More

    ಶಾಲಾ ಸಂಸತ್ತಿಗೆ ಇವಿಎಂ ಮಷಿನ್ ಮೂಲಕ ಮತದಾನ

    .

    ಹುಬ್ಬಳ್ಳಿ : ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಇವಿಎಂ ಮಷಿನ್ ಮೂಲಕ ಮತದಾನ ಮಾಡುವುದು ಸಾಮಾನ್ಯ. ಆದರೆ, ಹುಬ್ಬಳ್ಳಿ ವಿಶ್ವೇಶ್ವರ ನಗರದ ಸರ್ಕಾರಿ ಪ್ರೌಢ ಶಾಲೆಯ ಶಾಲಾ ಸಂಸತ್ತಿಗೆ ನಡೆದ ಚುನಾವಣೆಯಲ್ಲಿಯೂ ವಿದ್ಯಾರ್ಥಿಗಳು ಇವಿಎಂ ಮಷಿನ್ ಮೂಲಕ ಮತ ಚಲಾಯಿಸಿದ್ದು ವಿಶೇಷವಾಗಿತ್ತು.

    ವಿಶ್ವೇಶ್ವರ ನಗರದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಇವಿಎಂ ಮಷಿನ್ ಮೂಲಕ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲೆಯ ಆಡಳಿತ ಮಂಡಳಿ ಹಾಗೂ ಮುಖ್ಯೋಪಾಧ್ಯಾಯರು, ಈ ಬಾರಿ ಶಾಲಾ ಸಂಸತ್ತಿಗೆ ವಿನೂತನ ರೀತಿಯಲ್ಲಿ ಚುನಾವಣೆ ನಡೆಸಲು ನಿರ್ಧರಿಸಿದ್ದರು.

    ಮಂಗಳವಾರದಂದು ನಡೆದ ಶಾಲಾ ಸಂಸತ್ತಿನ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಗೌಪ್ಯ ಮತದಾನ ಮಾಡಿದರು. 8, 9 ಮತ್ತು 10ನೇ ತರಗತಿಯ ಒಟ್ಟು 31 ವಿದ್ಯಾರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 10 ಜನ ವಿದ್ಯಾರ್ಥಿಗಳನ್ನು ಶಾಲಾ ಸಂಸತ್ತಿಗೆ ಚುನಾಯಿಸಬೇಕಿತ್ತು. 3 ಬ್ಯಾಲೆಟ್ ಮಷಿನ್ ಮತ್ತು 3 ಇವಿಎಂ ಮಷಿನ್​ಗಳು ಮತಗಟ್ಟೆಯಲ್ಲಿ ಇದ್ದವು. ಶಾಲೆಯ ಶಿಕ್ಷಕರು ಚುನಾವಣೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.

    ಮಹಾನಗರ ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಸಾಮಾಜಿಕ ಕಾರ್ಯಕರ್ತ ಸಿದ್ದು ಮೊಗಲಿಶೆಟ್ಟರ, ಮುಖ್ಯೋಪಾಧ್ಯಾಯರಾದ ಡಿ.ಜಿ. ಕಮ್ಮಾರ, ಎಸ್​ಡಿಎಂಸಿ ಅಧ್ಯಕ್ಷ ಮುತ್ತಣ್ಣ ಸುರಪುರ, ಅಶೋನಗರ ಪೊಲೀಸ್ ಠಾಣೆ ಎಸ್​ಐ ಮೀನಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts