More

    ಶಾಲೆಗಳು ಪುನರಾರಂಭವಾದಾಗ ಹೀಗಿದ್ದರೆ ಚೆನ್ನ..!

    ಬೆಂಗಳೂರು: ಎರಡು ತಿಂಗಳಿಗೂ ಅಧಿಕ ಕಾಲದಿಂದ ನಿಂತೇ ಹೋಗಿದ್ದ ಶೈಕ್ಷಣಿಕ ಚಟುವಟಿಕೆಗಳು ಹಂತಹಂತವಾಗಿ ಶುರುವಾಗುತ್ತಿವೆ. ಬಾಕಿ ಉಳಿದಿರುವ ಪರೀಕ್ಷೆಗಳನ್ನು ನಡೆಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಈಗಾಗಲೇ ಶಾಲೆಗಳಿಗೆ ಸೂಚಿಸಿದೆ.

    ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆಗಳು ಆರಂಭವಾಗಿವೆ. ಆದರೆ, ಬಹುತೇಕ ಪಾಲಕರನ್ನು ಕಾಡುತ್ತಿರುವ ಪ್ರಶ್ನೆ ಎಂದರೆ ಮಕ್ಕಳನ್ನು ಶಾಲೆಗೆ ಹೇಗಪ್ಪಾ ಕಳಿಸೋದು? ದೊಡ್ಡವರಾದರೆ ಹೇಗೋ ತಿಳಿದುಕೊಂಡು ಕಾಪಾಡಿಕೊಳ್ಳಬಲ್ಲರು. ಆದರೆ, ಮಕ್ಕಳು ಅದರಲ್ಲೂ ನರ್ಸರಿ, ಎಲ್​ಕೆಜಿ, ಯುಕೆಜಿ ಮಕ್ಕಳು ಆಟವಾಡಿಕೊಂಡೇ ಎಲ್ಲವನ್ನೂ ಕಲಿಯುತ್ತಾರೆ. ಇವರನ್ನು ಇತರರಿದ್ದ ದೂರವಿರಿಸೋದು ಸಾಧ್ಯವೇ? ಎಂಬೆಲ್ಲ ವಿಚಾರಗಳು ಕಾಡತೊಡಗಿವೆ.

    ಇದನ್ನೂ ಓದಿ: ಲಾಕ್​ಡೌನ್​ ಬೇಡವೇ? ಪ್ರತಿವಾರ ಕರೊನಾ ಟೆಸ್ಟ್​ ಮಾಡಿಸಿಕೊಳ್ಳಿ..!

    ಕರೊನಾ ಸಂಕಷ್ಟವಿರುವ ಹಲವು ದೇಶಗಳಲ್ಲಿ ಶಾಲೆಗಳು ಈಗಾಗಲೇ ಆರಂಭವಾಗಿವೆ. ಅದರಲ್ಲೂ ಈ ವೈರಸ್​ನ ಜನ್ಮಸ್ಥಳವಾದ ಚೀನಾ ಅದೆಲ್ಲವನ್ನು ಕೊಡವಿಕೊಂಡು ಮೇಲೆದ್ದಿದೆ. ಮಕ್ಕಳು ಫೇಸ್​ಶೀಲ್ಡ್​ ಇರುವ ಟೋಪಿ ಧರಿಸಿದ್ದಾರೆ, ವ್ಯಕ್ತಿಗತ ಅಂತರ ಕಾಯ್ದುಕೊಂಡು ಸಾಲಾಗಿ ತರಗತಿ ಪ್ರವೇಶಿಸುತ್ತಿದ್ದಾರೆ. ಅದಕ್ಕೂ ಮುನ್ನ ಸ್ಯಾನಿಟೈಜರ್ಸ್​ ಬಳಸುತ್ತಿದ್ದಾರೆ. ತರಗತಿಯಲ್ಲೂ ಅಂತರ ಪಾಲಿಸಲಾಗುತ್ತಿದೆ. ಇನ್ನೂ ಪರೀಕ್ಷೆಯನ್ನು ಬಯಲಿನಲ್ಲಿಯೇ ಕೂರಿಸಿ ನಡೆಸಲಾಗುತ್ತಿದೆ.

    ಅಲ್ಲಿನ ಕಲಿಕಾ ವಿಧಾನ.. ಶಾಲೆ ದಿನಚರಿಯನ್ನು ಈ ವಿಡಿಯೋ ಮೂಲಕವೇ ಕಣ್ತುಂಬಿಕೊಳ್ಳಿ..

    ಚೀನಾದಲ್ಲಿ ಶುರುವಾಗಿವೆ ಶಾಲೆಗಳು, ಹೀಗಿದೆ ಅಲ್ಲಿನ ಮಕ್ಕಳ ದಿನಚರಿ

    ಕರೊನಾ ಜನ್ಮಸ್ಥಳವಾದ ಚೀನಾದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಶುರುವಾಗಿವೆ. ಮಕ್ಕಳು ಶಾಲೆಗೆ ತೆರಳುತ್ತಿದ್ದಾರೆ. ಅಲ್ಲಿ ಮಕ್ಕಳು ಶಾಲೆಯಲ್ಲಿ ನಡೆಸುವ ಚಟುವಟಿಕೆಗಳು ಹೀಗಿವೆ.#china, #Coronavirus #School #Reopenವಿಡಿಯೋ ಕೃಪೆ: ಚೀನಾ ಡೈಲಿ

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಮೇ 13, 2020

    ಶಾಲೆಗಳು ಹೀಗಿದ್ದರೇನೇ ಪಾಲಕರಿಗೆ ಕೊಂಚ ಸಮಾಧಾನ ಸಿಗಬಹುದೇನೋ?

    ಕೇಂದ್ರದಿಂದ ಬಡವರ ಖಾತೆಗೆ ಬರಲಿದೆ ಮತ್ತೊಂದು ಸುತ್ತಿನ ಹಣ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts