More

    ಇವರು ಬಿ.ಟೆಕ್, ಎಂ.ಟೆಕ್ ಪದವೀಧರರು: ಆದರೆ ಮಾಡೋ ಕೆಲಸ ಎಂಥದ್ದು ನೋಡಿ!

    ಬೆಂಗಳೂರು: ಕೇಂದ್ರ ಅಪರಾಧ ದಳದ ಪೊಲೀಸರು ಬುಧವಾರ ನಾಲ್ವರನ್ನು ಬಂಧಿಸಿದ್ದು, ಅವರು ನೀಡಿದ ಮಾಹಿತಿಯಿಂದ ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ! ಹೆಬ್ಬಾಳ ಕೆಂಪಾಪುರದ ಎಂ. ತಿರುಪಾಲ್ ರೆಡ್ಡಿ, ಆರ್.ಟಿ. ನಗರದ ಏಜಾಜ್ ಪಾಷ, ತಮಿಳುನಾಡಿನ ಕೃಷ್ಣಗಿರಿಯ ಕಮಲೇಶನ್, ಸತೀಶ್ ಕುಮಾರ್ ಬಂಧಿತರು.

    ಈ ನಾಲ್ವರ ಪೈಕಿ ಕಮಲೇಶನ್ ಬಿ.ಟೆಕ್ ಮತ್ತು ಸತೀಶ್ ಎಂ.ಟೆಕ್ ಪದವೀಧರರಾಗಿದ್ದು, ನಗರದ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಆದರೆ ಸುಲಭವಾಗಿ ಹಣ ಸಂಪಾದನೆ ಮಾಡುವ ದುರಾಸೆಗೆ ಬಿದ್ದು ಎಂತಹ ಕೆಲಸಕ್ಕೆ ಇಳಿದಿದ್ದರು ಎಂಬುದನ್ನು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ.

    ಇದನ್ನೂ ಓದಿ: ಖತರ್​ನಾಕ್​ ಲೇಡಿಯಿಂದ ವಂಚನೆ; 34 ವಾಹನ ಜಪ್ತಿ, ಹತ್ತಕ್ಕೂ ಹೆಚ್ಚು ಪ್ರಕರಣ ದಾಖಲು…

    ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ಹೊಸ ವರ್ಷದ ಪಾರ್ಟಿಗಳೇ ಇವರ ಟಾರ್ಗೆಟ್. ಅವುಗಳಲ್ಲಿ ಭಾಗವಹಿಸುವವರಿಗೆ ಡ್ರಗ್ಸ್ ಪೂರೈಸಲು ಈ ನಾಲ್ವರೂ ಸಜ್ಜಾಗಿದ್ದರು. ವಿಷಯ ಗೊತ್ತಾಗಿ ದಾಳಿ ನಡೆಸಿದ ಪೊಲೀಸರು, ಅವರಿಂದ 1 ಕೋಟಿ ರೂ. ಮೌಲ್ಯದ ಮಾದಕದ್ರವ್ಯ ಜಪ್ತಿ ಮಾಡಿದ್ದಾರೆ. 5.6 ಕೆಜಿ ಹ್ಯಾಶಿಶ್, 3.3 ಕೆಜಿ ಗಾಂಜಾ ಅದರಲ್ಲಿ ಸೇರಿದೆ. 1 ಕಾರು, 1 ಬೈಕ್ ಹಾಗೂ ನಗದು ಕೂಡ ವಶಕ್ಕೆ ಪಡೆದಿದ್ದಾರೆ.

    ಇವರು ಬಿ.ಟೆಕ್, ಎಂ.ಟೆಕ್ ಪದವೀಧರರು: ಆದರೆ ಮಾಡೋ ಕೆಲಸ ಎಂಥದ್ದು ನೋಡಿ!

    ತಿರುಪಾಲ್ ರೆಡ್ಡಿ 6 ವರ್ಷಗಳಿಂದ ಮಾದಕವಸ್ತು ಮಾರಾಟ ಜಾಲದಲ್ಲಿ ಸಕ್ರಿಯವಾಗಿದ್ದ. ಕೆಲ ತಿಂಗಳ ಹಿಂದೆ ಆಂಧ್ರಪ್ರದೇಶದ ಆತನನ್ನು ಪೊಲೀಸರು ಬಂಧಿಸಿದ್ದರು. ಜೈಲಿನಲ್ಲಿ ಗೋವಾ ಮೂಲದ ಪೆಡ್ಲರ್‌ಗಳಾದ ಅನಿಲ್ ಮತ್ತು ಸುರೇಶ್ ಪರಿಚಯವಾಗಿತ್ತು. ಆನಂತರ ತಮಿಳುನಾಡಿನ ಕಮಲೇಶನ್ ಮತ್ತು ಆತನ ಸೋದರ ಕಾನಿಷ್ಕನ ಪರಿಚಯವಾಗಿದೆ. ಡ್ರಗ್ಸ್ ಜಾಲದ ಸಂಪರ್ಕ ಬೆಳೆದ ಬಳಿಕ ರೆಡ್ಡಿ, ಆಂಧ್ರದ ಪ್ರಕರಣದಲ್ಲಿ ಜಾಮೀನು ಪಡೆದು ಬೆಂಗಳೂರಿಗೆ ಆಗಮಿಸಿ ದಂಧೆ ಶುರು ಮಾಡಿದ್ದ.

    ಇದನ್ನೂ ಓದಿ: ಮದುವೆಯಾದ ಸ್ನೇಹಿತ ಪಾರ್ಟಿಗೆ ಕಡಿಮೆ ಹೆಂಡ ತಂದ! ನೀ ಬದುಕಲು ಯೋಗ್ಯನಲ್ಲ ಎಂದು ಕೊಂದೇ ಬಿಟ್ಟರು ಸ್ನೇಹಿತರು

    ವರ್ಷಾಚರಣೆ ಪಾರ್ಟಿಗಳಿಗೆ ಡ್ರಗ್ಸ್ ಸರಬರಾಜು ಮೇಲೆ ಸಿಸಿಬಿ ಪೊಲೀಸರು ನಿಗಾವಹಿಸಿದ್ದರು. ಕೆಲ ದಿನಗಳ ಹಿಂದೆ ಬಾತ್ಮಿದಾರರ ಮೂಲಕ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಡ್ರಗ್ಸ್ ತಂದು ತಿರುಪಾಲ ರೆಡ್ಡಿ ಸಂಗ್ರಹಿಸಿರುವ ಮಾಹಿತಿ ಲಭಿಸಿತ್ತು. ಕೆಂಪಾಪುರದ ವೆಂಕಟೇಗೌಡ ಲೇಔಟ್‌ನಲ್ಲಿ ರೆಡ್ಡಿ ಮನೆ ಮೇಲೆ ದಾಳಿ ನಡೆಸಿ ಡ್ರಗ್ಸ್ ಜಪ್ತಿ ಮಾಡಲಾಯಿತು. ರೆಡ್ಡಿ ನೀಡಿದ ಮಾಹಿತಿ ಮೇರೆಗೆ ಇನ್ನುಳಿದ ಆರೋಪಿಗಳನ್ನು ಬಂಧಿಸಲಾಯಿತು. ತಪ್ಪಿಸಿಕೊಂಡಿರುವ ಕಾನಿಷ್ಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

    ಅಂಗೈಯಲ್ಲೇ ಎಲ್ಲ: ಅನಾರೋಗ್ಯಗೊಂಡಾಗಲೂ ನೆರವಿಗೆ ಬರಲಿದೆ ವಾಟ್ಸ್​​ಆ್ಯಪ್!

    ರೈತ ಹೋರಾಟದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ರೈತ ಮುಖಂಡ!

    ಕಾಲಿಗೆ ಸುತ್ತಿಗೊಂಡ ಬೃಹದಾಕಾರದ ಹಾವು- ಭಯಾನಕ ವಿಡಿಯೋ ವೈರಲ್​

    ಇಂಡಿಗೋದಲ್ಲಿ ಕನ್ನಡವೇಕಿಲ್ಲ?; ಪ್ರಶ್ನೆ ಎತ್ತಿದ ಐಎಎಸ್ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts