More

    ಇಎಂಐ ಪಾವತಿಗೆ ವಿನಾಯ್ತಿ ಓಕೆ, ಆದರೆ ಬಡ್ಡಿ ಏಕೆ?

    ನವದೆಹಲಿ: ಕೋವಿಡ್​-19 ಲಾಕ್​ಡೌನ್​ನಿಂದಾಗಿ ದೇಶಾದ್ಯಂತ ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ವಾಹನ, ಗೃಹ ಮತ್ತು ಕ್ರೆಡಿಟ್​ಕಾರ್ಡ್​ಗಳ ಇಎಂಐ ಪಾವತಿಗೆ ಆಗಸ್ಟ್​ 31ರವರೆಗೆ ವಿನಾಯ್ತಿ ನೀಡಿದೆ. ಆದರೂ ಬ್ಯಾಂಕ್​ಗಳು ಈ ಅವಧಿಯಲ್ಲಿನ ಇಎಂಐಗಳ ಪಾವತಿ ಮೇಲೆ ಹೆಚ್ಚುವರಿ ಬಡ್ಡಿ ವಿಧಿಸುತ್ತಿವೆ.

    ಈ ವಿಷಯವನ್ನು ಪ್ರಸ್ತಾಪಿಸಿ, ವಿನಾಯ್ತಿಯ ಅವಧಿಯಲ್ಲಿ ಇಎಂಐಗಳ ಮೇಲೆ ಹೆಚ್ಚುವರಿ ಬಡ್ಡಿ ವಿಧಿಸದಂತೆ ಬ್ಯಾಂಕ್​ಗಳಿಗೆ ಸೂಚಿಸಬೇಕು ಎಂದು ಮನವಿ ಮಾಡಿಕೊಂಡು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​, ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಆರ್​ಬಿಐಗೆ ನೋಟಿಸ್​ ಜಾರಿ ಮಾಡಿದೆ.

    ಇದನ್ನೂ ಓದಿ: ಎರಡು ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಅಪಾಯಕಾರಿ: ವೈದ್ಯರ ಸಂಸ್ಥೆ ಎಚ್ಚರಿಕೆ

    ದೇಶಾದ್ಯಂತ ಲಾಕ್​ಡೌನ್​ ಘೋಷಣೆಯಾದ ಬೆನ್ನಲ್ಲೇ ಮಾರ್ಚ್​ 27ರಂದು ಆರ್​ಬಿಐ ವಾಹನ, ಗೃಹ ಮತ್ತು ಟರ್ಮ್​ ಲೋನ್​ ಅಲ್ಲದೆ ಕ್ರೆಡಿಟ್​ಕಾರ್ಡ್​ಗಳ ಇಎಂಐ ಪಾವತಿಗೆ ಮೂರು ತಿಂಗಳು ವಿನಾಯ್ತಿ ನೀಡುವುದಾಗಿ ಘೋಷಿಸಿತ್ತು. ಆದರೆ, ಇಎಂಐ ಪಾವತಿಯ ವಿನಾಯ್ತಿ ಪಡೆದುಕೊಂಡರೆ, ಅವುಗಳ ಮೇಲೆ ಹೆಚ್ಚುವರಿ ಬಡ್ಡಿ ವಿಧಿಸುವುದಾಗಿ ಬ್ಯಾಂಕ್​ಗಳು ಹೇಳಿದ್ದವು. ಈ ಹಿನ್ನೆಲೆಯಲ್ಲಿ ಗ್ರಾಹಕರು ವಿನಾಯ್ತಿ ಸೌಲಭ್ಯ ಪಡೆದುಕೊಳ್ಳುವ ಬದಲು ಇಎಂಐ ಪಾವತಿಸಲು ಮುಂದಾಗಿದ್ದರು.

    ಕಳೆದ ವಾರ ಮತ್ತೊಮ್ಮೆ ಮೂಲಾಂಶವನ್ನು ಕಡಿತಗೊಳಿಸುವ ಘೋಷಣೆ ಮಾಡಿದ್ದ ಆರ್​ಬಿಐನ ಮುಖ್ಯಸ್ಥ ಶಕ್ತಿಕಾಂತ ದಾಸ್​, ಇಎಂಐ ಪಾವತಿಗಳ ವಿನಾಯ್ತಿ ಸೌಲಭ್ಯವನ್ನು ಆಗಸ್ಟ್​ 31ರವರೆಗೆ ವಿಸ್ತಿರಿಸಿದ್ದರು.

    VIDEO/ ಕೊನೆಗೂ ಸೇಡು ತೀರಿಸಿಕೊಂಡ ಎಮ್ಮೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts