More

    ಪೊಕ್ಸೊ ಕಾಯ್ದೆ ಅಡಿ ವಿವಾದಾತ್ಮಕ ತೀರ್ಪು ನೀಡಿದ ಬಾಂಬೆ ಹೈಕೋರ್ಟ್​ ಜಡ್ಜ್​ಗೆ ಸುಪ್ರೀಂ ಶಾಕ್​!

    ನವದೆಹಲಿ: ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಡಿಯಲ್ಲಿ ಬಾಂಬೆ ಹೈಕೋರ್ಟ್​ ನೀಡಿದ ತೀರ್ಪು ಮಾಧ್ಯಮಗಳಲ್ಲಿ ಪ್ರಕಟವಾಗಿ ಭಾರಿ ವಿವಾದ ಸೃಷ್ಟಿಯಾದ ಬೆನ್ನಲ್ಲೇ ಸುಪ್ರೀಂಕೋರ್ಟ್ ಮಂಡಳಿ​ ಅನಿರೀಕ್ಷಿತ ನಡೆಯನ್ನು ಅನುಸರಿಸಿದೆ.

    ವಿವಾದಾತ್ಮಕ ತೀರ್ಪು ನೀಡಿರುವ ನ್ಯಾಯಧೀಶೆ ಪುಷ್ಪ ಗನೆಡಿವಾಲಾಗೆ ಸುಪ್ರೀಂಕೋರ್ಟ್​ ಮಂಡಳಿ ಶಾಕ್​ ನೀಡಿದ್ದು, ಬಾಂಬೆ ಹೈಕೋರ್ಟ್​ನಲ್ಲಿ ಪುಷ್ಪ ಅವರಿಗೆ ಶಾಶ್ವತ ಸ್ಥಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮಾಡಿದ್ದ ಶಿಫಾರಸ್ಸನ್ನು ಹಿಂತೆಗೆದುಕೊಂಡಿದೆ.

    ಪುಷ್ಪಾ ಅವರು ಬಾಂಬೆ ಹೈಕೋರ್ಟ್​ನಲ್ಲಿ ಹೆಚ್ಚುವರಿ ಜಡ್ಜ್​ ಆಗಿದ್ದರು. ಪೊಕ್ಸೊ ಕಾಯ್ದೆ ಅಡಿಯ ಅನೇಕ ಪ್ರಕರಣಗಳಲ್ಲಿ ಪುಷ್ಪಾ ಅವರು ನೀಡಿದ್ದ ತೀರ್ಪು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ಆಕ್ರೋಶದ ಜತೆಗೆ ಅಸಮಾಧಾನವೂ ವ್ಯಕ್ತವಾಗುತ್ತಿದೆ.

    ಜನವರಿ 19ರಂದು ನೀಡಿದ ವಿವಾದಾತ್ಮಕ ತೀರ್ಪಿನಲ್ಲಿ ನ್ಯಾಯಾಮೂರ್ತಿ ಪುಷ್ಪಾ ಅವರು 12 ವರ್ಷದ ಬಾಲಕಿ ಮೇಲಿನ ಲೈಂಗಿಕ ಕಿರುಕುಳ ಆರೋಪ ಹೊತ್ತ 39 ವರ್ಷದ ವ್ಯಕ್ತಿಯನ್ನು ಪೊಕ್ಸೊ ಪ್ರಕರಣದಿಂದ ಖುಲಾಸೆಗೊಳಿಸಿದ್ದರು. ಬಟ್ಟೆಯನ್ನು ಬಿಚ್ಚದೆ, ಚರ್ಮ-ಚರ್ಮಕ್ಕೂ ಸಂಪರ್ಕ ಸಾಧಿಸದೆ ಹಾಗೂ ನೇರವಾಗಿ ದೈಹಿಕ ಸಂಪರ್ಕ ಮಾಡದೆ ಅಂಗಾಗಳನ್ನು ಸ್ಪರ್ಶಿಸಿದರೆ ಅದು ಲೈಂಗಿಕ ಕಿರುಕುಳ ಆಗುವುದಿಲ್ಲ ಮತ್ತು ಅದನ್ನು ಪೊಕ್ಸೊ ಕಾಯ್ದೆ ಅಡಿ ವ್ಯಾಖ್ಯಾನಿಸಲಾಗದು ಎಂದು ತೀರ್ಪು ಕುರಿತು ವಿವರಣೆ ನೀಡಿದ್ದರು.

    ಇದನ್ನೂ ಓದಿರಿ: ಮಂಚದಲ್ಲೂ ಪತ್ನಿಗೆ ಫೋನ್​ ಬೇಕು, ಲೈಂಗಿಕ ಸುಖವೇ ಇಲ್ಲ- ಡಿವೋರ್ಸ್​ ಕೇಸ್​ ಹಾಕಬಹುದಾ?

    ಜನವರಿ 15ರಂದು ಪೊಕ್ಸೊ ಕಾಯ್ದೆ ಅಡಿ ನೀಡಿದ ಮತ್ತೊಂದು ತೀರ್ಪಿನಲ್ಲಿ ಅಪ್ರಾಪ್ತ ಬಾಲಕಿಯ ಕೈಹಿಡಿದುಕೊಳ್ಳುವುದು ಮತ್ತು ಪ್ಯಾಂಟ್​ ಜಿಪ್​ ತೆರೆಯುವುದು ಲೈಂಗಿಕ ಕಿರುಕುಳವಲ್ಲ ಎಂದಿದ್ದರು.

    ಈ ಎರಡು ತೀರ್ಪುಗಳು ದೇಶಾದ್ಯಂತ ಭಾರಿ ಚರ್ಚೆಯನ್ನು ಹುಟ್ಟುಹಾಕಿದ್ದವು. ಅಲ್ಲದೆ, ಇಬ್ಬರು ಹಿರಿಯ ನ್ಯಾಯಮೂರ್ತಿಗಳು, ಪುಷ್ಪಾರಿಗೆ ನೀಡುವ ಶಾಶ್ವತ ಸ್ಥಾನದ ವಿರುದ್ಧ ಧ್ವನಿಯೇರಿಸಿದ್ದರು. ಆದರೂ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ ಅವರು ಅದನ್ನು ಕಡೆಗಣಿಸಿ ಪುಷ್ಪಾ ಅವರ ನೇಮಕಾತಿಯನ್ನು ಅಂಗೀಕರಿಸಿ ಜನವರಿ 20ರಂದು ಕಾನೂನು ಸಚಿವಾಲಯಕ್ಕೆ ಕಳುಹಿಸಿದರು. ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸುಪ್ರೀಂಕೋರ್ಟ್​ ಮಂಡಳಿ ಇದೀಗ ಪುಷ್ಪಾ ಅವರ ಶಾಶ್ವತ ಸ್ಥಾನದ ಶಿಫಾರಸ್ಸನ್ನು ಹಿಂತೆಗೆದುಕೊಂಡಿದೆ. (ಏಜೆನ್ಸೀಸ್​)

    ಬಟ್ಟೆ ಬಿಚ್ಚದೇ ಮುಟ್ಟಿದರೆ ಲೈಂಗಿಕ ದೌರ್ಜನ್ಯವಲ್ಲ ಎಂದಿದ್ದ ಹೈಕೋರ್ಟ್‌- ವಿವಾದದ ಬೆನ್ನಲ್ಲೇ ತಡೆ ನೀಡಿದ ಸುಪ್ರೀಂ

    ಅಲ್ಲಿ ಸ್ಪರ್ಶಿಸುವುದು ಲೈಂಗಿಕ ದೌರ್ಜನ್ಯವಲ್ಲ: ವಿವಾದಕ್ಕೆ ಎಡೆಮಾಡಿಕೊಟ್ಟ ಬಾಂಬೆ ಹೈಕೋರ್ಟ್​ ತೀರ್ಪು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts