More

    ಕೃಷಿ ಕಾಯ್ದೆ ತಡೆಗೆ ಸುಪ್ರೀಂ ಸೂಚನೆ; ನೀವು ತಡೆಯದಿದ್ದರೆ ನಾವೇ ತಡೆಯುತ್ತೇವೆ ಎಂದ ಸುಪ್ರೀಂ

    ನವದೆಹಲಿ: ದೇಶಾದ್ಯಂತ ರೈತರ ಹೋರಾಟಕ್ಕೆ ಕಾರಣವಾಗಿರುವ ಕೃಷಿ ಸುಧಾರಣಾ ಕಾಯ್ದೆಗಳನ್ನು ಸದ್ಯದ ಮಟ್ಟಿಗೆ ತಡೆ ನೀಡಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್​ ಸೂಚನೆ ನೀಡಿದೆ. ಕೇಂದ್ರ ಸರ್ಕಾರದ ಸಮಿತಿ ರೈತರ ನಡುವೆ ಒಂದು ಒಪ್ಪಂದ ಬರುವವರೆಗೂ ತಡೆ ನೀಡಬೇಕೆಂದು ತಿಳಿಸಲಾಗಿದೆ.

    ಇದನ್ನೂ ಓದಿ: ದೇವೇಗೌಡರ ಎದುರಿಗೆ ಅಭಿವೃದ್ಧಿ ಮಾಡಿ ತೋರಿಸ್ತಿನಿ, ಇವರು ಏನೂ ಮಾಡಬೇಕಿಲ್ಲ ಎಂದು ಹಾಸನ ಎಂಎಲ್‌ಎಗೆ ಟಾಂಗ್ ಕೊಟ್ರು ರೇವಣ್ಣ!

    ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಮನವಿಯನ್ನು ಸೋಮವಾರದಂದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅವರನ್ನೊಳಗೊಂಡ ನ್ಯಾಯಾಪೀಠವು ಈ ಸೂಚನೆ ನೀಡಿದೆ.

    ಕಾಯ್ದೆಗಳಿಂದಾಗಿ ದೇಶದಲ್ಲಾದ ಬೆಳವಣಿಗೆಗಳ ಕುರಿತು ನ್ಯಾಯಾಲಯ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಸರ್ಕಾರ ಕಾಯ್ದೆಯಲ್ಲಿ ಬದಲಾವಣೆಗಳನ್ನು ಮಾಡಲು ಸಿದ್ಧವಿದೆ ಎಂದು ತಿಳಿಸಿದೆ. ಆದರೆ ರೈತರು ಕಾಯ್ದೆಗಳನ್ನು ಕೈ ಬಿಡುವಂತೆ ಒತ್ತಾಯಿಸುತ್ತಿದ್ದಾರೆ. ಹಲವಾರು ಸುತ್ತಿನ ಸಭೆಗಳು ವಿಫಲವಾಗಿದೆ ಎನ್ನುವುದನ್ನು ನಾವು ವರದಿಯಿಂದ ತಿಳಿದುಕೊಂಡಿದ್ದೇವೆ. ಹಾಗಾಗಿ ಕೇಂದ್ರದ ಸಮಿತಿ ಅಂತಿಮ ನಿರ್ಧಾರಕ್ಕೆ ಬರುವವರೆಗೂ ಕಾಯ್ದೆ ಜಾರಿಗೆ ತಡೆ ನೀಡಬೇಕಿದೆ ಎಂದು ತಿಳಿಸಲಾಗಿದೆ.

    ಇದನ್ನೂ ಓದಿ: ನಿಲ್ಲಿಸಿದ್ದ ಕಾರನ್ನು ಮಹಿಳೆ ಸಹಿತ ಅಪಹರಿಸಿದ ದರೋಡೆಕೋರರು! ಮುಂದೆ ಆದದ್ದು ಭಯಾನಕ…

    ರೈತರಲ್ಲು ಪ್ರತಿಭಟನೆಯ ಸ್ಥಳವನ್ನು ಬದಲಾಯಿಸಿ ಎಂದು ಕೇಳಬಹುದು. ಆದರೆ ಪ್ರತಿಭಟನೆಯನ್ನೇ ನಿಲ್ಲಿಸಿ ಎಂದು ಕೇಳುವ ಹಾಗಿಲ್ಲ. ಪ್ರತಿಭಟನಾ ಸ್ಥಳದಲ್ಲಿ ಆಗುತ್ತಿರುವ ಸಾವು ನೋವಿಗೆ ನಾವೆಲ್ಲರೂ ಕಾರಣರಾಗುತ್ತೇವೆ. ಹಾಗಾಗಿ ಸದ್ಯದ ಮಟ್ಟಿಗೆ ಕಾಯ್ದೆ ಜಾರಿಗೆ ತಡೆ ನೀಡುವುದೇ ಸೂಕ್ತ.

    ಕೇಂದ್ರ ಸರ್ಕಾರಕ್ಕೆ ಜವಾಬ್ದಾರಿಯಿದ್ದರೆ ಮೊದಲು ಕಾಯ್ದೆಯ ಅನುಷ್ಠಾನಕ್ಕೆ ತಡೆ ನೀಡಬೇಕು. ಇಲ್ಲವಾದರೆ ನಾವು ಆ ಕೆಲಸ ಮಾಡಲು ಸಿದ್ಧವಿದ್ದೇವೆ. ಅವರು ತಡೆ ನೀಡದಿದ್ದರೆ, ನಾವು ಈ ಬಗ್ಗೆ ನಿರ್ಧರಿಸಲು ತಜ್ಞರ ಸಮಿತಿ ರೂಪಿಸುತ್ತೇವೆಂದು ಎಂದು ನ್ಯಾಯಾಲಯ ತಿಳಿಸಿದೆ. (ಏಜೆನ್ಸೀಸ್​)

    ಎಂಗೇಜ್ಮೆಂಟ್​ ಆದ್ಮೇಲೆ ಸೆಕ್ಸ್​ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts