More

    ಬೇಸಿಗೆಯಲ್ಲಿ ಹಳದಿ ಕಲ್ಲಂಗಡಿ ಹಣ್ಣು ತಿನ್ನುವುದರಿಂದ, ಇಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ…?

    ಋತುಮಾನಕ್ಕೆ ಅನುಗುಣವಾಗಿ ಹಣ್ಣುಗಳನ್ನು ತಿನ್ನುವುದು ಅವುಗಳಲ್ಲಿ ಇರುವ ಪೋಷಕಾಂಶಗಳ ಗರಿಷ್ಠ ಪ್ರಯೋಜನಗಳನ್ನು ನೀಡುತ್ತದೆ ಎನ್ನುವುದು ನಿಮಗೆ ಗೊತ್ತೇ ಇದೆ. ಈಗ ಬೇಸಿಗೆ ಶುರುವಾಗಿದೆ ಬೇಸಿಗೆ ಅಂದರೆ ಕಲ್ಲಂಗಡಿ ಸೀಸನ್ ಕೂಡ. ಈ ರಸಭರಿತವಾದ ಮತ್ತು ರುಚಿಕರವಾದ ಹಣ್ಣಿನಲ್ಲಿ ನೀರಿನಂಶ ಸಮೃದ್ಧವಾಗಿದೆ. ಇದು ನಿಮ್ಮ ದೇಹವನ್ನು ಹೈಡ್ರೇಟ್ ಆಗಿ ಇಡಲು ಸಹಾಯ ಮಾಡುತ್ತದೆ. ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಹಣ್ಣನ್ನು ತಿನ್ನುವ ಮಜಾವೇ ಬೇರೆ. ಇತರ ಹಣ್ಣುಗಳಂತೆ ಕಲ್ಲಂಗಡಿ ಹಣ್ಣನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು ಪ್ರಯೋಜನಕಾರಿಯಾಗಿದೆ.

    ಇದನ್ನೂ ಓದಿ:ಅಕ್ಬರ್‌-ಸೀತಾ ಲಿವಿಂಗ್​ ಟುಗೆದರ್​: ಕೋರ್ಟ್​ ಮೆಟ್ಟಿಲೇರಿದ ವಿಶ್ವ ಹಿಂದೂ ಪರಿಷತ್‌! ನ್ಯಾಯಾಲಯ ಹೇಳಿದ್ದೇನು?

    ಆದರೆ ನೀವು ಒಮ್ಮೆ ಹಳದಿ ಕಲ್ಲಂಗಡಿ ತಿಂದ ನಂತರ ನೀವು ಕೆಂಪು ಕಲ್ಲಂಗಡಿಯನ್ನು ಮರೆತುಬಿಡುತ್ತೀರಿ, ಈ ಹಣ್ಣು ಸಾವಿರಾರು ವರ್ಷಗಳಷ್ಟು ಹಳೆಯದು. ಹೌದು ನೀವು ಇನ್ನೂ ಬೇಸಿಗೆಯಲ್ಲಿ ಕೆಂಪು ಕಲ್ಲಂಗಡಿ ತಿನ್ನುತ್ತಿದ್ದರೆ, ನೀವು ಈ ಅದ್ಭುತ ಹಣ್ಣನ್ನು ಸವಿಯಲೇಬೇಕು. ಒಮ್ಮೆ ತಿಂದರೆ ಮರೆಯಲು ಸಾಧ್ಯವಾಗುವುದಿಲ್ಲ.

    ಬೇಸಿಗೆಯಲ್ಲಿ ಹಳದಿ ಕಲ್ಲಂಗಡಿ ಹಣ್ಣು ತಿನ್ನುವುದರಿಂದ, ಇಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ...?

    ನೀವೆಲ್ಲರೂ ಕೆಂಪು ಬಣ್ಣದ ಕಲ್ಲಂಗಡಿ ತಿಳಿದಿದ್ದೀರಿ. ಆದರೆ ಇಂದು ನಾವು ಹೇಳುತ್ತಿರುವ ಕಲ್ಲಂಗಡಿ ಹೊರಗಿನಿಂದ ಕೆಂಪು ಕಲ್ಲಂಗಡಿಯಂತೆ ಕಾಣುತ್ತದೆ. ಆದರೆ ಅದನ್ನು ಕತ್ತರಿಸಿದಾಗ, ಅದು ಒಳಗಿನಿಂದ ಹಳದಿ ಬಣ್ಣದಲ್ಲಿದೆ. ಈ ಕಲ್ಲಂಗಡಿಯಲ್ಲಿ ಹಲವು ರೀತಿಯ ಪೌಷ್ಟಿಕ ಗುಣಗಳಿವೆ ಎಂದು ಹೇಳಲಾಗುತ್ತಿದೆ. ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಯಲ್ಲೂ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚುತ್ತದೆ. ಈ ಅವಧಿಯಲ್ಲಿ ಕಲ್ಲಂಗಡಿ ಕೃಷಿಯಿಂದ ರೈತ ಸಹೋದರರು ಗರಿಷ್ಠ ಲಾಭ ಗಳಿಸುತ್ತಾರೆ‌.

    ಹಳದಿ ಕಲ್ಲಂಗಡಿ ಕೃಷಿ ಸಾವಿರಾರು ವರ್ಷಗಳಷ್ಟು ಹಳೆಯದು: ವಿಜ್ಞಾನಿಗಳು ಇತ್ತೀಚೆಗೆ ಹಳದಿ ಕಲ್ಲಂಗಡಿ ಮಾರುಕಟ್ಟೆಗೆ ಬಂದಿರಬೇಕು ಎಂದು ನೀವು ಯೋಚಿಸುತ್ತಿರಬೇಕು, ಆದರೆ ಅದು ಹಾಗಲ್ಲ, ಇದನ್ನು ಸಾವಿರಾರು ವರ್ಷಗಳಿಂದ ಈ ಭೂಮಿಯಲ್ಲಿ ಬೆಳೆಯಲಾಗುತ್ತಿದೆ. ಹಿಂದಿನ ರೈತರು ಇದನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಆದರೆ ಕಾಲ ಬದಲಾದಂತೆ ರೈತರು ಕೆಂಪು ಕಲ್ಲಂಗಡಿ ಕೃಷಿಯನ್ನು ಅಳವಡಿಸಿಕೊಳ್ಳಲು ಆರಂಭಿಸಿದರು.

    ಕಲ್ಲಂಗಡಿ ಕೃಷಿ: ನಿಮ್ಮ ಮಾಹಿತಿಗಾಗಿ, ಈ ಜಗತ್ತಿನಲ್ಲಿ ಹಳದಿ ಕಲ್ಲಂಗಡಿಯನ್ನು ಮೊದಲು ಆಫ್ರಿಕಾದ ಹೊಲಗಳಲ್ಲಿ ಬೆಳೆಯಲಾಯಿತು. ಆದರೆ ಅದರೊಳಗಿರುವ ಗುಣಗಳಿಂದ ಜನಪ್ರಿಯತೆ ಪಡೆದು ಇದು ಪ್ರಪಂಚದಾದ್ಯಂತ ಬೆಳೆಯಲು ಪ್ರಾರಂಭಿಸಿತು. ಮತ್ತು ಇಂದಿನ ಕಾಲದಲ್ಲಿ ಬಹುತೇಕ ಎಲ್ಲಾ ದೇಶಗಳಲ್ಲಿ ಇದನ್ನು ಬೆಳೆಸಲಾಗುತ್ತದೆ. ನೋಡಿದರೆ, ಹಳದಿ ಕಲ್ಲಂಗಡಿ ಭಾರತದಲ್ಲಿ ಕೆಲವೇ ಸ್ಥಳಗಳಲ್ಲಿ ಬೆಳೆಯಲಾಗುತ್ತದೆ. ಇದರಿಂದಾಗಿ ಇದು ನಮ್ಮ ದೇಶದ ಮಂಡಿಗಳಲ್ಲಿ ಸೀಮಿತ ಮಾರುಕಟ್ಟೆಗಳಲ್ಲಿ ಮಾತ್ರ ಇದು ಗೋಚರಿಸುತ್ತದೆ. ದೊಡ್ಡ ಮಂಡಿಗಳಲ್ಲಿ ಈ ಕಲ್ಲಂಗಡಿ ಹುಡುಕಿದರೆ ಸಿಗುತ್ತದೆ. ಆದರೆ ನಿಮ್ಮ ಸ್ಥಳೀಯ ಮಾರುಕಟ್ಟೆಗಳಲ್ಲಿ ನೀವು ಅದನ್ನು ಹುಡುಕುತ್ತಿದ್ದರೆ, ಈ ಹಳದಿ ಕಲ್ಲಂಗಡಿ ನಿಮಗೆ ಸಿಗುವುದಿಲ್ಲ.

    ಹಳದಿ ಕಲ್ಲಂಗಡಿ ಹಣ್ಣಿನ ಪ್ರಯೋಜನಗಳು: ಹಳದಿ ಕಲ್ಲಂಗಡಿ ಕೆಂಪು ಕಲ್ಲಂಗಡಿಗಿಂತ ಸಿಹಿಯಾಗಿರುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಎ ಇದೆ. ಹಳದಿ ಕಲ್ಲಂಗಡಿ ರುಚಿಯು ಜೇನುತುಪ್ಪದಂತೆಯೇ ಇರುತ್ತದೆ ಎಂದು ಕೆಲವರು ಹೇಳುತ್ತಾರೆ. ಹಳದಿ ಬಣ್ಣದ ಕಲ್ಲಂಗಡಿಯಲ್ಲಿ ಪೊಟ್ಯಾಸಿಯಮ್ ಸೇರಿದಂತೆ ಕೆಲವು ಖನಿಜಗಳಿವೆ, ಇದು ದೇಹದಲ್ಲಿನ ಲಿಕ್ವಿಡ್ ಲೆವೆಲ್ ನ್ನು ನಿಯಂತ್ರಿಸಲು ಸಹಾಯ ಮಾಡುತ್ತೆ ಮತ್ತು ದೇಹದಲ್ಲಿ ಮೆಗ್ನೀಸಿಯಮ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತೆ,  ಅಷ್ಟೇ ಅಲ್ಲ ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತೆ.

    ಪೋಷಕಾಂಶಗಳಲ್ಲಿನ ವ್ಯತ್ಯಾಸಗಳು: ಪೌಷ್ಠಿಕಾಂಶದ ಪ್ರಕಾರ, ಎರಡೂ ಕಲ್ಲಂಗಡಿಗಳು ಹೆಚ್ಚಿನ ಪ್ರಮಾಣದ ವಿಟಮಿನ್ ಎ ಮತ್ತು ಸಿಯನ್ನು ಹೊಂದಿರುವುದು ಕಂಡುಬಂದಿದೆ. ಹಳದಿ ಕಲ್ಲಂಗಡಿಗಳಲ್ಲಿ ಲೈಕೋಪೀನ್ ಕೊರತೆಯಿದ್ದರೂ, ಅವು ಬೀಟಾ-ಕ್ಯಾರೋಟಿನ್ ನಿಂದ ಸಮೃದ್ಧವಾಗಿವೆ. ಇದು ಶಕ್ತಿಯುತ ಆಂಟಿ ಆಕ್ಸಿಡೆಂಟ್ ನ್ನು ಹೊಂದಿದ್ದು, ನಿಮ್ಮನ್ನು ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.

    ತೂಕ ಇಳಿಸಿಕೊಳ್ಳಲು ಸಹಾಯಕ: ಹಳದಿ ಕಲ್ಲಂಗಡಿಯು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ, ಏಕೆಂದರೆ ಇದು ಹೆಚ್ಚಿನ ನೀರಿನ ಅಂಶವನ್ನು ಹೊಂದಿರುತ್ತದೆ, ಇದು ತೂಕ ಸುಲಭವಾಗಿ ಇಳಿಯಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಕಡಿಮೆ ಕ್ಯಾಲರಿಯನ್ನು ಸಹ ಹೊಂದಿರೋದ್ರಿಂದ ಸೇವಿಸಿದ್ರೆ ದಪ್ಪ ಆಗೋ ಚಿಂತೆ ಸಹ ಇರೋದಿಲ್ಲ.

    ಜೀರ್ಣಕ್ರಿಯೆಗೆ ಪ್ರಯೋಜನಕಾರಿ: ಹಳದಿ ಕಲ್ಲಂಗಡಿ ಗ್ಯಾಸ್, ಅಜೀರ್ಣ, ವಾಂತಿ, ಹೊಟ್ಟೆ ನೋವು ಮತ್ತು ಅಸಿಡಿಟಿಯಂತಹ ಸಮಸ್ಯೆಗಳನ್ನು ಶೀಘ್ರವೇ ತೆಗೆದು ಹಾಕಿ, ಉತ್ತಮ ಆರೋಗ್ಯ ನೀಡಲು ಸಹಕಾರಿಯಾಗಿದೆ. ಇದನ್ನು ತಿನ್ನೋದ್ರಿಂದ ಹೊಟ್ಟೆಯ ಹೀಟ್ ಶಾಂತಗೊಳಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಗುಣಪಡಿಸುತ್ತದೆ.

    ವಿದೇಶದಲ್ಲಿ ಹೆಚ್ಚು ಬೇಡಿಕೆ: ಹೌದು ಭಾರತದಲ್ಲಿ ಕೆಂಪು ಬಣ್ಣದ ಕಲ್ಲಂಗಡಿ ಬಿಟ್ಟು ಬೇರೆ ಬಣ್ಣದ ಕಲ್ಲಂಗಡಿ ಹಣ್ಣನ್ನು ಬೆಳೆಯುವುದು ಹೆಚ್ಚಾಗಿ ಪ್ರಚಲಿತದಲ್ಲಿ ಇಲ್ಲ. ದೇಶದ ಕೆಲವಡೇ ಮಾತ್ರ ಇತ್ತೀಚೆಗೆ ಹಳದಿ, ಪಿಂಕ್ ಸೇರಿದಂತೆ ಬೇರೆ ಬೇರೆ ಬಗೆಯ ಕಲ್ಲಂಗಡಿ ಹಣ್ಣನ್ನು ಬೆಳೆಯಲಾಗುತ್ತಿದ್ದು, ಹೆಚ್ಚಾಗಿ ಬ್ರೇಜಿಲ್ ಸೇರಿದಂತೆ ಇನ್ನಿತರ ದೇಶಗಳಲ್ಲಿ ಬೇರೆ ಬೇರೆ ಕಲರ್ ಕಲ್ಲಂಗಡಿ ಹಣ್ಣನ್ನು ಬೆಳೆಯುತ್ತಾರೆ. ಕರ್ನಾಟಕದಲ್ಲಿ ಹಳದಿ ಬಣ್ಣದ ಕಲ್ಲಂಗಡಿ ಬೆಳೆಯುವ ನಮ್ಮ ದೇಶದಲ್ಲಿ ಕೂಡ ಕಲರ್ ಕಲರ್ ಕಲ್ಲಂಗಡಿ ಹಣ್ಣನ್ನು ಬೆಳೆಯುವ ಮೂಲಕ, ಗ್ರಾಹಕರನ್ನು ಆಕರ್ಷಿಸಿದರೆ, ರೈತರಿಗೆ ಅನುಕೂಲವಾಗುತ್ತದೆ ಎನ್ನುವ ನಿಟ್ಟಿನಲ್ಲಿ ಬಸವರಾಜ್ ಹಳದಿ ಬಣ್ಣದ ಕಲ್ಲಂಗಡಿ ಬೆಳೆಯುವ ಸಾಹಸಕ್ಕೆ ಕೈ ಹಾಕಿ, ಅದರಲ್ಲಿ ಯಶಸ್ವಿಯಾಗಿದ್ದಾರೆ.

    ಅಕ್ಬರ್‌-ಸೀತಾ ಲಿವಿಂಗ್​ ಟುಗೆದರ್​: ಕೋರ್ಟ್​ ಮೆಟ್ಟಿಲೇರಿದ ವಿಶ್ವ ಹಿಂದೂ ಪರಿಷತ್‌! ನ್ಯಾಯಾಲಯ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts