More

    ಹಿರಿಯ ಪತ್ರಕರ್ತ ನಂಜುಂಡೇಗೌಡ ಅವರಿಗೆ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ

    ಬೆಂಗಳೂರು: ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಈ ಬಾರಿ ಹಿರಿಯ ಪತ್ರಕರ್ತರಾದ ಬಳ್ಳಾರಿಯ ವಿಶೇಷ ವರದಿಗಾರರಾದ ಹೊನಕೆರೆ ನಂಜುಂಡೇಗೌಡ ಅವರಿಗೆ ಲಭಿಸಿದೆ. ಅವರು ಪ್ರಜಾವಾಣಿ ಪತ್ರಿಕೆಯಲ್ಲಿ ಹಲವು ದಶಕಗಳಿಂದ ವಿವಿಧ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಿ ಕನ್ನಡ ಪತ್ರಿಕೋದ್ಯಮಕ್ಕೆ ಉತ್ತಮ ಸೇವೆ ಸಲ್ಲಿಸಿರುತ್ತಾರೆ.

    ಇದುವರೆಗೆ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿಯನ್ನು 29 ಹಿರಿಯ ಪತ್ರಕರ್ತರು ಪಡೆದಿದ್ದು, ಇವರು 30ನೇಯವರು. ಪ್ರಶಸ್ತಿ 15 ಸಾವಿರ ರೂ ನಗದು ಹಾಗೂ ಫಲಕ ಹೊಂದಿದೆ. ನಂಜುಂಡೇಗೌಡರು ನಡೆ-ನುಡಿಯಲ್ಲಿ ಕಟ್ಟುನಿಟ್ಟು. ಮೈಸೂರಿನ ಪತ್ರಕರ್ತರ ಪಡೆಗೆ ಸೇರಿದ ಇವರು ದೆಹಲಿ, ಧಾರವಾಡ, ಶಿವಮೊಗ್ಗ, ದಾವಣಗೆರೆ, ಬೆಂಗಳೂರಿನಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡವರು.

    ಪತ್ರಕರ್ತನಾದವನಿಗೆ ಹಳ್ಳಿಯಿಂದ ದಿಲ್ಲಿಯವರೆಗೆ ಅನುಭವ ಇರಬೇಕೆಂದು ಹೇಳುವುದುಂಟು. ಅದರಂತೆ ಹೊನಕೆರೆ ನಂಜುಂಡೇಗೌಡ ಅಪಾರ ಅನುಭವ ಪಡೆದುಕೊಂಡಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹೊನಕೆರೆ ಗ್ರಾಮದವರು.

    Nanjundegowda

    ಇದನ್ನೂ ಓದಿ: NIRF ರ್‍ಯಾಂಕಿಂಗ್‌| ದೇಶದ ಅತ್ಯುತ್ತಮ ವಿಶ್ವವಿದ್ಯಾಲಯ ವಿಭಾಗದಲ್ಲಿ ಐಐಎಸ್​ಸಿ ನಂ.1

    ಗ್ರಾಮೀಣ ಭಾಷೆಯ ಗಮ್ಮತ್ತು ಅವರ ಮಾತಿನಲ್ಲಿ ಹಾಗೆ ಉಳಿದುಕೊಂಡಿದೆ. ಒಟ್ಟು 35 ವರ್ಷಗಳ ಅನುಭವ. ಜಿ-೨೦ ಸಮ್ಮೇಳನದಿಂದ ಹಿಡಿದು ಧಾರವಾಡ ಜಿಲ್ಲೆಯ ಸತ್ತೂರು ಗ್ರಾಮದ ರೈತನ ಆತ್ಮಹತ್ಯೆವರೆಗೆ ಎಲ್ಲ ಆಗುಹೋಗುಗಳನ್ನು ವಸ್ತುನಿಷ್ಠವಾಗಿ ವರದಿ ಮಾಡಿದವರು.

    ಮನಮೋಹನಸಿಂಗ್, ಎಸ್.ಎಂ. ಕೃಷ್ಣ ಅವರೊಂದಿಗೆ ಪಾಕಿಸ್ತಾನ,ಸೌದಿ ಅರೇಬಿಯಾ ಕಂಡವರು. ನೇಪಾಳ ಭೂಕಂಪದ ನೋವನ್ನು ಅನುಭವಿಸಿದವರು. ಈಗ ಬಳ್ಳಾರಿಯಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಎಚ್ಚರದ ಹದ್ದಿನ ಕಣ್ಣು ಹಾಗೆ ಇದೆ. ಅವರಿಗೆ ಈ ಪ್ರಶಸ್ತಿ ಜೀವಮಾನದ ಸೇವೆಗೆ ಸಂದ ಸಂಮ್ಮಾನ. ಕಳೆದ ವರ್ಷ ಈ ಪ್ರಶಸ್ತಿಯನ್ನು ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಗೋಪಾಲ ಹೆಗಡೆ ಅವರಿಗೆ ನೀಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts