More

    ಕ್ರಿಕೆಟ್​ ಆಡುವ ವೇಳೆ ಬಾಲ್​ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳು ಕಟ್​; ಏಳು ಮಂದಿ ವಿರುದ್ಧ FIR

    ಅಹಮದಾಬಾದ್​: ಶಾಲೆಯ ಆಟದ ಮೈದಾನದಲ್ಲಿ ಕ್ರಿಕೆಟ್​ ಆಡುತ್ತಿದ್ದ ವೇಳೆ ದಲಿತ ಸಮುದಾಯಕ್ಕೆ ಸೇರಿದ ಬಾಲಕನೋರ್ವ ಚೆಂಡು ಮುಟ್ಟಿದ್ದಕ್ಕೆ ಆತನ ಸೋದರಮಾವನ ಹೆಬ್ಬೆರಳನ್ನು ಕತ್ತಿರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.

    ಘಟನೆಯೂ ಗುಜರಾತಿನ ಪಟಾಣ್​ ಜಿಲ್ಲೆಯ ಕಾಕೋಶಿ ಗ್ರಾಮದಲ್ಲಿ ನಡೆದಿದ್ದು ಘಟನೆ ಸಂಬಂಧ ಏಳು ಮಂದಿ ವಿರುದ್ಧ FIR ದಾಖಲಿಸಲಾಗಿದ್ದು ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ಧಾರೆ.

    ಪ್ರಕರಣದ ಹಿನ್ನಲೆ?

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ಕಾಕೋಶಿ ಗ್ರಾಮದ ಶಾಲಾ ಆಟದ ಮೈದಾನದಲ್ಲಿ ಕೆಲ ಯುವಕರು ಕ್ರಿಕೆಟ್​ ಆಡುತ್ತಿದ್ದ ವೇಳೆ ತನ್ನತ್ತ ಬಂದ ಚೆಂಡನ್ನು ದಲಿತ ಸಮುದಾಯದ ಬಾಲಕ ಎತ್ತಿಕೊಂಡಿದ್ದಕ್ಕೆ ಕೋಪಗೊಂಡು ಬೆದರಿಕೆ ಹಾಕಿ ಆತನ ಜಾತಿಯನ್ನು ನಿಂದಿಸಿದ್ದಾರೆ.

    chop

    ಈ ವೇಳೆ ಮಧ್ಯಪ್ರವೇಶಿಸಿದ ಬಾಲಕನ ಸೋದರ ಮಾವ ಧೀರಜ್​ ಪರ್​ಮಾರ್ ಯುವಕರ ಗುಂಪಿಗೆ ಹಾಗೆ ಮಾತನಾಡದಂತೆ ಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಕಳುಹಿಸಿದ್ದಾರೆ. ಅದೇ ದಿನ ಸಂಜೆ ಏಳು ಜನರ ಗುಂಪು ಬಾಲಕನ ಸೋದರಮಾವ ಧೀರಜ್​ ಹಾಗೂ ಆತನ ಸಹೋದರ ಕೀರ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆತನ ಹೆಬ್ಬೆರಳನ್ನು ಕತ್ತರಿಸಿ ಪರಾರಿಯಾಗಿದ್ಧಾರೆ.

    ಇದನ್ನೂ ಓದಿ: VIDEO| ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿ ದಾಳಿ; ಶ್ವಾನದ ಜೊತೆ ಕಾದಾಡಿ ಪಾರಾದ

    ಪ್ರಕರಣ ಸಂಬಂಧ ಏಳು ಮಂದಿ ಆರೋಪಿಗಳ ವಿರುದ್ಧ ಭಾರತ ದಂಡ ಸಂಹಿತೆ(IPC Section) 326(ಮಾರಕಾಸ್ತ್ರಗಳಿಂದ ಹಲ್ಲೆ), 506(ಬೆದರಿಕೆ), ಎಸ್​ಸಿ-ಎಸ್​ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಪ್ರಕರಣದ ಏಳು ಆರೋಪಿಗಳು ಘಟನೆ ನಂತರ ತಲೆಮಾರಿಸಿಕೊಂಡಿದ್ದು ಅವರ ಪತ್ತೆಗಾಗಿ ತಂಡವನ್ನು ರಚಿಸಲಾಗಿದೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts