More

    ಮಂಗಳೂರಲ್ಲಿ ಎಸ್‌ಬಿಐ ಬೃಹತ್ ಗೃಹ ಸಾಲ ಹಬ್ಬ

    ಮಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್ ಅ.9 ಮತ್ತು 10ರಂದು ನಗರದ ಟಿಎಂಎ ಪೈ ಕನ್ವೆನ್ಶನಲ್ ಸೆಂಟರ್‌ನಲ್ಲಿ ಬೃಹತ್ ಗೃಹ ಸಾಲ ಹಬ್ಬ ಆಯೋಜಿಸಿದೆ. ಎರಡು ದಿನಗಳ ಈ ಹಬ್ಬದಲ್ಲಿ ನಗರದ 25ಕ್ಕೂ ಹೆಚ್ಚಿನ ಪ್ರಮುಖ ನಿರ್ಮಾಣ ಸಂಸ್ಥೆಗಳು, 40ಕ್ಕೂ ಹೆಚ್ಚಿನ ಪ್ರಾಜೆಕ್ಟ್‌ಗಳೊಂದಿಗೆ ಭಾಗವಹಿಸಲಿವೆ. ಜನತೆ ನಿರ್ಮಾಣ ಸಂಸ್ಥೆಗಳು ಒದಗಿಸುವ ಸೌಲಭ್ಯಗಳನ್ನು ಸ್ಥಳದಲ್ಲಿಯೇ ಹೋಲಿಕೆ ಮಾಡಿ ತಮಗೆ ಸೂಕ್ತವಾದ ಕನಸಿನ ಮನೆಯನ್ನು ಆಯ್ಕೆ ಮಾಡುವ ಜತೆಗೆ ಎಸ್‌ಬಿಐನ ಶೇ.6.70 ಕನಿಷ್ಠ ಬಡ್ಡಿ ದರದ ಸಾಲ ಸೌಲಭ್ಯವನ್ನು ಸ್ಥಳದಲ್ಲಿಯೇ ಪಡೆಯುವ ಅವಕಾಶ ಒದಗಿಸಲಾಗಿದೆ.
    ವಿಶೇಷ ಮನರಂಜನೆ:
    ಗೃಹ ಸಾಲ ಹಬ್ಬದಲ್ಲಿ ವ್ಯವಹಾರ ಚಟುವಟಿಕೆಗಳ ಜತೆಗೆ ಆಗಮಿಸುವ ಗ್ರಾಹಕರ ಪುಟ್ಟ ಮಕ್ಕಳ ಮನರಂಜನೆಯ ಕಡೆಗೂ ವಿಶೇಷ ಗಮನ ನೀಡಿದೆ. ಕಂದಮ್ಮಗಳ ಮನ ಸೆಳೆಯುವ ಅನೇಕ ಕ್ರೀಡಾ ಸಾಮಗ್ರಿ ಹಾಗೂ ಚಾಕೋಲೆಟ್ ಫೌಂಟೇನ್ ಗೃಹ ಸಾಲ ಹಬ್ಬದ ಮೆರುಗು ಹೆಚ್ಚಿಸಲಿದೆ. ಗೃಹ ಸಾಲದ ಜತೆಗೆ ಕಾರು ಸಾಲ, ಚಿನ್ನದ ಸಾಲ, ಶೈಕ್ಷಣಿಕ ಸಾಲ, ಎಸ್‌ಎಂಇ ಸಾಲ, ವೈಯಕ್ತಿಕ ಸಾಲ, ಪಿಂಚಣಿ ಸಾಲ ಇತ್ಯಾದಿ ಸಾಲ ಸೌಲಭ್ಯಗಳ ಬಗ್ಗೆ ಸೂಕ್ತ ರೀತಿ ಮಾಹಿತಿ ಹಾಗೂ ಅರ್ಹತಾ ಮಾನದಂಡಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
    ಗ್ರಾಹಕ ಕೇಂದ್ರಿತ ಸೇವೆ:
    ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರತಿ ಹಂತದಲ್ಲೂ ಗ್ರಾಹಕ ಕೇಂದ್ರಿತ ಸೇವೆಗಳ ಮೂಲಕ ಜನರಿಗೆ ಹೆಚ್ಚು ಹತ್ತಿರವಾಗಿದ್ದು, ದೇಶದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಕಾರಣವಾಗಿದೆ. ವಿಭಿನ್ನ ಗ್ರಾಹಕ ಸ್ನೇಹಿ ಸಾಲ ಸೌಲಭ್ಯಗಳನ್ನು ಜನರಿಗೆ ತಲುಪುವಂತೆ ಮಾಡಲು ವಿನೂತನ ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳುವಲ್ಲಿಯೂ ಸದಾ ಮುಂದಿದೆ. ಪ್ರಸ್ತುತ ಕೇವಲ ಶೇ.6.70 ಬಡ್ಡಿ ದರದಲ್ಲಿ ಗೃಹ ಸಾಲವನ್ನು ಒದಗಿಸುತ್ತಿರುವ ಪ್ರಮುಖ ಬ್ಯಾಂಕ್ ಎಂಬ ಹೆಗ್ಗಳಿಕೆ ಹೊಂದಿದೆ. ಗೃಹ ಸಾಲ ಹಬ್ಬದ ಮೂಲಕ ಮಂಗಳೂರಿನ ಜನರ ಸ್ವಂತ ಮನೆ ಖರೀದಿಸುವ ಕನಸು ನನಸಾಗಿಸಲು ಅತ್ಯುತ್ತಮ ಅವಕಾಶ ಕಲ್ಪಿಸಿದೆ ಎಂದು ಪ್ರಕಟಣೆ ತಿಳಿಸಿದೆ.

    ಮಂಗಳೂರಲ್ಲಿ ಎಸ್‌ಬಿಐ ಬೃಹತ್ ಗೃಹ ಸಾಲ ಹಬ್ಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts