More

    ನಾಯಿಗಳಿಗೂ ಕಂಟಕವಾಗುತ್ತಿದೆ ಕರೊನಾ; ದಯವಿಟ್ಟು ನಿಮ್ಮ ಸಾಕುಪ್ರಾಣಿಗಳನ್ನು ಮುದ್ದಿಸುವುದನ್ನು, ಮುತ್ತಿಡುವುದನ್ನು ನಿಲ್ಲಿಸಿ…!

    ಹಾಂಗ್​ಕಾಂಗ್​: ಕರೊನಾ ವೈರಸ್​ ಸದ್ಯ ಮಾನವಕುಲಕ್ಕೆ ಕಂಟಕವಾಗಿ ಪರಿಣಮಿಸುತ್ತಿದೆ. ಆದರೆ ದುರಂತವೆಂದರೆ ಅದು ಪ್ರಾಣಿಗಳಿಗೂ ಹಬ್ಬುತ್ತಿದೆ.

    ಈಗಾಗಲೇ ಒಂದು ನಾಯಿ ಕರೊನಾ ವೈರಸ್​ನಿಂದ ಮೃತಪಟ್ಟಿದ್ದು ವರದಿಯಾಗಿದೆ. ಅದರ ಬೆನ್ನಲ್ಲೇ ಈಗ ಹಾಂಗ್​ಕಾಂಗ್​ನಲ್ಲಿ ಇನ್ನೊಂದು ಶ್ವಾನಕ್ಕೆ ಕರೊನಾ ವೈರಸ್​ ಇರುವುದು ಪತ್ತೆಯಾಗಿದೆ.

    ಹಾಂಗ್​ಕಾಂಗ್​ನಲ್ಲಿರುವ ಪೋಕ್ ಫೂ ಲ್ಯಾಮ್ ಏರಿಯಾದ ಮನೆಯೊಂದರಲ್ಲಿ ಸಾಕಿದ್ದ ಜರ್ಮನ್ ಶಫರ್ಡ್​ ನಾಯಿಯಲ್ಲಿ ಕರೊನಾ ವೃಢಪಟ್ಟಿದ್ದು, ಅದನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಹಾಗೇ ಈ ಶ್ವಾನದೊಂದಿಗೇ ಸದಾ ಇರುತ್ತಿದ್ದ, ಅದೇ ಏರಿಯಾದ ಇನ್ನೊಂದು ಮಿಶ್ರತಳಿ ನಾಯಿಯನ್ನೂ ಅದರೊಂದಿಗೆ ಪ್ರತ್ಯೇಕವಾಗಿ ಇಡಲಾಗಿದೆ.
    ನಾಯಿಯ ಮಾಲೀಕನಿಗೆ ಕರೊನಾ ತಗುಲಿದ್ದು ಗುರುವಾರ ದೃಢಪಟ್ಟಿತ್ತು. ಹಾಗಾಗಿ ನಾಯಿಗೂ ತಗುಲಿದೆ ಎಂದು ಹಾಂಗ್​ಕಾಂಗ್​ನ ಕೃಷಿ, ಮೀನುಗಾರಿಕಾ ಮತ್ತು ಸಂರಕ್ಷಣಾ ಇಲಾಖೆ ತಿಳಿಸಿದೆ.

    ಜರ್ಮನ್​ ಶಫರ್ಡ್ ನಾಯಿಯೊಂದಿಗೆ ಇರುವ ಮಿಶ್ರತಳಿ ಶ್ವಾನಕ್ಕೆ ಕರೊನಾ ತಗುಲಿಲ್ಲ. ಕಾಯಿಲೆ ಇರುವ ಯಾವುದೇ ಸೂಚನೆಯೂ ಕಂಡುಬಂದಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಪ್ರತ್ಯೇಕವಾಗಿ ಇಡಲಾಗಿದೆ. ಎರಡೂ ನಾಯಿಗಳ ಮೇಲೆಯೂ ತೀವ್ರ ನಿಗಾ ಇಡಲಾಗಿದೆ. ಮತ್ತೊಮ್ಮೆ ತಪಾಸಣೆ ಮಾಡಲಾಗುವುದು ಎಂದು ಹೇಳಿದೆ.

    ಯಾರೂ ತಮ್ಮ ಸಾಕುಪ್ರಾಣಿಗಳನ್ನು ಮುದ್ದಿಸುವುದು, ಅವುಗಳಿಗೆ ಮುತ್ತಿಕ್ಕುವುದನ್ನೆಲ್ಲ ಮಾಡಬೇಡಿ ಎಂದು ಹಾಂಗ್​ಕಾಂಗ್​ ಆಡಳಿತ ಜನರಿಗೆ ಎಚ್ಚರಿಕೆ ನೀಡುತ್ತಿದೆ. ಅಲ್ಲದೆ ನಾಯಿಗಳಿಂದಾಗಲೀ, ಉಳಿದ ಸಾಕುಪ್ರಾಣಿಗಳಿಂದಾಗಲೀ ವೈರಸ್ ಹಬ್ಬುತ್ತದೆ ಎಂಬುದಕ್ಕೆ ಪುರಾವೆ ಇಲ್ಲ. ಹಾಗೊಮ್ಮೆ ಪ್ರಾಣಿಗಳಿಗೆ ತಗುಲಿದರೆ ಅದು ಮನುಷ್ಯನಿಂದಲೇ ಪಸರಿಸಿದ್ದಾಗಿರುತ್ತದೆ. ಹಾಗಾಗಿ ಪ್ರಾಣಿಗಳನ್ನು ಅನಾಥವಾಗಿ ಬಿಡಬಾರದು ಎಂದೂ ಕೂಡ ಚೀನಾ ಸರ್ಕಾರ ತಿಳಿಸಿದೆ.

    ಇತ್ತೀಚೆಗೆ ಹಾಂಗ್​ಕಾಂಗ್​ನ ಉದ್ಯಮಿ ಮಹಿಳೆಯೋರ್ವರು ಸಾಕಿದ್ದ ಪೊಮೆರೇನಿಯನ್ ನಾಯಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ನಾಯಿಯನ್ನು ಪ್ರಾಣಿ ಸಂರಕ್ಷಣಾ ಕೇಂದ್ರದಲ್ಲಿ ಕ್ವಾರಂಟೈನ್​ನಲ್ಲಿ ಇಟ್ಟು, ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅಲ್ಲಿಂದ ಬಿಡುಗಡೆಯಾಗಿ ಎರಡೇ ದಿನಕ್ಕೆ ನಾಯಿ ಸಾವನ್ನಪ್ಪಿತ್ತು.(ಏಜೆನ್ಸೀಸ್​)

    ಕರೊನಾ​ಗೆ ಬಲಿಯಾದ ಚೀನಾ ವೈದ್ಯನ ಸಾವಿಗೆ ಕ್ಷಮೆಯಾಚಿಸಿದ ಸರ್ಕಾರ: ತನಿಖಾ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts