More

    ವೈಜ್ಞಾನಿಕವಾಗಿ ಜಾತಿಗಣತಿ ಸಮೀಕ್ಷೆ ಮಾಡಿ

    ಬಾದಾಮಿ: ಕೇಂದ್ರದಲ್ಲಿ ವೀರಶೈವ ಲಿಂಗಾಯತ ಒಳಪಂಗಡದ ಎಲ್ಲ ಜಾತಿಗಳನ್ನು ಒಬಿಸಿ ಮೀಸಲಾತಿಗೆ ಒಳಪಡಿಸಬೇಕೆಂದು ಒತ್ತಾಯಿಸಲಾಗಿದೆ. ಜಾತಿ ಗಣತಿ ಅವೈಜ್ಞಾನಿಕವಾಗಿದ್ದು, ಅದನ್ನು ವೈಜ್ಞಾನಿಕವಾಗಿ ಸಮೀಕ್ಷೆ ಮಾಡಬೇಕು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಒತ್ತಾಯಿಸಿದರು.

    ಇಲ್ಲಿನ ಕೆ.ಎಂ. ಪಟ್ಟಣಶೆಟ್ಟಿ ಸಮುದಾಯ ಭವನದಲ್ಲಿ ಶುಕ್ರವಾರ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಹಾಗೂ ತಾಲೂಕು ಘಟಕದ ಸಹಯೋಗದಲ್ಲಿ ಬಣಜಿಗರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

    ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ರಾಜಕೀಯ ಇತಿಹಾಸದಲ್ಲಿ ಬಣಜಿಗರ ಕೊಡುಗೆ ಅಪಾರವಿದೆ. ಬಸವಣ್ಣನ ಅನುಯಾಯಿಗಳಾದ ನಾವು ಸರ್ವಜನಾಂಗದ ವಿಶ್ವಾಸ, ಪ್ರೀತಿ ನಮ್ಮೆಲ್ಲರ ಬಳುವಳಿ ಎಂದ ಅವರು, ಬಣಜಿಗರಲ್ಲಿ ಬಡವರು ಇದ್ದಾರೆ. ಸಮಾಜದ ಸಂಘಟನೆ ಅವರೆಲ್ಲರಿಗೆ ಶಿಕ್ಷಣಕ್ಕೆ ನಾವು ಆಸರೆಯಾಗಬೇಕು. ಶಿಕ್ಷಣವಂತರಾದರೆ ಆರ್ಥಿಕವಾಗಿ ಸಲಬರಾಗಲು ಸಾಧ್ಯವಾಗುತ್ತದೆ ಎಂದರು.

    ಪುಣ್ಯ ಕ್ಷೇತ್ರ ಶಿವಯೋಗ ಮಂದಿರದಲ್ಲಿ ಶತಮಾನದ ಹಿಂದೆಯೇ 1904ರಲ್ಲಿ ಕುಮಾರ ಶ್ರೀಗಳವರು ವೀರಶೈವ ಲಿಂಗಾಯತದ ಎಲ್ಲ ಒಳಪಂಗಡದ ಮೀಸಲಾತಿ ಕುರಿತು ಅಖಿಲ ಭಾರತ ವೀರಶೈವ ಮಹಾಸಭಾ ಮೂಲಕ ಧರ್ಮ ಸಂಘಟನೆಗೆ ಜಾಗೃತಿ ಮಾಡಿದ್ದನ್ನು ಸ್ಮರಿಸಬೇಕು. ಆನಂತರದಲ್ಲಿ ಶಿವಯೋಗ ಮಂದಿರವನ್ನು 1909ರಲ್ಲಿ ಸ್ಥಾಪಿಸಿದ್ದು, ವೀರಶೈವ ಲಿಂಗಾಯತರೆಲ್ಲರೂ ಒಗ್ಗಟ್ಟಿನಿಂದ ನಡೆಯಬೇಕು ಎಂದು ಮನವಿ ಮಾಡಿದರು.

    ಮಾಜಿ ಶಾಸಕ ಮಹದೇವಪ್ಪ ಯಾದವಾಡ, ರಾಜ್ಯ ಉಪಾಧ್ಯಕ್ಷ ಎನ್.ಬಿ. ಬನ್ನೂರ ಸಮಾಜದ ಸಂಘಟನೆ ಅವಶ್ಯಕ. ಸಮಾಜದ ಜನರು ಶಿಕ್ಷಣ ಪಡೆದು, ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸಬಲರಾಗಬೇಕು. ಜಾತಿ ಗಣತಿಯಲ್ಲಿ ವೀರಶೈವ ಲಿಂಗಾಯತ ಎಲ್ಲ ಒಳ ಪಂಗಡದವರಿಗೆ ಅನ್ಯಾಯವಾಗಿದೆ. ಈ ಕುರಿತು ಎಲ್ಲರೂ ಸಂಘಟಿತರಾಗಿ ರಾಜ್ಯ ಘಟಕದ ಮಾರ್ಗದರ್ಶನದಂತೆ ಹೋರಾಟಕ್ಕೆ ಸಿದ್ಧರಾಗಬೇಕು ಎಂದರು.

    ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಮಹಾಂತೇಶ ಮಮದಾಪೂರ ಮಾತನಾಡಿ, ರಾಜಕೀಯ ಇತಿಹಾಸದಲ್ಲಿ ಬಹುಪಾಲು ಸಿಎಂ ಬಣಜಿಗರದ್ದೆ ಎಂಬುದು ಸಮಾಜದವರ ಸೇವಾ ಕಳಕಳಿ. ಸಾಹುಕಾರ ಕಲ್ಲಪ್ಪನವರ ದೂರದೃಷ್ಟಿಯಿಂದ ನಾವೆಲರೂ ಸುಕ್ಷಿತರಾಗಿದ್ದೇವೆ. ಅವರು ಸ್ಥಾಪಿಸಿದ ವೀರಪುಲಿಕೇಶಿ ವಿದ್ಯಾ ಸಂಸ್ಥೆ ಮತ್ತು ಸಹಕಾರಿ ಬ್ಯಾಂಕ್ ಮೂಲಕ ಆರ್ಥಿಕ ಸಬಲರಾಗಲು ಸಾಧ್ಯವಾಗಿದೆ ಎಂದರು.

    ರಾಮಾರೂಢ ಮಠದ ಶಂಕರಾರೂಡ ಸ್ವಾಮಿಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ತಾಲೂಕು ಬಣಜಿಗ ಸಮಾಜದ ಅಧ್ಯಕ್ಷ ಡಾ. ಅವಿನಾಶ ಮಮದಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರಟಗಿಯ ಲೀಲಾ ಚಿಚಕಲ್ಲ ಮಾತನಾಡಿದರು. 150ಕ್ಕೂ ಅಧಿಕ ಬಣಜಿಗ ಸಮಾಜದ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಉನ್ನತ ಶಿಕ್ಷಣದ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು.

    ವೀರಪುಲಿಕೇಶ ವಿದ್ಯಾಸಂಸ್ಥೆ ಚೇರ್ಮನ್ ಎ.ಸಿ. ಪಟ್ಟಣದ, ಶಿವಾನಂದ ಗುಳೇದ, ಅಂದಪ್ಪ ಜವಳಿ, ಚನಮಲ್ಲಪ್ಪ ಘಟ್ಟದ, ಮಾಜಿ ಶಾಸಕ ರಾಜಶೇಖರ ಶೀಲವಂತರ, ನಾಗರಾಜ ಕಾಚೆಟ್ಟಿ, ಶಶಿಧರ ಪಟ್ಟಣಶೆಟ್ಟಿ ಇತರರಿದ್ದರು. ಅಂದಾಜು ನಾಲ್ಕು ಸಾವಿರಕ್ಕೂ ಅಧಿಕ ಸಮಾಜದವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ರಾಚಣ್ಣ ಪಟ್ಟಣದ ಸ್ವಾಗತಿಸಿದರು. ಬಿ.ಸಿ. ಪ್ಯಾಟಿ ಮತ್ತು ಸಂತೋಷ ಪಟ್ಟಣಶೆಟ್ಟಿ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts