More

    ಕಬ್ಬಿಣಾಂಶದ ಮಾತ್ರೆ ನುಂಗಿ ಅಸ್ವಸ್ಥರಾದ ವಿದ್ಯಾರ್ಥಿಗಳು; ಸರ್ಕಾರಿ ಶಾಲೆ ಮಕ್ಕಳು ಆಸ್ಪತ್ರೆಗೆ ದಾಖಲು

    ಬೆಳಗಾವಿ(ಸವದತ್ತಿ): ಶಾಲೆಯಲ್ಲಿ ನೀಡಿದ್ದ ಕಬ್ಬಿಣಾಂಶದ ಮಾತ್ರೆಗಳನ್ನು ಸೇವಿಸಿದ್ದ ಸುಮಾರು 70 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಸವದತ್ತಿ ಸರ್ಕಾರಿ ಆಸ್ಪತ್ರೆಗೆ ಸೋಮವಾರ ಸಂಜೆ ದಾಖಲಾಗಿದ್ದಾರೆ.

    ಸವದತ್ತಿ ತಾಲೂಕಿನ ಬಸಿಡೋಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು (ಐರನ್ ಆ್ಯಂಡ್ ಪೋಲಿಕ್ ಆ್ಯಸಿಡ್) ಮಾತ್ರೆ ನುಂಗಿದ್ದೇ ಆರೋಗ್ಯ ಹದಗೆಡಲು ಕಾರಣವಾಗಿದೆ ಎಂದು ಪೋಷಕರು ತಮ್ಮ ಅಸಹಾಯಕತೆಯನ್ನು ‘ವಿಜಯವಾಣಿ’ ಎದುರು ತೋಡಿಕೊಂಡಿದ್ದಾರೆ.

    ಅಪೌಷ್ಠಿಕತೆಯನ್ನು ತಡೆಗಟ್ಟುವ ಮಾತ್ರೆಗಳನ್ನು 70 ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಶಾಲೆಯಲ್ಲಿ (ಐರನ್ ಆ್ಯಂಡ್ ಪೋಲಿಕ್ ಆ್ಯಸಿಡ್) ಮಾತ್ರೆಗಳನ್ನು ವಿತರಿಸಿದ ತಕ್ಷಣವೇ ಕೆಲ ವಿದ್ಯಾರ್ಥಿಗಳು ಸೇವಿಸಿದ್ದರು. ಸಂಜೆಯಾಗುತ್ತಿದ್ದಂತೆಯೇ ಕೆಲವು ವಿದ್ಯಾರ್ಥಿಗಳಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಇನ್ನು ಕೆಲವರಲ್ಲಿ ವಾಂತಿಬೇಧಿ, ತಲೆನೋವಿನಿಂದ ಬಳಲುತ್ತಿದ್ದಾರೆ.

    ಮಕ್ಕಳು ಅಸ್ವಸ್ಥರಾಗಿದ್ದನ್ನು ಕಂಡು ಭಯಭೀತರಾದ ಪೋಷಕರು ತಮ್ಮ ಮಕ್ಕಳ ಸಮೇತ ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ತೀವ್ರವಾಗಿ ಕುಸಿದು ಬಿದ್ದಿರುವ ವಿದ್ಯಾರ್ಥಿಗಳಿಗೆ ಇಂಜೆಕ್ಷನ್ ಜತೆಗೆ ಸಲಾಯಿನ್ ಮೂಲಕ ಗುಕ್ಲೋಸ್ ನೀಡಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ. ಮಕ್ಕಳು ಶಾಲೆಯಲ್ಲಿ ಮಲಗಿದ ತಕ್ಷಣ ಪೋಷಕರ ಆಕ್ರಂದನ ಹೇಳ ತೀರದಾಗಿತ್ತು.

    ಮಲಗಿದ್ದವರ ಮೇಲೇ ಸಾಗಿದ ಟೆಂಪೋ; ಒಬ್ಬನ ಸಾವು, ಮೂವರಿಗೆ ಗಂಭೀರ ಗಾಯ..

    ಜಾತಿ ಕಾರಣಕ್ಕೆ ಪ್ರೇಮ ವೈಫಲ್ಯ; ‘ತುಂಬಾ ನೆನಪಾಗ್ತಿದಿಯ..’ ಅಂತ ಆಡಿಯೊ ಮೆಸೇಜ್ ಕಳಿಸಿ ನೇಣು ಹಾಕೊಂಡ ಯುವಕ..

    ನಾನು ರಾಜಕೀಯಕ್ಕೆ ಬರಲು ಕಾರಣ ಮುಸ್ಲಿಂ ಗುರುಗಳಲ್ಲ, ಒಕ್ಕಲಿಗ ಸ್ವಾಮೀಜಿ: ಜಮೀರ್ ಅಹ್ಮದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts