More

    ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ

    ಮೂಡಿಗೆರೆ: ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ 11 ಮಂದಿ ಅರ್ಜಿ ಸಲ್ಲಿಸಿದ್ದು, ಆಕಾಂಕ್ಷಿಗಳ ಬೆಂಬಲಿಗರು ನಮ್ಮ ನಾಯಕನೇ ಅಧ್ಯಕ್ಷ ಆಗಬೇಕು ಎಂದು ಜಿಲ್ಲಾ ಮತ್ತು ರಾಜ್ಯ ಬಿಜೆಪಿ ನಾಯಕರ ಮುಂದೆ ಲಾಬಿ ನಡೆಸಲಾರಂಭಿಸಿದ್ದಾರೆ.

    ಬಿಜೆಪಿ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಕೊಟ್ಟಿಗೆಹಾರದ ಗಜೇಂದ್ರ, ಪಪಂ ಸದಸ್ಯ ಪಿ.ಜಿ.ಅನುಕುಮಾರ್, ಹಳೇಕೋಟೆ ಮನೋಜ್, ಸುನೀಲ್ ನಿಡಗೋಡು, ಭರತ್ ಬಾಳೂರು, ಪಂಚಾಕ್ಷರಿ, ಪ್ರವೀಣ ನಿಡಗೋಡು, ಶಿವಾನಂದ ಕುನ್ನಳ್ಳಿ, ಮಾಕೋನಹಳ್ಳಿ ಕೃಷ್ಣೇಗೌಡ, ಪ್ರಸನ್ನ ಮುಗ್ರಳ್ಳಿ, ಕೊಣಗೆರೆ ಸುಂದರೇಶ್ ತಾಲೂಕು ಬಿಜೆಪಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಇವರೆಲ್ಲರ ಪರವಾಗಿ ಬೆಂಬಲಿಗರು ಎರಡು ದಿನದ ಹಿಂದೆ ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರನ್ನು ಭೇಟಿಯಾಗಿ ತಾಲೂಕು ಅಧ್ಯಕ್ಷ ಸ್ಥಾನವನ್ನು ನಮ್ಮ ನಾಯಕನಿಗೇ ನೀಡಬೇಕೆಂದು ಒತ್ತಡ ಹೇರಿದ್ದಾರೆ.
    ಕೊಟ್ಟಿಗೆಹಾರದ ಗಜೇಂದ್ರ ಅವರು 17 ವರ್ಷ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿದ್ದರು, ಜಿಲ್ಲಾ ಕಾರ್ಯದರ್ಶಿಯಾಗಿ ಹಾಗೂ ಬಣಕಲ್ ಹೋಬಳಿ ಘಟಕದ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಪಪಂ ಸದಸ್ಯ ಪಿ.ಜಿ.ಅನುಕುಮಾರ್ 10 ವರ್ಷ ಬಣಕಲ್ ಹೋಬಳಿ ಅಧ್ಯಕ್ಷರಾಗಿದ್ದರು. ಬೂತ್ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
    ಹಳೇಕೋಟೆ ಮನೋಜ್ ತಾಲೂಕು ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕಾರ್ಯದರ್ಶಿ, ಕಸಬಾ ಹೋಬಳಿ ಅಧ್ಯಕ್ಷ, ಬಿದರಹಳ್ಳಿ ಗ್ರಾಪಂ ಸದಸ್ಯ, ಉಪಾಧ್ಯಕ್ಷ, ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸುನೀಲ್ ನಿಡಗೋಡು ಬಿಜೆಪಿ ತಾಲೂಕು ಯುವ ಮೋರ್ಚಾದ ಅಧ್ಯಕ್ಷ, ಗೋಣಿಬೀಡು ಹೋಬಳಿ ಅಧ್ಯಕ್ಷ, 3 ಬಾರಿ ಚಿನ್ನಿಗ ಗ್ರಾಪಂ ಸದಸ್ಯರಾಗಿ, ಒಮ್ಮೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
    ಭರತ್ ಬಾಳೂರು ಅವರು ಬಾಳೂರು ಹೋಬಳಿ ಬಿಜೆಪಿ ಅಧ್ಯಕ್ಷ, ತಾಲೂಕು ಯುವ ಮೋರ್ಚಾದ ಅಧ್ಯಕ್ಷ, 8 ವರ್ಷ ಗ್ರಾಪಂ ಅಧ್ಯಕ್ಷರಾಗಿದ್ದರು. ಹಾಲೂರು ಪಂಚಾಕ್ಷರಿ ಅವರು ತಾಲೂಕು ಘಟಕದ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಹೋಬಳಿ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಬೂತ್ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಉಳಿದವರೂ ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದು ತಾಲೂಕು ಘಟಕದ ಸಾರಥಿಯಾಗಲು ಪ್ರಯತ್ನ ನಡೆಸಿದ್ದಾರೆ.
    ಪಕ್ಷದ ವರಿಷ್ಠರು ಹಿರಿಯರಿಗೆ ಆದ್ಯತೆಯೆಂಬ ನಿರ್ಧಾರಕ್ಕೆ ಬಂದರೆ ಗಜೇಂದ್ರ ಕೊಟ್ಟಿಗೆಹಾರ ಅವರು ಅಧ್ಯಕ್ಷರಾಗುವ ಸಾಧ್ಯತೆಯಿದೆ. ಅಲ್ಲದೆ 50 ವರ್ಷಕ್ಕಿಂತ ಒಳಗಿನ ಯುವ ನಾಯಕರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದಾದರೆ ಹಾಲೂರು ಪಂಚಾಕ್ಷರಿ ಹಾಗೂ ಸುನೀಲ್ ನಿಡಗೋಡು ಮುಂಚೂಣಿಗೆ ಬರಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts