ನವದೆಹಲಿ: ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಅನಿರ್ದಿಷ್ಟಾವಧಿವರೆಗೆ ಮುಚ್ಚಲ್ಪಟ್ಟಿರುವ ಶಾಲೆ-ಕಾಲೇಜುಗಳು ಆಗಸ್ಟ್ 15ರ ನಂತರದಲ್ಲಿ ಪುನರಾರಂಭಗೊಳ್ಳಲಿವೆ ಎಂದು ಮಾನವಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ತಿಳಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿರುವ ಅವರು, ಆಗಸ್ಟ್ 15ರ ವೇಳೆಗೆ ದೇಶದ ಎಲ್ಲ ಬೋರ್ಡ್ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಲಾಗುವುದು. ಆನಂತರದಲ್ಲಿ ಶಾಲೆ-ಕಾಲೇಜುಗಳನ್ನು ಪುನರಾರಂಭಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಸೆಪ್ಟೆಂಬರ್ಗೆ ಸಿದ್ಧವಾಗಲಿದೆ ಕೋವಿಡ್ ಚುಚ್ಚುಮದ್ದು, ಹೆಚ್ಚಿನ ಉತ್ಪಾದನೆಗೆ ಭಾರತದ ಸಾಥ್
ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಮಾರ್ಚ್ 16ರಿಂದ ರಾಷ್ಟ್ರಾದ್ಯಂತ ಶಾಲೆ-ಕಾಲೇಜುಗಳು ಮುಚ್ಚಲ್ಪಟ್ಟಿವೆ. ಇತ್ತೀಚೆಗೆ ಕೇಂದ್ರ ಸರ್ಕಾರ ದೇಶವನ್ನು ಅನ್ಲಾಕ್ ಮಾಡುತ್ತಾ ಮಾಲ್, ದೇವಾಲಯಗಳು, ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿ ವಿವಿಧ ಸೌಲಭ್ಯಗಳ ಪುನರಾರಂಭಕ್ಕೆ ಹಸಿರು ನಿಶಾನೆ ತೋರಿದೆ.
ಮೇ 30ರಂದು ಅನ್ಲಾಕ್ 1.0 ಘೋಷಿಸಿದ್ದ ಕೇಂದ್ರ ಗೃಹ ಸಚಿವಾಲಯ, ಶಾಲೆ-ಕಾಲೇಜು, ಶೈಕ್ಷಣಿಕ ಕೇಂದ್ರಗಳು, ಕೋಚಿಂಗ್ ಮತ್ತು ತರಬೇತಿ ಸಂಸ್ಥೆಗಳ ಪುನರಾರಂಭದ ಬಗ್ಗೆ ಜುಲೈನಲ್ಲಿ ನಿರ್ಧರಿಸಲಾಗುವುದು. ಸೂಕ್ತ ಮಾರ್ಗಸೂಚಿ ರೂಪಿಸಿದ ನಂತರದಲ್ಲಿ ಅವುಗಳನ್ನು ಪುನರಾರಂಭಿಸಲಾಗುವುದು ಎಂದು ಹೇಳಿತ್ತು.
ಅಳಿಯನ ಸಾವಿನ ಬೆನ್ನಲ್ಲೇ ಫೇಸ್ಬುಕ್ ಕವರ್, ಪ್ರೊಫೈಲ್ಗೆ ಕಪ್ಪು ಫೋಟೋ ಅಪ್ಲೋಡ್ ಮಾಡಿದ ಅರ್ಜುನ್ ಸರ್ಜಾ