More

    ಶಾಲಾ- ಕಾಲೇಜು ಮರು ಆರಂಭ; ವಿದೇಶಗಳಲ್ಲಿ ಅನುಸರಿಸುತ್ತಿರುವ ಮುಂಜಾಗ್ರತೆಗಳೇನು?

    ನವದೆಹಲಿ: ಸೆಪ್ಟಂಬರ್​ ಒಂದರಿಂದ ಶಾಲಾ- ಕಾಲೇಜುಗಳನ್ನು ಪ್ರಾಯೋಗಿಕವಾಗಿಯಾದರೂ ಪುನಾರಂಭಿಸುವುದು ಬಹುತೇಕ ಖಚಿತವಾಗಿದೆ. ಇದಕ್ಕಾಗಿ ಈಗಾಗಲೇ ಮಾರ್ಗಸೂಚಿಗಳನ್ನು ರಚಿಸಲಾಗಿದೆ. ಇದಕ್ಕಾಗಿ ಹಲವು ದೇಶಗಳಲ್ಲಿ ಕೈಗೊಂಡಿರುವ ಕ್ರಮಗಳನ್ನು ಅಧ್ಯಯನ ಮಾಡಲಾಗಿದೆ. ಅಂತೆಯೇ, ವಿವಿಧ ದೇಶಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಹೇಗೆ ಆರಂಭಿಸಿದ್ದಾರೆ? ಯಾವ ಯಾವ ಮುಂಜಾಗ್ರತೆಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

    ಡೆನ್ಮಾರ್ಕ್​: ಏಪ್ರಿಲ್​ ಮಧ್ಯಭಾಗದಲ್ಲಿ ಶಾಲೆಗಳು, ಡೇ-ಕೇರ್​ ಸೆಂಟರ್​ಗಳನ್ನು ತೆರೆಯಲಾಗಿತ್ತು. ಆದರೆ, ಕರೊನಾದ ಎರಡನೇ ಅಲೆಗೆ ಬೆದರಿ ಪಾಲಕರು ಮಕ್ಕಳನ್ನು ಕಳುಹಿಸಲು ಹಿಂಜರಿದಿದ್ದರು. ಇಲ್ಲಿ ವ್ಯಕ್ತಿಗತ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ತರಗತಿಗಳಲ್ಲಿ ಮಾತ್ರವಲ್ಲದೇ ಬಯಲಿನಲ್ಲಿ ನೆಲದ ಮೇಲೆ ಬರೆದು ಪಾಠಗಳನ್ನು ಹೇಳಿಕೊಡಲಾಗುತ್ತಿದೆ.

    ಇದನ್ನೂ ಓದಿ; ತರಕಾರಿ, ದಿನಸಿ ವ್ಯಾಪಾರಿಗಳು, ಅಂಗಡಿ ಕೆಲಸಗಾರರನ್ನು ಕರೊನಾ ಪರೀಕ್ಷೆಗೊಳಪಡಿಸಿ; ಕೇಂದ್ರದಿಂದಲೇ ಬಂತು ಸೂಚನೆ 

    ಸ್ವಿಜರ್ಲೆಂಡ್​: ಭಾರತದಲ್ಲಿ ಶಾಲೆ- ಕಾಲೇಜುಗಳ ಮರು ಆರಂಭಕ್ಕೆ ಇಲ್ಲಿ ಕೈಗೊಂಡ ಕ್ರಮಗಳ ಅಧ್ಯಯನ ಮಾಡಲಾಗಿದೆ. ಶಾಲೆಗಿಂತ ದೂರದಲ್ಲಿ ಪಾಲಕರು ಮಕ್ಕಳನ್ನು ಬಿಟ್ಟು ಹೋಗುತ್ತಾರೆ. ಕ್ಲಾಸ್​ನ ಅರ್ಧದಷ್ಟು ವಿದ್ಯಾರ್ಥಿಗಳಿಗಷ್ಟೇ ಅವಕಾಶ. 6.5 ಅಡಿಗಳ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಲಾಗುತ್ತಿದೆ. ಇಲ್ಲಿ ಮಕ್ಕಳು ಮಳೆಯನ್ನು ನೋಡುತ್ತ ಸಂತೋಷಪಟ್ಟರೆ, ಕೆಲ ಮಕ್ಕಳು ಕುಂಟಾಬಿಲ್ಲೆ ಆಡಲು ಅವಕಾಶವಿದೆ.

    ನೆದರ್ಲೆಂಡ್​: ಮಕ್ಕಳಿಗೆ ಪ್ಲಾಸ್ಟಿಕ್​ನ ಫೇಸ್​ಶೀಲ್ಡ್​ ಕಡ್ಡಾಯಗೊಳಿಸಲಾಗಿದೆ. ಡೆಸ್ಕ್​ಗಳನ್ನು ಪ್ಲಾಸ್ಟಿಕ್​ ಹಾಳೆ​ಗಳಿಂದ ಪ್ರತ್ಯೇಕಗೊಳಿಸಲಾಗಿದೆ. ಮಕ್ಕಳು ಶಾಲೆಗೆ ಪ್ರವೇಶಿಸುವ ಮುನ್ನ ಸ್ಯಾನಿಟೈಸರ್​ ವಿತರಿಸಲಾಗುತ್ತದೆ.

    ಶಿಫ್ಟ್​ನಲ್ಲಿ ಶಾಲಾವಧಿ: ಆಸ್ಟ್ರೇಲಿಯಾದ ಅತಿ ದೊಡ್ಡ ರಾಜ್ಯವಾದ ನ್ಯೂಸೌತ್​ವೇಲ್ಸ್​ನಲ್ಲಿ ಶಾಲೆಗಳು ಪುನರಾರಂಭವಾಗಿವೆ. ಆದರೆ, ವಿದ್ಯಾರ್ಥಿಗಳಿಗೆ ವಾರದಲ್ಲಿ ಒಮ್ಮೆ ಮಾತ್ರ ಶಾಲೆಗೆ ಹೋಗುವ ಅವಕಾಶ ನೀಡಲಾಗಿದೆ. ಇನ್ನು, ವಿಕ್ಟೋರಿಯಾದಲ್ಲಿ ಹದಿಹರೆಯದ ವಿದ್ಯಾರ್ಥಿಗಳು ಮೊದಲು ತರಗತಿ ಪ್ರವೇಶಿಸಿದರೆ, ನಂತರ ಚಿಕ್ಕಮಕ್ಕಳಿಗೆ ಅವಕಾಶ.

    ಇದನ್ನೂ ಓದಿ; ಅಮೆರಿಕದ ಕಂಪನಿಗಿಂತ ಹತ್ತು ಪಟ್ಟು ಕಡಿಮೆ ಬೆಲೆಗೆ ಕರೊನಾ ಲಸಿಕೆ ನೀಡಲಿದೆ ಭಾರತೀಯ ಸಂಸ್ಥೆ 

    ಶಾಲಾ- ಕಾಲೇಜು ಮರು ಆರಂಭ; ವಿದೇಶಗಳಲ್ಲಿ ಅನುಸರಿಸುತ್ತಿರುವ ಮುಂಜಾಗ್ರತೆಗಳೇನು?

    ಇಸ್ರೇಲ್​ನಲ್ಲಿ ಒಂದು ತರಗತಿಯಲ್ಲಿ 15 ಮಕ್ಕಳಿಗಷ್ಟೇ ಹಾಜರಾಗಬಹುದು. ಫ್ರಾನ್ಸ್​ನಲ್ಲಿ ಮಕ್ಕಳನ್ನು ದೂರ ದೂರ ಕುಳ್ಳಿರಿಸಿ ಪಾಠ ಮಾಡಲಾಗುತ್ತಿದೆ. ಮಾಸ್ಕ್​ ಧರಿಸುವುದು ಇಲ್ಲಿ ಕಡ್ಡಾಯವಾಗಿದೆ.

    ಸೈಪ್ರಸ್​ನಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್​ ಪರೀಕ್ಷೆ ಬಳಿಕವಷ್ಟೇ ಶಾಲೆಗೆ ಹಾಜರಾಗಲು ಅನುಮತಿ ನೀಡಲಾಗಿತ್ತು. ಇನ್ನು ಚೀನಾದಲ್ಲಿ ಥರ್ಮಲ್​ ಸ್ಕ್ಯಾನರ್​ ತಪಾಸಣೆ ನಡೆಸಿ ಮಕ್ಕಳನ್ನು ಒಳಗೆ ಬಿಟ್ಟುಕೊಳ್ಳಲಾಗುತ್ತದೆ. ಕ್ಯಾಂಟೀನ್​ನಲ್ಲಿ ಟೇಬಲ್​ಗಳಿಗೆ ಗಾಜಿನ ವಿಭಜಕಗಳನ್ನು ಅಳವಡಿಸಲಾಗಿದ್ದು, ಒಂದು ಟೇಬಲ್​ನಲ್ಲಿ ಇಬ್ಬರು ಮಾತ್ರ ಕುಳಿತುಕೊಳ್ಳಬಹುದು.

    ಸೆ.1ರಿಂದ ಶಾಲಾ- ಕಾಲೇಜು ಆರಂಭ ಪ್ರಕ್ರಿಯೆ; ಅರ್ಧದಷ್ಟು ಮಕ್ಕಳು, ಶಿಕ್ಷಕರಿಗಷ್ಟೇ ಅವಕಾಶ; ಹೀಗಿರಲಿದೆ ಮಾರ್ಗಸೂಚಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts