More

    ಚೆಕ್ ಬೌನ್ಸ್ ಆಗಿ ವಂಚನೆ ಆಗಿದೆಯೇ? ಪರಿಹಾರಕ್ಕೆ ವರ್ಷಾನುಗಟ್ಟಲೆ ಕಾಯಬೇಕಾಗಿಲ್ಲ, ಭವಿಷ್ಯದಲ್ಲಿ ಶೀಘ‍್ರವೇ ಸಿಗಲಿದೆ ನ್ಯಾಯ!

    ನವದೆಹಲಿ: ಚೆಕ್ ಪಾವತಿಯ ವಿಶ್ವಾಸಾರ್ಹತೆ ಹೆಚ್ಚಿಸುವುದಕ್ಕೆ ಮತ್ತು ದುರ್ಬಳಕೆ ತಡೆಯುವುದಕ್ಕಾಗಿ ಪಾವತಿಯ ಉದ್ದೇಶವನ್ನು ಒಳಗೊಂಡ ಮಾಹಿತಿ ಇರುವ ಪ್ರೊಫಾರ್ಮಾ ಅಭಿವೃದ್ಧಿ ಪಡಿಸಲು ಭಾರತೀಯ ರಿಸರ್ವ್ ಬ್ಯಾಂಕಿಗೆ ಸುಪ್ರೀಂ ಕೋರ್ಟ್‍ ಒತ್ತಾಯಿಸಿದೆ.

    ಚೆಕ್‍ ಬೌನ್ಸ್ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್‍ ಈ ರೀತಿ ಒತ್ತಾಯಿಸಿದೆ. ಅಲ್ಲದೆ, ಚೆಕ್‍ ಬೌನ್ಸ್‍ ಪ್ರಕರಣದಲ್ಲಿ ಚೆಕ್‍ ಬರೆದವರ ಇ-ಮೇಲ್, ವಿಳಾಸ, ಮೊಬೈಲ್ ಫೋನ್‍ ನಂಬರ್ ಸೇರಿ ಎಲ್ಲ ಮಾಹಿತಿಗಳನ್ನು ದೂರುದಾರರು ಮತ್ತು ಪೊಲೀಸರ ಜತೆ ಹಂಚಿಕೊಳ್ಳುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ವಿಚಾರ ಪರಿಗಣಿಸಬೇಕು. ಹೀಗೆ ಮಾಡಿದರೆ ಕೋರ್ಟ್‍ ವಿಚಾರಣೆ ವೇಳೆ ಅವರ ಹಾಜರಾತಿಯನ್ನು ಖಾತರಿಪಡಿಸುವುದು ಸಾಧ್ಯವಿದೆ ಎಂದು ಬ್ಯಾಂಕುಗಳಿಗೆ ಕೋರ್ಟ್ ಹೇಳಿದೆ.

    ಮುಖ್ಯನ್ಯಾಯಮೂರ್ತಿ ಎಸ್‍.ಎ.ಬೊಬ್ಡೆ ಮತ್ತು ನ್ಯಾಯಮೂರ್ತಿ ಎಲ್‍.ನಾಗೇಶ‍್ವರ ರಾವ್ ಅವರನ್ನು ಒಳಗೊಂಡ ನ್ಯಾಯಪೀಠ ಗುಜರಾತ್‍ನ ಚೆಕ್‍ ಬೌನ್ಸ್ ಪ್ರಕರಣದ ವಿಚಾರಣೆಗೆ ಸಂಬಂಧಿಸಿ ಮಾರ್ಚ್ 5ರಂದು ನೀಡಿದ ನಿರ್ಣಯ ಇದಾಗಿದೆ. ಈ ಪ್ರಕರಣ ಹದಿನೈದು ವರ್ಷಗಳ ಕಾಲ ವಿವಿಧ ಕೋರ್ಟ್‍ಗಳಲ್ಲಿ ನಡೆದು ಕೊನೆಗೆ ಸುಪ್ರೀಂ ಕೋರ್ಟ್‍ ತಲುಪಿದೆ. ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠ ಗಮನಿಸಿದ ವಿಚಾರವನ್ನು ಬೊಟ್ಟು ಮಾಡಿಹೇಳಿದ್ದು, ಸೆಕ್ಷನ್ 138ರ ಪ್ರಕಾರದ ಆರೋಪಿ ವಿಚಾರಣಾ ಕೋರ್ಟ್‍ಗೆ ಗೈರು ಹಾಜರಾಗುವುದೇ ಪ್ರಕರಣ ಇತ್ಯರ್ಥಗೊಳಿಸುವುದು ವಿಳಂಬವಾಗುವುದಕ್ಕೆ ಕಾರಣ ಎಂದಿದೆ.

    ದೆಹಲಿ ಹಿಂಸಾಚಾರಕ್ಕೆ ಬಾಳೆಹಣ್ಣಿನಲ್ಲಿಟ್ಟು ಹಣ ಸಾಗಿಸಿದ್ದು ನಿಜವೇ

    ನೆಗೋಷಿಯೇಬಲ್‍ ಇನ್‍ಸ್ಟ್ರುಮೆಂಟ್‍ ಆ್ಯಕ್ಟ್ನ 138ನೇ ಸೆಕ್ಷನ್‍ ಪ್ರಕಾರ ಚೆಕ್‍ ಬೌನ್ಸ್ ಪ್ರಕರಣ ಬರುತ್ತಿದ್ದು, ಅಂತಹ ಚೆಕ್‍ ಬರೆದವರನ್ನು ಅಪರಾಧಿಕ ಬಾಧ್ಯತೆಗೆ ಒಳಪಡಿಸುತ್ತದೆ. ನ್ಯಾಯಪೀಠದ ಟಿಪ್ಪಣಿ ಪ್ರಕಾರ, ಚೆಕ್‍ಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವುದು, ಅದೇ ರೀತಿ ಕ್ಷುಲ್ಲಕ ದಾವೆಗೆ ಕಾರಣವಾಗುವಂತೆ ಚೆಕ್‍ಗಳ ದುರ್ಬಳಕೆಗೆ ಅವಕಾಶ ನೀಡದಿರುವುದನ್ನು ಖಾತರಿಪಡಿಸುವುದು ಅಗತ್ಯ. ಪಾವತಿಯ ಉದ್ದೇಶವನ್ನು ಒಳಗೊಳ್ಳುವಂತೆ ಹೊಸ ಪ್ರೊಫಾರ್ಮಾವನ್ನೂ ಅಭಿವೃದ್ಧಿಪಡಿಸುವ ವಿಚಾರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪರಿಗಣಿಸಲೂ ಬಹುದು. ಇದರ ಜತೆಗೆ ಇಂತಹ ಕೇಸಿಗೆ ಸಂಬಂಧಿಸಿದ ಇತರೆ ಮಾಹಿತಿಗಳೂ ಲಭ್ಯವಾಗುವಂತೆ ಇದ್ದರೆ ಒಳ್ಳೆಯದು.

    ಇತ್ತೀಚಿನ ಅಧ್ಯಯನ ಪ್ರಕಾರ, ಒಟ್ಟು ಚೆಕ್‍ ಬೌನ್ಸ್ ಪ್ರಕರಣಗಳ ಪೈಕಿ ಅರ್ಧಕ್ಕಿಂತಲೂ ಹೆಚ್ಚಿನದು ಅಂದರೆ ಸುಮಾರು 18 ಲಕ್ಷಕ್ಕೂ ಹೆಚ್ಚು ಕೇಸುಗಳು ಆರೋಪಿಯ ಗೈರಿನ ಕಾರಣಕ್ಕೆ ಬಾಕಿ ಉಳಿದಿವೆ. ಹೀಗಾಗಿ, ಆರೋಪಿಯ ಹಾಜರಾತಿಯನ್ನು ಖಾತರಿ ಪಡಿಸಲು ಬಲವಂತದ ಮೂಲಕವಾದರೂ ಸೂಕ್ತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು. ಒಂದೊಮ್ಮೆ ಅಗತ್ಯ ಬಿದ್ದರೆ ಅಪರಾಧ ದಂಡಸಂಹಿತೆಯ ಸೆಕ್ಷನ್ 83ರ ಅನ್ವಯ ಆರೋಪಿಯ ಸ್ಥಿರಾಸ್ತಿ/ ಚರಾಸ್ತಿಯನ್ನು ಕೇಸಿಗೆ ಅಟ್ಯಾಚ್‍ ಮಾಡುವುದನ್ನೂ ಪರಿಗಣಿಸಬಹುದು.

    ತೂಕ ಇಳಿಸಲು ಉಪಾಹಾರ ಬಿಟ್ಟರಾಗತ್ತ ಅಥವಾ ಊಟವನ್ನೇ ಬಿಡಬೇಕಾ?

    ಇದಕ್ಕೆ ಹೊರತಾಗಿ, ಚೆಕ್‍ ಬೌನ್ಸ್ ಕೇಸ್‍ಗಳು ವಿಚಾರಣೆ ಹಂತದಲ್ಲಿ ಬಾಕಿಯಾಗಿ ಎಲ್ಲೆಲ್ಲಿ ಹೆಚ್ಚು ಉಳಿದಿವೆಯೋ ಅಲ್ಲಿ ಅವುಗಳನ್ನು ಬೇಗನೆ ಇತ್ಯರ್ಥಗೊಳಿಸುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್‍ಗಳಿಗೆ ಸುಪ್ರೀಂ ಕೋರ್ಟ್‍ ಒತ್ತಾಯಿಸಿದೆ. ಚೆಕ್‍ ಬೌನ್ಸ್ ಕೇಸುಗಳನ್ನು ಬೇಗನೆ ಇತ್ಯರ್ಥಗೊಳಿಸುವುದಕ್ಕೆ ಬೇಕಾದ ವ್ಯವಸ್ಥೆ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‍ ಸುಮೋಟೋ ಪ್ರಕರಣವನ್ನು “Expeditious trial of cases under Section 138 of NI Act, 1881” ಎಂಬ ಶೀರ್ಷಿಕೆಯ ಪ್ರಕಾರ ದಾಖಲಿಸಿಕೊಂಡಿದೆ. ಇದಕ್ಕೆ ಹಿರಿಯ ನ್ಯಾಯವಾದಿ ಸಿದ್ಧಾರ್ಥ ಲೂತ್ರಾ ಮತ್ತು ನ್ಯಾಯವಾದಿ ಕೆ.ಪರಮೇಶ್ವರ್ ಅವರನ್ನು ಕೋರ್ಟ್‍ಗೆ ನೆರವಾಗುವ ಸಲುವಾಗಿ ಅಮಿಕಸ್ ಕ್ಯೂರಿ ಆಗಿ ನೇಮಕಗೊಳಿಸಿದೆ.

    ಈ ಸಂಬಂಧ ಕೇಂದ್ರ ಸರ್ಕಾರ, ಎಲ್ಲ ಹೈಕೋರ್ಟ್‍, ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಡಿಜಿಪಿ, ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ, ಆರ್‍ ಬಿಐ, ಬ್ಯಾಂಕಿಂಗ್ ಕ್ಷೇತ್ರದ ಪ್ರತಿನಿಧಿಯಾಗಿ ಮುಂಬೈನ ಭಾರತೀಯ ಬ್ಯಾಂಕುಗಳ ಅಸೋಸಿಯೇಷನ್ ಗೂ ಕೋರ್ಟ್ ‍ನೋಟಿಸ್ ಕಳುಹಿಸಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 16ಕ್ಕೆ ನಿಗದಿಗೊಳಿಸಿದೆ. (ಏಜೆನ್ಸೀಸ್)

    ಸೂಪರ್​ಮಾರ್ಕೆಟ್​ನಲ್ಲಿ ಐಸ್​ಕ್ರೀಂ ತಿಂದ ಯುವಕನಿಗೆ ಒಂದು ತಿಂಗಳು ಜೈಲು ಶಿಕ್ಷೆ; ಹಾಗಂತ ಆತ ಕದ್ದಿರಲಿಲ್ಲ…ಕತೆ ಬೇರೇನೆ ಇದೆ ಓದಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts