More

    ತಿರುವಾಂಕೂರು ದೇವಸ್ವಂ ಬೋರ್ಡ್​ನಲ್ಲಿ ಪರಿಶಿಷ್ಟ ಪಂಗಡದವರೂ ಪಾರ್ಟ್​ ಟೈಮ್​ ಅರ್ಚಕರು…

    ತಿರುವನಂತಪುರಂ: ಕೇರಳದ ತಿರುವಾಂಕೂರು ದೇವಸ್ವಂ ಬೋರ್ಡ್​ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರನ್ನೂ ಪಾರ್ಟ್​ ಟೈಮ್​ ಅರ್ಚಕರನ್ನಾಗಿ ನೇಮಿಸುವ ಐತಿಹಾಸಿಕ ನಿರ್ಧಾರವನ್ನು ಕೇರಳ ಸರ್ಕಾರ ಕೈಗೊಂಡಿದೆ.
    ಪರಿಶಿಷ್ಟ ಜಾತಿಯ 18 ಹಾಗೂ ಪರಿಶಿಷ್ಟ ಪಂಗಡದ ಒಬ್ಬರನ್ನು ತಿರುವಾಂಕೂರು ದೇವಸ್ವಂ ಮಂಡಳಿಯಲ್ಲಿ ಪಾರ್ಟ್​ ಟೈಮ್​ ಅರ್ಚಕರನ್ನಾಗಿ ನೇಮಿಸಿಕೊಳ್ಳಲು ಸರ್ಕಾರ ಶಿಫಾರಸು ಮಾಡಿದೆ ಎಂದು ಸಚಿವ ಕಡಕಂಪಳ್ಳಿ ಸುರೇಂದ್ರನ್​ ತಿಳಿಸಿದ್ದಾರೆ.

    2017ರ ಆ. 23ರಂದು ಪ್ರಕಟವಾಗಿದ್ದ ರ‍್ಯಾಂಕ್​ ಲಿಸ್ಟ್​ ಪ್ರಕಾರ ತಿರುವಾಂಕೂರು ದೇವಸ್ವಂ ಮಂಡಳಿಯಲ್ಲಿ ಇದುವರೆಗೆ 310 ಜನರನ್ನು ಪಾರ್ಟ್ ಟೈಮ್​ ಅರ್ಚಕರನ್ನಾಗಿ ನೇಮಿಸಿಕೊಳ್ಳಲಾಗಿತ್ತು. ಆದರೆ ಆ ಸಮಯದಲ್ಲಿ ಪರೀಕ್ಷೆಗೆ ಎಸ್​ಸಿ-ಎಸ್​ಟಿ ಕೆಟಗರಿಯಿಂದ ಸಾಕಷ್ಟು ಅಭ್ಯರ್ಥಿಗಳು ಬಂದಿರಲಿಲ್ಲ.

    ಎಲ್​ಡಿಎಫ್​ ಸರ್ಕಾರ ರಚನೆಯಾದ ಬಳಿಕ ನೇಮಕ ಮಂಡಳಿಯನ್ನು ಮರು ರಚಿಸಿದ್ದು, ತಿರುವಾಂಕೂರು, ಕೊಚಿನ್​ ಮತ್ತು ಮಲಬಾರ್​ ದೇವಸ್ವಂ ಬೋರ್ಡ್​ಗಳ ವಿವಿಧ ಹುದ್ದೆಗಳಿಗೆ ಸುಮಾರು 815 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts