More

    ಮಾರ್ಚ್ 15, 16 ರಂದು ದೇಶವ್ಯಾಪಿ ಬ್ಯಾಂಕ್​ ಮುಷ್ಕರಕ್ಕೆ ಕರೆ; ಕೆಲಸವಿದ್ದರೆ ಶುಕ್ರವಾರವೇ ಮುಗಿಸಿಕೊಳ್ಳಿ

    ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಎಸ್​ಬಿಐ ನೇತೃತ್ವದ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯುನಿಯನ್ಸ್​ ಮಾರ್ಚ್​ 15 ಮತ್ತು 16 ರಂದು ಎರಡು ದಿನದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.

    ಈ ಮುಷ್ಕರದಲ್ಲಿ ಯೂನಿಯನ್​ ಬ್ಯಾಂಕುಗಳ ಎಲ್ಲ ಸಿಬ್ಬಂದಿ ಭಾಗವಹಿಸಬೇಕು ಎಂದು ಎಸ್​ಬಿಐ ಕರೆ ನೀಡಿದೆ. ಇದರಿಂದ ಎರಡು ದಿನ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಯಲ್ಲಿ ತೀವ್ರ ವ್ಯತ್ಯಯವಾಗಲಿದೆ.

    ಮಾ 13 ಎರಡನೇ ಶನಿವಾರ, ಮಾ 14 ಭಾನುವಾರ, ಮಾ 15 ಮತ್ತು 16 ರಂದು ಬ್ಯಾಂಕುಗಳ ಮುಷ್ಕರವಿರುವುದರಿಂದ ಗ್ರಾಹಕರು ತಮ್ಮ ಅವಶ್ಯಕ ಬ್ಯಾಕಿಂಗ್ ಕೆಲಸಗಳನ್ನು ಶುಕ್ರವಾರವೇ ಮುಗಿಸಿಕೊಳ್ಳಬೇಕಾಗಿದೆ.

    ಇದನ್ನೂ ಓದಿ: ಸಿ.ಡಿ. ವಿಚಾರ, ಕಾಂಗ್ರೆಸ್ ಮೇಲೆ ಅನುಮಾನ ಎಂದ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು

    ಸರ್ಕಾರಕ್ಕೆ ಆದಾಯದ ಹರಿವು ಹೆಚ್ಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಲದ ಬಜೆಟ್​ನಲ್ಲಿ ಖಾಸಗೀಕರಣವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ. ಈ ದಿಸೆಯಲ್ಲಿ ಮತ್ತಷ್ಟು ಬ್ಯಾಂಕುಗಳನ್ನು ಹಾಗೂ ಒಂದು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಯನ್ನು ಖಾಸಗೀಕರಣಗೊಳಿಸುವ ಮಾತನ್ನಾಡಿದ್ದಾರೆ. ಇದನ್ನು ಖಂಡಿಸಿ ಬ್ಯಾಂಕುಗಳು ಮಾ 15 ಮತ್ತು 16 ರಂದು ದೇಶ ವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿವೆ.

    ಮಹಿಳೆಯರು ಜೀನ್ಸ್​ ಹಾಕಿದ್ರೆ ಊರಿಂದ ಬಹಿಷ್ಕಾರ! ಪುರುಷರಿಗೂ ತಪ್ಪಿದ್ದಲ್ಲ ಶಿಕ್ಷೆ!

    ‘ಮಮತಾ ನಾಟಕವನ್ನು ಸಿಬಿಐ ತನಿಖೆ ನಡೆಸಿ’ ಎಂದ ಬಂಗಾಳ ಬಿಜೆಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts