More

    ಶಾಲೆಗಳು ಜ್ಞಾನ ಹಂಚುವ ದೇಗುಲಗಳು

    ಶಿಕಾರಿಪುರ: ಎಲ್ಲ ಸಂಸ್ಥೆಗಳಿಗಿಂತ ಶಿಕ್ಷಣ ಸಂಸ್ಥೆಗಳ ಮೇಲೆ ಹಿರಿದಾದ ಜವಾಬ್ದಾರಿ ಇರುತ್ತದೆ. ಶಿಕ್ಷಣ ಕ್ಷೇತ್ರ ಭವ್ಯ ಭಾರತದ ಅಡಿಪಾಯ. ಅದು ಸದೃಢವಾಗಬೇಕು. ಅರಿವು ಜಾಗೃತಿ ಮತ್ತು ಜ್ಞಾನ ಹಂಚುವ ದೇಗುಲಗಳೇ ಶಾಲೆಗಳು. ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ಧಾರೆಯೆರೆಯಬೇಕು ಎಂದು ಪ್ರೇರಣಾ ವಿದ್ಯಾಸಂಸ್ಥೆಯ ಪ್ರಾಚಾರ್ಯ ಸೋಮಶೇಖರಯ್ಯ ಹೇಳಿದರು.

    ಕುಮದ್ವತಿ ಉತ್ಸವದ 3ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣ ಮನುಷ್ಯನನ್ನು ಸ್ವಾವಲಂಬಿಯನ್ನಾಗಿ ಮಾಡಬೇಕು. ಸಾಮಾಜಿಕ ಕಳಕಳಿಯನ್ನು ಅವರಲ್ಲಿ ತುಂಬಬೇಕು. ಸಚ್ಚಾರಿತ್ರ್ಯ ಇಲ್ಲದ ಶಿಕ್ಷಣ ಶಿಕ್ಷಣ ಆಗಲಾರದು. ಪ್ರತಿ ವಿದ್ಯಾರ್ಥಿಯ ಎದೆಯಲ್ಲಿಯೂ ರಾಷ್ಟ್ರ ಪ್ರೇಮದ ಬಗ್ಗೆ ಅಭಿಮಾನ ತುಂಬಬೇಕು. ಜನಹಿತ ಬಯಸುವ ಕಾರ್ಯಗಳತ್ತ ಅವರ ಮನಸುಗಳು ಹರಿಯುವಂತೆ ಮಾಡುವುದೇ ನಿಜವಾದ ಮತ್ತು ಪ್ರಖರವಾದ ಶಿಕ್ಷಣ ಎಂದು ಹೇಳಿದರು.
    ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಈಗ ರಜತೋತ್ಸವ ಪೂರೈಸಿದೆ. ಅಂದು ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಸಂಸ್ಕಾರಯುತ ಮತ್ತು ಮೌಲ್ಯಯುತವಾದ ಉನ್ನತ ಶಿಕ್ಷಣ ಕೊಡಬೇಕೆಂಬ ನಿರೀಕ್ಷೆಯಿಂದ ಜನ್ಮತಾಳಿದ ಸಂಸ್ಥೆ ಇದೀಗ ನಿರೀಕ್ಷೆಗಳನ್ನು ನಿಜವಾಗಿಸಿದೆ. ಕುಮದ್ವತಿ ಮಹಾ ವಿದ್ಯಾಲಯಕ್ಕೆ ನ್ಯಾಕ್ ಕಮಿಟಿ ಎ ಗ್ರೇಡ್ ನೀಡಿದೆ ಎಂದರು.
    ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಬಿ.ಶಿವಕುಮಾರ್, ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಜಿ.ಆರ್. ಹೆಗಡೆ, ಆಡಳಿತ ಮಂಡಳಿ ಪ್ರತಿನಿಧಿ ಡಾ. ಜಿ.ಎಸ್.ಶಿವಕುಮಾರ್, ಆಡಳಿತಾಧಿಕಾರಿ ಆರ್.ಎಂ.ಕುಬೇರಪ್ಪ, ಪ್ರಾಚಾರ್ಯೆ ಶರ್ವಾಣಿ, ಡಾ. ವೀರೇಂದ್ರ, ವಿದ್ಯಾಶಂಕರ್, ವಿಶ್ವನಾಥ್, ಶುಭಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts