More

    ಸಿ.ಡಿ. ವಿಚಾರ, ಕಾಂಗ್ರೆಸ್ ಮೇಲೆ ಅನುಮಾನ ಎಂದ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು

    ಬಳ್ಳಾರಿ: ಸಿ.ಡಿ ವಿಚಾರದಲ್ಲಿ ನನಗೆ ಕಾಂಗ್ರೆಸ್ ಮೇಲೆ ಅನುವಾನ ಬರುತ್ತಿದೆ. ಕಾಂಗ್ರೆಸ್ ಬಿಟ್ಟು ಬಂದು ನಮ್ಮ ಸರ್ಕಾರ ರಚನೆಗೆ ಕಾರಣರಾದ ಎಲ್ಲ ಶಾಸಕರನ್ನು ಟಾರ್ಗೆಟ್ ವಾಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.

    ಇದೊಂದು ರಾಜಕೀಯ ಷಡ್ಯಂತರ ಎನ್ನುವ ಸಂದರ್ಭವಿದೆ. ಹೀಗಾಗಿ ಸರ್ಕಾರವು ಎಸ್‌ಐಟಿ ರಚನೆ ವಾಡಿದ್ದು, ಶೀಘ್ರವೇ ವರದಿ ಕೊಡಲಿದೆ ಎಂದು ನಗರದಲ್ಲಿ ಗುರುವಾರ ಬಳ್ಳಾರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬಜೆಟ್ ಸಂಬಂಧ ಕಲಾಪದಲ್ಲಿ ಚರ್ಚೆಗೆ ಬನ್ನಿ ಎಂದು ಕಾಂಗ್ರೆಸ್‌ನವರಿಗೆ ಹೇಳಿದರೆ ಧರಣಿ ವಾಡಲು ಮುಂದಾಗುತ್ತಾರೆ. ಶಾಸಕ ಸಂಗಮೇಶ ಹಕ್ಕುಚ್ಯುತಿ ವಿಚಾರದಲ್ಲಿಯೂ ಒನ್ ನೇಷನ್, ಒನ್ ಎಲೆಕ್ಷನ್ ವಿಚಾರದಡಿ ಚರ್ಚೆ ವಾಡಲಿಲ್ಲ. ಕೇವಲ ಗಲಾಟೆ ವಾಡಿ ಸದನ ನಡೆಯದಂತೆ ವಾಡೋದೇ ಕಾಂಗ್ರೆಸ್ ಕೆಲಸ ಎಂದು ವಾಗ್ದಾಳಿ ನಡೆಸಿದರು.

    ಮೀಸಲು ವಿಚಾರದಲ್ಲಿ ನಿವೃತ್ತ ನ್ಯಾಯಮೂರ್ತಿ ಸುಭಾಷ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಕುರುಬ, ವಾಲ್ಮೀಕಿ, ಪಂಚಮಸಾಲಿ ಮೀಸಲಾತಿ ಕುರಿತು ಸಮಗ್ರ ಅಧ್ಯಯನ ವಾಡಿ ಸರ್ಕಾರಕ್ಕೆ ಸಮಿತಿ ವರದಿ ಸಲ್ಲಿಸಲಿದೆ. ವರದಿ ನಂತರ ಸರ್ಕಾರವು ತನ್ನ ನಿಲುವು ತಿಳಿಸಲಿದೆ ಎಂದು ಶ್ರೀರಾಮುಲು ಹೇಳಿದರು.

    ಸಿ.ಡಿ. ವಿಚಾರ, ಕಾಂಗ್ರೆಸ್ ಮೇಲೆ ಅನುಮಾನ ಎಂದ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು
    ರಾಜಶೇಖರ ಮುಲಾಲಿ

    ಕೇಸ್ ಹಿಂಪಡೆದಿರುವುದು ದುರಂತ
    ಹೊಸಪೇಟೆ: ರಮೇಶ ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿ ಕೇಸ್ ಹಿಂಪಡೆದಿರುವುದರ ಹಿಂದೆ ಷಡ್ಯಂತ್ರವಿದೆ. ಇದು ದುರಂತದ ವಿಷಯ ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ಹೇಳಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದ ಸರ್ಕಾರ ಕೆಡವಿ, ಮತ್ತೊಂದು ಪಕ್ಷ ಆಡಳಿತಕ್ಕೆ ಬರುವಂತೆ ಮಾಡಿದ ಜಾರಕಿಹೊಳಿಯನ್ನು ತುಳಿಯಲು ಯಾರೋ ಈ ರೀತಿಯ ಷಡ್ಯಂತ್ರ ಮಾಡಿದ್ದಾರೆ ಎಂದು ಹೇಳಲು ನಾನೇನು ವಿಧಿವಿಜ್ಞಾನ ಪ್ರಯೋಗಾಲಯದ ವಿಜ್ಞಾನಿ ಅಲ್ಲ. ನನ್ನ ಬಳಿ ಯಾವುದೇ ಸಿಡಿಗಳಿಲ್ಲ. ಸಂತ್ರಸ್ತರು ನನ್ನ ಬಳಿ ಬಂದರೆ ಪ್ರಾಮಾಣಿಕವಾಗಿ ಹೋರಾಡುವುದಾಗಿ ತಿಳಿಸಿದರು. ಬೆಳಗಾವಿಯಲ್ಲಿ ನಡೆವ ಅಧಿವೇಶನದ ಸಂದರ್ಭ ಉತ್ತರ ಕರ್ನಾಟಕದ ಕೆಲ ಶಾಸಕರು ಗೋವಾಕ್ಕೆ ಹೋಗುವ ಅಭ್ಯಾಸವಿಟ್ಟುಕೊಂಡಿದ್ದಾರೆ. ಇದು ಸರಿಯಲ್ಲ. ಮೈಮೇಲೆ ಜ್ಞಾನವಿಟ್ಟುಕೊಳ್ಳಬೇಕು ಎಂದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts