವರೆಗೂ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಗೀತಾ’, ‘ಎಸ್​.ಪಿ. ಸಾಂಗ್ಲಿಯಾನ’, ‘ನೀ ಬರೆದ ಕಾದಂಬರಿ’,, ‘ಸಮಯದ ಗೊಂಬೆ’, ‘ಇಂದ್ರಜಿತ್​’, ‘ಹುಲಿಯಾ’, ‘ಕಾಡಿನ ರಾಜ’, ‘ಪ್ರತಾಪ್​’, ‘ರಣಚಂಡಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುವುದರ ಜತೆಗೆ ‘ಪಂಚಮ’, ‘ಕತ್ತಲೆ ದಾರಿ ದೂರ’, ‘ಹುಲಿಯ ನೆರಳು’, ‘ಕುಬಿ ಮತ್ತು ಇಯಾಲ’, ‘ಮೋಟೆ ರಾಮ್‌’ ಮತ್ತು ‘ದಂಗೆಯ ಮುಂಚಿನ ದಿನಗಳು’ ಮುಂತಾದ ನಾಟಕಗಳಲ್ಲಿ ಅವರು ನಟಿಸಿದ್ದಾರೆ. ಲೋಹಿತಾಶ್ವ ಅವರ ಸಾಧನೆಗೆ ನಾಟಕ ಅಕಾಡೆಮಿ, ರಾಜ್ಯೋತ್ಸವ ಮುಂತಾದ ಪ್ರಶಸ್ತಿಗಳು ಸಿಕ್ಕಿವೆ.

    ಇದನ್ನೂ ಓದಿ: ಹೊಸ ಚಿತ್ರದಲ್ಲಿ ಮಾಸ್ಟರ್​ ಚೆಫ್​ ಆದ ಅನುಷ್ಕಾ ಶೆಟ್ಟಿ …

    ಬುಧವಾರ ಸಂಜೆ ಸ್ವಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

    ‘ಕಂಬ್ಳಿಹುಳ’ ಸಿನಿಮಾ ನೋಡಿ ಪ್ರೇಕ್ಷಕರಿಗೆ ಹೊಸ ಆಫರ್ ಕೊಟ್ಟ ‘ಸಿಂಪಲ್’ ಸುನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts