More

    ನಗರದ ಬಾಲವಿನಾಯಕ ಶಾಲಾ ವಾಷಿರ್ಕ ಸಮ್ಮೇಳನ! ಜೋಗತಿ ಮಂಜಮ್ಮ ಅವರಿಂದ ಉದ್ಘಾಟನೆ

    ವಿಜಯವಾಣಿ ಸುದ್ದಿಜಾಲ ಗದಗ
    ನಗರದ ಬಾಲ ವಿನಾಯಕ ವಿದ್ಯಾನಿಕೇತನ ಶಾಲೆಯ38ನೇ ವಾಷಿರ್ಕ ಸ್ನೇಹ ಸಮ್ಮೇಳನವನ್ನು ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ವಿಜೇತೆ ಮತ್ತು ಕರ್ನಾಟಕ ಜನಪದ ಅಕಾಡೆಮಿಯ ಮಾಜಿ ಅಧ್ಯೆ ಡಾ. ಮಾತಾ ಮಂಜಮ್ಮ ಜೋಗತಿಯವರು ದೀಪ ಬೆಳಗಿಸುವದರ ಮೂಲಕ ಉದ್ಘಾಟಿಸಿ
    ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹಾಲಿಗೆ ಬೆಂಕಿಯೆಂಬ ಸಂಸ್ಕಾರ ನೀಡಿದಾಗ ಕೆನೆಯಾಗಿ, ಮೊಸರಾಗಿ, ಬೆಣ್ಣೆಯಾಗಿ, ಕೊನೆಗೆ ದೇವರ ದೀಪಕ್ಕೆ ತುಪ್ಪವಾಗಿ, ಎಲ್ಲರ ಊಟಕ್ಕೆ ಬೇಕಾಗುವ ತುಪ್ಪವಾಗುತ್ತದೆ. ಅದೇ ರೀತಿಯಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಸಮಾಜದಲ್ಲಿ ಒಬ್ಬ ಆದರ್ಶ ವ್ಯಕ್ತಿಯಾಗಿ ಹೊರ ಹೊಮ್ಮುವರು. ಎಲ್ಲ ದಾನಕ್ಕಿಂತ ವಿದ್ಯಾದಾನ ಶ್ರೇಷ್ಠವಾದದ್ದು ಹಾಗೂ ಮಕ್ಕಳು ವಿದ್ಯೆಯ ಜೊತೆಗೆ ಗುರುಗಳಿಗೆ, ತಂದೆ ತಾಯಿಗಳಿಗೆ ಗೌರವ ನೀಡುವ ಸಂಸ್ಕಾರವನ್ನು ಕಲಿಯಬೇಕು ಎಂದರು.
    ಮಕ್ಕಳ ಆಸೆ, ಅಭಿರುಚಿ, ಆಸಕ್ತಿಗೆ ತಕ್ಕಂತೆ ವಿದ್ಯೆಯನ್ನು ಕಲ್ಪಿಸಿಕೊಡಬೇಕು. ದೂರದರ್ಶನ, ಮೊಬೈಲ್​ನಿಂದಾಗಿ ಪರಸ್ಪರ ಭಾಂಧವ್ಯಗಳು ಕಳಚಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಪಾಲಕರು ಆಧುನಿಕ ಜೀವನಕ್ಕೆ ಒಳಗಾಗದೆ, ಮಕ್ಕಳ ಭವಿಷ್ಯದ ಮೇಲೆ ಒತ್ತಾಯದ ಶಿಣವನ್ನು ಹೇರದೆ ಅವರ ಜೊತೆ ಸ್ನೇಹಿತರಾಗಿ, ಸಲಹೆಗಾರರಾಗಿ, ಒಳ್ಳೆಯ ಮಾರ್ಗದರ್ಶಕರಾದಾಗ ಮಾತ್ರ ಮಕ್ಕಳ ಉಜ್ವಲ್​ ಭವಿಷ್ಯವನ್ನು ರೂಪಿಸಿಕೊಳ್ಳುವರು ಎಂದು ಜೋಗತಿ ಮಂಜಮ್ಮ ಅವರು ಪಾಲಕರಿಗೆ ತಿಳಿಸಿ ಹೇಳಿದರು.
    ಕಾರ್ಯಕ್ರಮದಲ್ಲಿ 2022/2023 ರ ಶೈಕ್ಷಣಿಕ ವರ್ಷದ ಪರೀೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಥಿರ್ಗಳಿಗೆ ಪ್ರಶಸ್ತಿ ಗೌರವಿಸಲಾಯಿತು.
    ಎಸ್​. ರವಿ, ಆರ್​. ವಿನಾಯಕ್​, ಮಲ್ಲಿಕಾ ರವಿ, ಎಂ. ಆರ್​. ಪಾಟಿಲ್​, ವಿ. ಎಂ ಅಡ್ನೂರ, ಪಿ.ಜಿ. ಬ್ಯಾಳಿ, ಶಿಕ ಶಿಕೇತರ ಸಿಬ್ಬಂದಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts