More

    ಪಿಯು ಪಾಸಾದ ಬಾಲಕಿಯರಿಗೆ ಸ್ಕೂಟರ್ ಗಿಫ್ಟ್​ ಕೊಡಲು ಮುಂದಾದ ರಾಜ್ಯ ಸರ್ಕಾರ! ಶಾಲೆಗೆ ಹೋದರೆ ಸಿಗುತ್ತೆ ದುಡ್ಡು!

    ದಿಸ್ಪುರ: 10 ಹಾಗೂ 12ನೇ ತರಗತಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡುವ ಜಾರ್ಖಂಡ್ ಸರ್ಕಾರ ಸಂಪ್ರದಾಯಕ್ಕೆ ಕಳೆದ ವರ್ಷ ನಾಂದಿ ಹಾಡಿತ್ತು. ಇದೀಗ ಅಸ್ಸಾಂ ಸರ್ಕಾರ ಇಂಥದ್ದೇ ಯೋಜನೆಯೊಂದನ್ನು ಆರಂಭಿಸಿ ಕೊಡುಗೆ ನೀಡಿದೆ.

    12ನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಬಾಲಕಿಯರಿಗೆ ‘ಪ್ರಜ್ಞಾಭಾರತಿ’ ಯೋಜನೆಯಡಿ ‘ಸ್ಕೂಟರ್’ ವಿತರಣೆ ಮಾಡಲಾಗಿದೆ. ಜತೆಗೆ, ವಿದ್ಯಾರ್ಥಿನಿಯರಿಗೆ ನಗದು ಬಹುಮಾನಗಳು ಇರಲಿವೆ ಎಂದು ಅಸ್ಸಾಂ ಶಿಕ್ಷಣ ಸಚಿವ ಹಿಮಂತ್ ಬಿಸ್ವ ಸರ್ವ ತಿಳಿಸಿದ್ದಾರೆ.

    ಇದನ್ನೂ ಓದಿ: ಇನ್ಶೂರೆನ್ಸ್ ಪಾಲಿಸಿ ಮಾಡಿಸೋ ಮುನ್ನ ಹುಷಾರು!; ದೊಡ್ಡ ಕಂಪನಿಗಳ ಹೆಸರಲ್ಲೇ ನಕಲಿ ಪಾಲಿಸಿ!

    ಪಿಯು ಪಾಸಾದ ಬಾಲಕಿಯರಿಗೆ ಸ್ಕೂಟರ್ ಗಿಫ್ಟ್​ ಕೊಡಲು ಮುಂದಾದ ರಾಜ್ಯ ಸರ್ಕಾರ! ಶಾಲೆಗೆ ಹೋದರೆ ಸಿಗುತ್ತೆ ದುಡ್ಡು!
    22,000 ದ್ವಿಚಕ್ರ ವಾಹನಗಳು: ರಾಜ್ಯ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಈ ಯೋಜನೆಗೆ ಅರ್ಹರಾಗಿದ್ದಾರೆ. ಪ್ರಸ್ತುತ 22,000 ವಿದ್ಯಾರ್ಥಿನಿಯರು ಫಲಾನುಭವಿಗಳಾಗಲಿದ್ದಾರೆ. ಪ್ರಥಮ ದರ್ಜೆಯಲ್ಲಿ ಪಾಸಾದ ಎಲ್ಲ ವಿದ್ಯಾರ್ಥಿನಿಯರಿಗೂ ಸರ್ಕಾರ ಸ್ಕೂಟರ್ ನೀಡಲಿದೆ. ಈ ಸಂಖ್ಯೆ ಒಂದು ಲಕ್ಷಕ್ಕೂ ಹೆಚ್ಚಾದರೂ ಎಲ್ಲರೂ ಈ ಸೌಲಭ್ಯ ಪಡೆಯಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

    ಶಾಲೆಗೆ ಹೋದರೂ ಸಿಗುತ್ತೆ ದುಡ್ಡು!
    ಶಾಲಾ ಹಂತದಿಂದ ಪಿಜಿವರೆಗೆ ಕಲಿಯುತ್ತಿರುವ ವಿದ್ಯಾರ್ಥಿನಿಯರಿಗೆ ನಗದು ಪ್ರೋತ್ಸಾಹ ಧನ ನೀಡಲಾಗುವುದು. ಈ ಯೋಜನೆ ಮಾಸಾಂತ್ಯಕ್ಕೆ ಘೋಷಣೆಯಾಗಲಿದೆ. ಶಾಲೆಗೆ ತೆರಳಿದ ಪ್ರತಿದಿನಕ್ಕೆ 100 ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ.

    ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾಗಿರುವ ಸೌರವ್​ ಗಂಗೂಲಿಯ ಹೃದಯ ಹೇಗಿದೆ? ಡಾ.ದೇವಿ ಶೆಟ್ಟಿ ಏನು ಹೇಳಿದರು ನೋಡಿ..

    144 ಕೋಟಿ ರೂಪಾಯಿ ವೆಚ್ಚ:
    ಸ್ಕೂಟರ್ ನೀಡುವ ಯೋಜನೆಗೆಂದೇ ಅಸ್ಸಾಂ ಸರ್ಕಾರ 144.30 ಕೋಟಿ ರೂ. ಖರ್ಚು ಮಾಡುತ್ತಿದೆ. ಇದಲ್ಲದೇ, 2018, 2019ನೇ ಸಾಲಿನಲ್ಲಿ ಪಾಸಾದವರಿಗೂ ಸ್ಕೂಟರ್​ ನೀಡುವ ಚಿಂತನೆ ನಡೆದಿದೆ. (ಏಜೆನ್ಸೀಸ್​)

    ಮಾರಣಾಂತಿಕ ಎಬೋಲಾ ಪತ್ತೆಹಚ್ಚಿದ ವೈದ್ಯನಿಂದ ಇಡೀ ಮನುಕುಲವೇ ಬೆಚ್ಚಿಬೀಳುವಂತಹ ಎಚ್ಚರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts